ETV Bharat / state

ದೊಡ್ಡಬಳ್ಳಾಪುರ: ಬೆಕ್ಕಿನ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ - young man died touching powerline

ಮರದ ನಡುವೆ ಹಾದು ಹೋಗಿದ್ದ ವಿದ್ಯುತ್​ ತಂತಿಯನ್ನು ಗಮನಿಸದೆ ಯುವಕ ಅದೇ ತಂತಿಯನ್ನು ಕೈಯಲ್ಲಿ ಹಿಡಿದು ಮೃತಪಟ್ಟ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.

young-man-died-touching-powerline while-saving-cat
ಬೆಕ್ಕಿನ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ
author img

By ETV Bharat Karnataka Team

Published : Sep 22, 2023, 6:25 PM IST

Updated : Sep 22, 2023, 7:14 PM IST

ಬೆಕ್ಕಿನ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಯುವಕ

ದೊಡ್ಡಬಳ್ಳಾಪುರ: ಮರದ ಕೊಂಬೆಗಳ ನಡುವೆ ಸಿಲುಕೊಂಡಿದ್ದ ಬೆಕ್ಕಿನ ಮರಿಯನ್ನು ಕಾಪಾಡಲು ಹೋದ ಯುವಕನೊಬ್ಬ ವಿದ್ಯುತ್​ ಶಾಕ್​ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾಲಿನ ಡೈರಿ ಮುಂಭಾಗದಲ್ಲಿ ನಡೆದಿದೆ. ನಡೆದಿದೆ. ರೋಷನ್​ (21) ವಿದ್ಯುತ್​ ತಾಗಿ ಸಾವನ್ನಪ್ಪಿರುವ ಯುವಕ ಎಂದು ಗುರುತಿಸಲಾಗಿದೆ.

ಮೃತ ಯುವಕ ನಗರದ ಇಸ್ಲಾಂಪುರದ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಇದಾಯತ್​ ಎಂಬವರ ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ. ಪ್ರಾಣಿ ಪಕ್ಷಿಗಳನ್ನು ಇಷ್ಟಪಡುತ್ತಿದ್ದ ಆತ, ಗ್ಯಾರೇಜ್​ ಬಳಿ ಕೋಳಿಗಳು ಹಾಗೂ ಬೆಕ್ಕನ್ನು ಸಾಕಿಕೊಂಡಿದ್ದ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬೆಕ್ಕಿನ ಮರಿ, ಇಂದು ಮಧ್ಯಾಹ್ನ ಮರದ ಕೊಂಬೆಗಳ ನಡುವೆ ಸಿಲುಕಿಕೊಂಡಿದ್ದು ಕಾಣಿಸಿದೆ. ಅದನ್ನು ಕೊಂಬೆಗಳ ನಡುವಿನಿಂದ ಕಾಪಾಡಲು ಮರ ಹತ್ತಿದ ರೋಷನ್​ಗೆ ಅಲ್ಲೇ ಹಾದು ಹೋಗಿದ್ದ ವಿದ್ಯುತ್​ ತಂತಿ ತಗುಲಿ, ಮರದಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿದ್ದು, ಶವವನ್ನು ಮರದಿಂದ ಕೆಳಗಿಳಿಸಿದ್ದಾರೆ. ಅಲ್ಲದೇ, ಸ್ಥಳದಲ್ಲಿ ಅನೇಕ ಜನರು ಜಮಾವಣೆಗೊಂಡಿದ್ದರು.

ಪ್ರತ್ಯಕ್ಷದರ್ಶಿ ಲಕ್ಷಣ್ ಮಾತನಾಡಿ, "ಬೆಕ್ಕು ಮರದ ಕೊಂಬೆಗಳ ಮಧ್ಯೆ ಸಿಲುಕಿಕೊಂಡಿತ್ತು. ಈ ಹುಡುಗ ಬೆಕ್ಕು ಕೆಂಬೆಯಲ್ಲಿ ಸಿಲುಕಿಕೊಂಡಿರುವುದನ್ನು ನೋಡಿದ ಗಾಬರಿಗೆ ಮೇಲೆ ವಿದ್ಯುತ್​ ತಂತಿ ಇರುವುದನ್ನು ಗಮನಿಸಿಲ್ಲ. ಮರದ ಪಕ್ಕರದಲ್ಲೆ 11 ಕೆವಿ ವಿದ್ಯುತ್​ ತಂತಿ ಹಾದು ಹೋಗಿದೆ. ಮರಕ್ಕೆ ಹತ್ತಿದವನು, ಮರದ ಕೊಂಬೆ ಎಂದುಕೊಂಡು ವಿದ್ಯುತ್​ ತಂತಿಯನ್ನೇ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ವಿದ್ಯುತ್​ ಅವನ ಮೈಮೇಲೆ ಪ್ರವಹಿಸಿ ಮರದಲ್ಲೇ ಅತನ ಪ್ರಾಣ ಕಳೆದುಕೊಂಡಿದ್ದಾನೆ" ಎಂದು ತಿಳಿಸಿದ್ದಾರೆ.

ಗ್ಯಾರೇಜ್ ಮಾಲೀಕ ಇದಾಯತ್ ಮಾತನಾಡಿ, "ಕಳೆದ ಎರಡು- ಮೂರು ವರ್ಷಗಳಿಂದ ಆತ ನಮ್ಮ ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ. ಅವನೇ ಬೆಕ್ಕು ಸಾಕಿಕೊಂಡಿದ್ದ, ಅದು ಇಲ್ಲೇ ಇರುತ್ತಿತ್ತು. ಎರಡು ದಿನಗಳಿಂದ ಬೆಕ್ಕು ಕಾಣಿಸುತ್ತಿರಲಿಲ್ಲ. ಇವತ್ತು ಮರದ ಮೇಲೆ ಕಾಣಿಸಿಕೊಂಡಿತ್ತು. ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಬಂದಿದ್ದ, ನಂತರ ಮನೆಗೆ ಹೋಗಿ ಸ್ನಾನ ಮಾಡಿ, ಮತ್ತೆ 12 ಗಂಟೆಗೆ ಬಂದ. ಬಂದವನು ಜ್ಯೂಸ್​ ತಂದು ಕೊಟ್ಟು, ಬೆಕ್ಕನ್ನು ಬಿಡಿಸಲು ಮರಕ್ಕೆ ಹತ್ತಿದ್ದ, ಬೆಕ್ಕಿನ ಪ್ರಾಣ ಕಾಪಾಡಲು ಮರಕ್ಕೆ ಹತ್ತಿದ್ದವನಿಗೆ ಹೀಗಾಯಿತು'' ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳ ರಕ್ಷಿಸಿದ ಪವರ್‌ಮ್ಯಾನ್

Last Updated : Sep 22, 2023, 7:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.