ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಇಂದು ಹೊಸದಾಗಿ 12 ಪ್ರಕರಣಗಳು ದೃಢಪಟ್ಟ ಮಾಹಿತಿಯನ್ನು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ಹಾಗೂ ಅವರ ಪ್ರಾಥಮಿಕ ಸಂಪರ್ಕಿತರಿಗೆ ಕೋವಿಡ್ ಒಮಿಕ್ರಾನ್ ತಳಿ ಹರಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನ ಪ್ರಕರಣ ಹಾಗೂ ಮೈಸೂರಿನ ಪ್ರಕರಣ ಇದೆ.
ಹೊಸ ಪ್ರಕರಣಗಳ ಮಾಹಿತಿ
ಒಮಿಕ್ರಾನ್ ಸೋಂಕಿತ ಸಂಖ್ಯೆ-20
ಬೆಂಗಳೂರು ನಗರ ಜಿಲ್ಲೆಯ ನಿವಾಸಿಯಾದ 20 ವರ್ಷದ ಮಹಿಳೆ ಕೊವಿಡ್ ಪರೀಕ್ಷೆ ನಡೆಸಿದಾಗ ಡಿಸೆಂಬರ್ 15 ರಂದು ಪಾಸಿಟಿವ್ ಬಂದಿದ್ದು, ಜಿನೊಮ್ ಸೀಕ್ವೆನ್ಸಿಂಗ್ ವರದಿ ಪ್ರಕಾರ 22 ರಂದು ಒಮಿಕ್ರಾನ್ ಎಂದು ದೃಢಪಟ್ಟಿದೆ. ಇವರ ಅಕ್ಕ ಯುಕೆಯಿಂದ ವಾಪಾಸ್ಸಾಗಿದ್ದು, ಕೋವಿಡ್ ದೃಢಪಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ಹರಡಿದೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ- 21
ಯುಕೆಯಿಂದ ವಾಪಾಸ್ಸಾದ ಮಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ 56 ವರ್ಷದ ತಂದೆಗೂ ಕೋವಿಡ್ ಒಮಿಕ್ರಾನ್ ದೃಢಪಟ್ಟಿದೆ. ಕೋವ್ಯಾಕ್ಸಿನ್ ಎರಡೂ ಡೋಸ್ ಹಾಕಿಸಿಕೊಂಡಿದ್ದರೂ ಮಗಳಿಗೆ ಪಾಸಿಟಿವ್ ದೃಢಪಟ್ಟ ಹಿನ್ನೆಲೆ, ಖಾಸಗಿ ಲ್ಯಾಬ್ ನಿಂದ ಸ್ಯಾಂಪಲ್ ಪಡೆದು ಕೋವಿಡ್ ಟೆಸ್ಟ್ ನಡೆಸಿದಾಗ ಈ ವ್ಯಕ್ತಿಗೂ ಡಿ.12 ರಂದು ಕೋವಿಡ್ ದೃಢಪಟ್ಟಿದೆ. ಡಿ.22 ರಂದು ಒಮಿಕ್ರಾನ್ ದೃಢಪಟ್ಟಿದೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ- 22
ಇವರೂ ಕೂಡಾ ಡಿ.12 ರಂದು ಯುಕೆ ಯಿಂದ ವಾಪಾಸ್ಸಾದ ಮಗಳ ಪ್ರಥಮ ಸಂಪರ್ಕಿತರಾಗಿದ್ದು, ತಾಯಿಗೂ ಡಿ.15 ರಂದು ಪಾಸಿಟಿವ್ ಬಂದಿದೆ. 54 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಕೋವಿಶೀಲ್ಡ್ ಎರಡೂ ಡೋಸ್ ಪಡೆದಿದ್ದರು. 22 ರಂದು ಒಮಿಕ್ರಾನ್ ದೃಢಪಟ್ಟಿದೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ-23
27 ವರ್ಷದ ಪುರುಷನಿಗೆ ಡಿ.16 ರಂದು ಕೋವಿಡ್ ದೃಢಪಟ್ಟಿದ್ದು, 22 ರಂದು ಒಮಿಕ್ರಾನ್ ಪತ್ತೆಯಾಗಿದೆ. ದುಬೈ ನ ಗಾನಾ ದಿಂದ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸಿ, ಮಂಗಳೂರು ಏರ್ ಪೋರ್ಟ್ ನಲ್ಲಿ ಕೋವಿಡ್ ಟೆಸ್ಟ್ ನಡೆಸಿದ್ದಾರೆ. ಇವರು ಬೆಂಗಳೂರು ನಿವಾಸಿಯಾಗಿದ್ದಾರೆ. ಏರ್ಪೋರ್ಟ್ ಗೆ ಬಂದ ಡಿ.16 ರಂದೇ ಏರ್ಪೋರ್ಟ್ ನಲ್ಲಿ ಕೋವಿಡ್ ಟೆಸ್ಟ್ ನಡೆಸಿದ್ದು, ಆಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸಂಪರ್ಕಕ್ಕೆ 26 ಪ್ರಾಥಮಿಕ ಸಂಪರ್ಕಿತರು ಬಂದಿದ್ದು, ಈ ಪೈಕಿ ದಕ್ಷಿಣ ಕನ್ನಡದ 17 ಮಂದಿ, ಉಡುಪಿ-5, ಶಿವಮೊಗ್ಗ-1, ಚಿಕ್ಕಮಗಳೂರು-1, ಉತ್ತರ ಕನ್ನಡ-1 , ಮೈಸೂರಿನ ಓರ್ವ ಸಂಪರ್ಕಿತರಿದ್ದಾರೆ. ದಕ್ಷಿಣ ಕನ್ನಡದ ಎಲ್ಲಾ 17 ಮಂದಿಗೆ ನೆಗೆಟಿವ್ ಬಂದಿದೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ-24
31 ವರ್ಷದ ವ್ಯಕ್ತಿ ಬೆಂಗಳೂರು ನಿವಾಸಿಯಾಗಿದ್ದು, ಯುಕೆಯಿಂದ 17 ರಂದು ಪ್ರಯಾಣಿಸಿದ್ದು, ಬೆಂಗಳೂರು ಏರ್ಪೋರ್ಟ್ ನಲ್ಲಿ ಅದೇ ದಿನ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ನಂತರ 22 ರಂದು ಒಮಿಕ್ರಾನ್ ಪತ್ತೆಯಾಗಿದೆ. ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ, 6 ಮಂದಿ ಪ್ರಾಥಮಿಕ ಸಂಪರ್ಕಿತರಿದ್ದಾರೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ -25
ಕೇರಳ ನಿವಾಸಿಯಾದ 42 ವರ್ಷದ ವ್ಯಕ್ತಿ ಯುಕೆಯಿಂದ 17 ರಂದು ಬೆಂಗಳೂರು ಏರ್ಪೊರ್ಟ್ ಗೆ ಬಂದಿದ್ದರು. ಏರ್ಪೋರ್ಟ್ ನಲ್ಲೆ ಟೆಸ್ಟ್ ಮಾಡಿದಾಗ ಅದೇ ದಿನ ಪಾಸಿಟಿವ್ ಬಂದಿದೆ. ನಿನ್ನೆ ಒಮಿಕ್ರಾನ್ ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿದ್ದು, ಎ ಸಿಮ್ಟಮ್ಯಾಟಿಕ್ ಆಗಿದ್ದಾರೆ. ಆರು ಮಂದಿ ಪ್ರಾಥಮಿಕ ಸಂಪರ್ಕಿತರಿದ್ದಾರೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ -26
18 ವರ್ಷದ ಯುವತಿ 17 ರಂದು ಯುಕೆಯಿಂದ ಬೆಂಗಳೂರು ಏರ್ಪೋರ್ಟ್ ಗೆ ವಾಪಾಸ್ಸಾಗಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, ನಿನ್ನೆ ಜೀನೊಮ್ ಸೀಕ್ವೆನ್ಸಿಂಗ್ ನಲ್ಲಿ ಒಮಿಕ್ರಾನ್ ದೃಢಪಟ್ಟಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರು ಮಂದಿ ಪ್ರಾಥಮಿಕ ಸಂಪರ್ಕಿತರಿದ್ದಾರೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ - 27
21 ವರ್ಷದ ಯುವಕ ಯುಕೆಯಿಂದ ಬೆಂಗಳೂರಿಗೆ ಬಂದಾಗ 17 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ನಿನ್ನೆ ಒಮಿಕ್ರಾನ್ ದೃಢಪಟ್ಟಿದೆ. ಕೇರಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ -28
ಡೆನ್ಮಾರ್ಕ್ ನಿಂದ ವಾಪಾಸ್ಸಾದ 49 ವರ್ಷದ ಮಹಿಳೆಗೆ ಒಮಿಕ್ರಾನ್ ದೃಢಪಟ್ಟಿದೆ. ಇವರು ಎರಡು ಡೋಸ್ ವ್ಯಾಕ್ಸಿನ್+ ಬೂಸ್ಟರ್ ಫೈಝರ್ ಡೋಸ್ ಹಾಗೂ ಬೂಸ್ಟರ್ ಮೆಡರ್ನಾ ಪಡೆದಿದ್ದರೂ ಏರ್ಪೊರ್ಟ್ ನಲ್ಲಿ ಪರೀಕ್ಷಿಸಿದಾಗ 17 ರಂದು ಪಾಸಿಟಿವ್ ದೃಢಪಟ್ಟಿದ್ದು, ನಿನ್ನೆ ಒಮಿಕ್ರಾನ್ ದೃಢಪಟ್ಟಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ-29
11 ವರ್ಷದ ಬಾಲಕಿ ಯುಕೆಯಿಂದ 18 ರಂದು ವಾಪಾಸ್ ಅಗಿದ್ದು, ಏರ್ಪೋರ್ಟ್‌ನಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ನಿನ್ನೆ ಒಮಿಕ್ರಾನ್ ದೃಢಪಟ್ಟಿದೆ. ಎ ಸಿಮ್ಟಮ್ಯಾಟಿಕ್ ಆಗಿದ್ದಾರೆ. ಆರು ಮಂದಿ ಪ್ರಾಥಮಿಕ ಸಂಪರ್ಕಿತರಿದ್ದಾರೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ-30
ನೈಜೀರಿಯಾದಿಂದ ಬೆಂಗಳೂರಿಗೆ ವಾಪಾಸ್ಸಾದ 59 ವರ್ಷದ ಮಹಿಳೆಗೆ 18 ರಂದು ಪಾಸಿಟಿವ್ ದೃಢಪಟ್ಟಿದ್ದು, ನಿನ್ನೆ ಒಮಿಕ್ರಾನ್ ದೃಢಪಟ್ಟಿದೆ. ಬೌರಿಂಗ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಮಿಕ್ರಾನ್ ಸೋಂಕಿತ ಸಂಖ್ಯೆ - 31
9 ವರ್ಷದ ಬಾಲಕಿ ಸ್ವಿಟ್ಜರ್ಲೆಂಡ್ ನಿಂದ ದುಬೈ ಮೂಲಕ ಬೆಂಗಳೂರು ಏರ್ಪೊರ್ಟ್‌ಗೆ 19 ರಂದು ಬಂದಿದ್ದರು. ಅಂದು ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ನಿನ್ನೆ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ಇವರು ಮೈಸೂರು ನಿವಾಸಿಯಾಗಿದ್ದು ಬೌರಿಂಗ್ ನಿಂದ ಮೈಸೂರ್ ಗೆ ಸ್ಥಳಾಂತರಗೊಂಡು ಐಸೋಲೇಷನ್ ನಲ್ಲಿ ಇದ್ದಾರೆ.