ETV Bharat / state

ರೈತರ ಬೆಳೆ ಹಾನಿಗೆ 1,035 ಕೋಟಿ ರೂ. ನೀಡಲು ತೀರ್ಮಾನ: ಸಚಿವ ಆರ್​​.ಅಶೋಕ್​​ - ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ 500 ಕೋಟಿ ರೂ. ಬಿಡುಗಡೆ

ಕೇಂದ್ರದಿಂದ ಬಂದಿರುವ 1,200 ಕೋಟಿ ರೂ. ನೆರೆ ಪರಿಹಾರದಲ್ಲಿ ರೈತರ ಬೆಳೆ ಹಾನಿಗೆ 1,035 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸಚಿವ ಆರ್.ಅಶೋಕ್
author img

By

Published : Oct 9, 2019, 4:56 PM IST

ಬೆಂಗಳೂರು: ಕೇಂದ್ರದಿಂದ ಬಂದಿರುವ 1,200 ಕೋಟಿ ರೂ. ನೆರೆ ಪರಿಹಾರದಲ್ಲಿ ರೈತರ ಬೆಳೆ ಹಾನಿಗೆ 1,035 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ನೆರೆ ಹಾಗೂ ಬರ ಸಂಬಂಧದ ಸಂಪುಟ ಉಪ ಸಮತಿ ಸಭೆ ಬಳಿಕ ಮಾತನಾಡಿದ ಅವರು, ಉಳಿದ ಹಣವನ್ನು ಶಾಲೆ, ಜಿಲ್ಲಾ ಪಂಚಾಯ್ತಿ, ರಸ್ತೆ ಅಭಿವೃದ್ಧಿಗೆ ನೀಡಲು ತೀರ್ಮಾನಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ 500 ಕೋಟಿ ರೂ. ಬಿಡುಗಡೆಯಾಗಿದ್ದು, ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆ ಪೈಕಿ 50 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಟೆಂಡರ್ ಇಲ್ಲದೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಸಚಿವ ಆರ್.ಅಶೋಕ್

ಈ ಬಾರಿ ವಾಡಿಕೆ ಮಳೆಗಿಂತ ಶೇ. 15ರಷ್ಟು ಹೆಚ್ಚು ಆಗಿದೆ. ಎನ್​​ಡಿಆರ್​​ಎಫ್ ನಿಯಮದ ಪ್ರಕಾರ ಪೆಟ್ಟಿಗೆ ಅಂಗಡಿ ಹಾಗೂ ಮಗ್ಗದ ಮಳಿಗೆಗಳು, ಗುಡಿಸಲುಗಳಿಗೆ ಕೇಂದ್ರ ಸರ್ಕಾರದಿಂದ ಹಣ ಬರುವುದಿಲ್ಲ. ಅದನ್ನು ರಾಜ್ಯ ಸರ್ಕಾರದಿಂದ ನೀಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನಿಸಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಇಂತಹ ಸಣ್ಣಪುಟ್ಟ ಅಂಗಡಿಗಳು ಸುಮಾರು 1,200 ಇದ್ದರೆ, ಸುಮಾರು 3,000 ಗುಡಿಸಲುಗಳು ಹಾನಿಯಾಗಿರಬಹುದು. ಇವುಗಳಿಗೆ ಎಷ್ಟು ಪರಿಹಾರ ಕೊಡಬೇಕು ಎನ್ನುವುದನ್ನು ಸಿಎಂ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ವಿವರಿಸಿದರು.

ಬರದ ಹಿನ್ನೆಲೆಯಲ್ಲಿ 1,029 ಕೋಟಿ ರೂ. ಹಣವನ್ನು ರೈತರಿಗೆ ನೀಡಲು ಸೂಚನೆ ನೀಡಲಾಗಿದೆ. ಬರ ತಾಲೂಕುಗಳ ಪಟ್ಟಿ ಸಿದ್ಧ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಕ್ಟೋಬರ್ 30ರೊಳಗೆ ಬರ ತಾಲೂಕುಗಳ ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ 1,200 ಕೋಟಿ ರೂ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೊಡಗು ಅತಿವೃಷ್ಟಿ ಪರಿಹಾರಕ್ಕೆ ಕೇಳಿದ್ದ ಅನುದಾನ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ. ಅದಕ್ಕೂ ಈ ಪರಿಹಾರ ಮೊತ್ತಕ್ಕೂ ಸಂಬಂಧ ಇಲ್ಲ. ಇದು ಈ ಬಾರಿಯ ನೆರೆ ಪರಿಹಾರವಾಗಿ ಬಿಡುಗಡೆಯಾದ ಮೊತ್ತವಾಗಿದೆ. ಕೊಡಗು ಪ್ರವಾಹಕ್ಕೂ ಈ ಹಣಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ದೇವೇಗೌಡರಾಗಲಿ, ಜೆಡಿಎಸ್ ಪಕ್ಷವಾಗಲಿ ಯಾವುದೇ ಗೊಂದಲಕ್ಕೀಡಾಗುವುದು ಬೇಡ ಎಂದು ಸ್ಪಷ್ಟಪಡಿಸಿದರು.

Intro:Body:KN_BNG_03_SUBCOMMITTEE_RASHOK_SCRIPT_7201951

ರೈತರ ಬೆಳೆ ಹಾನಿಗೆ 1035 ಕೋಟಿ ರೂ. ನೀಡಲು ತೀರ್ಮಾನ: ಸಚಿವ ಆರ್.ಅಶೋಕ್

ಬೆಂಗಳೂರು: ಕೇಂದ್ರದಿಂದ ಬಂದಿರುವ 1200 ಕೋಟಿ ರೂ. ಪೈಕಿ ರೈತರ ಬೆಳೆ ಹಾನಿಗೆ 1035 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ನೆರೆ ಹಾಗೂ ಬರ ಸಂಬಂಧದ ಸಂಪುಟ ಉಪಸಮತಿ ಸಭೆ ಬಳಿಕ ಮಾತನಾಡಿದ ಅವರು, ಉಳಿದ ಹಣವನ್ನು ಶಾಲೆ, ಜಿಲ್ಲಾ ಪಂಚಾಯತಿ ರಸ್ತೆ ಅಭಿವೃದ್ಧಿಗೆ ನೀಡಲು ತೀರ್ಮಾನಿಸಲಾಗಿದೆ. ಲೋಕೋಪಯೋಗಿಯಿಂದ ಈಗಾಗಲೇ 500 ಕೋಟಿ ರೂ. ಬಿಡುಗಡೆಯಾಗಿದ್ದು ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆ ಪೈಕಿ 50 ಲಕ್ಷ ರೂ. ವರೆಗಿನ ಕಾಮಗಾರಿಗಳನ್ನು ಟೆಂಡರ್ ಇಲ್ಲದೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಈ ಬಾರಿ ವಾಡಿಕೆ ಮಳೆಗಿಂತ, 15 ಶೇ. ರಷ್ಟು ಹೆಚ್ಚಳ ಆಗಿದೆ. ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಪೆಟ್ಟಿಗೆ ಅಂಗಡಿ ಹಾಗೂ ಮಗ್ಗದ ಮಳಿಗೆಗಳು ಹಾಗು ಗುಡಿಸಲುಗಳಿಗೆ ಕೇಂದ್ರ ಸರ್ಕಾರದಿಂದ ಹಣ ಬರುವುದಿಲ್ಲ. ಅದನ್ನು ರಾಜ್ಯ ಸರ್ಕಾರದಿಂದ ನೀಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನಿಸಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಇಂಥ ಸಣ್ಣಪುಟ್ಟ ಅಂಗಡಿಗಳು ಸುಮಾರು 1200ಗಳಿದ್ದರೆ, ಗುಡಿಸಲುಗಳು ಸುಮಾರು 3000 ಹಾನಿಯಾಗಿರಬಹುದು. ಇವುಗಳಿಗೆ ಎಷ್ಟು ಪರಿಹಾರ ಕೊಡಬೇಕು ಎನ್ನುವುದನ್ನು ಸಿಎಂ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ವಿವರಿಸಿದರು.

ಬರದ ಹಿನ್ನಲೆಯಲ್ಲಿ 1029 ಕೋಟಿ ರೂ. ಹಣವನ್ನು ರೈತರಿಗೆ ನೀಡಲು ಸೂಚನೆ ನೀಡಲಾಗಿದೆ. ಬರ ತಾಲೂಕುಗಳ ಪಟ್ಟಿ ಸಿದ್ಧ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಕ್ಟೋಬರ್ 30 ರೊಳಗೆ ಬರ ತಾಲೂಕುಗಳ ಪಟ್ಟಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಕೇಂದ್ರ ಸರ್ಕಾರ ಬಿಡುಗಡೆ ಗೊಳಿಸಿದ 1200 ಕೋಟಿ ರೂ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೊಡಗು ಅತಿವೃಷ್ಟಿ ಪರಿಹಾರಕ್ಕೆ ಕೇಳಿದ್ದ ಅನುದಾನ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ. ಅದಕ್ಕೂ ಈ ಪರಿಹಾರ ಮೊತ್ತಕ್ಕೂ ಸಂಬಂಧ ಇಲ್ಲ‌. ಇದು ಈ ಬಾರಿಯ ನೆರೆ ಪರಿಹರವಾಗಿ ಬಿಡುಗಡೆಯಾದ ಮೊತ್ತವಾಗಿದೆ. ಕೊಡಗು ಪ್ರವಾಹಕ್ಕೂ ಈ ಹಣಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ದೇವೇಗೌಡರಾಗಲಿ, ಜೆಡಿಎಸ್ ಪಕ್ಷವಾಗಲಿ ಯಾವುದೇ ಗೊಂದಲಕ್ಕೀಡಾಗುವುದು ಬೇಡ ಎಂದು ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.