ETV Bharat / state

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಬ್ಲೇಡ್‌ ಅಟ್ಯಾಕ್‌; ತಾನೂ ಕತ್ತು ಕುಯ್ದುಕೊಂಡ ಕಿಡಿಗೇಡಿ - ಯುವತಿ ಮೇಲೆ ಯುವಕ ಹಲ್ಲೆ

ಪ್ರೀತಿ ನಿರಾಕರಿಸಿದಳೆಂದು ಯುವತಿ ಮೇಲೆ ಯುವಕನೋರ್ವ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

woman was assaulted by boyfriend
ಪ್ರೇಯಸಿ ಮೇಲೆ ಹಲ್ಲೆ
author img

By

Published : Dec 23, 2022, 6:23 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಪ್ರೀತಿಸಲು ಒಪ್ಪುತ್ತಿಲ್ಲ ಎಂದು ಕಿಡಿಗೇಡಿ​ ಪ್ರೇಮಿಯೊಬ್ಬ ಯುವತಿಯ ಮನೆಗೆ ತೆರಳಿ ಬ್ಲೇಡ್​ನಿಂದ ಆಕೆಯ ಮೇಲೆ ಹಲ್ಲೆ ಮಾಡಿ, ತಾನೂ ಕತ್ತು ಕುಯ್ದುಕೊಂಡಿದ್ದಾನೆ. ಈ ಘಟನೆ ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಂತಾಮಣಿ ಮೂಲದ ಆರೋಪಿ ಮಂಜುನಾಥ್ ಇನ್ಸ್​ಟಾಗ್ರಾಂನಲ್ಲಿ ಪರಿಚಯವಾಗಿದ್ದ ಯುವತಿಯೊಂದಿಗೆ ಸಂಪರ್ಕದಲ್ಲಿದ್ದ. ಕೆಲವು ತಿಂಗಳ ಕಾಲ ಫೋನ್​ನಲ್ಲಿ ಚಾಟಿಂಗ್ ಮಾಡಿಕೊಂಡಿದ್ದು, ಬಳಿಕ ಇಬ್ಬರೂ ಭೇಟಿಯಾಗಿದ್ದರು. ಯುವತಿಗೆ ಆರೋಪಿ​ ಫೋನ್​ ಖರೀದಿಸಿ ಕೊಟ್ಟಿದ್ದನಂತೆ.

ಇವರ ಪ್ರೀತಿಯ ವಿಚಾರ ಮನೆಯವರಿಗೆ ತಿಳಿದು ಯುವತಿಗೆ ಕುಟುಂಬಸ್ಥರು ಬುದ್ದಿವಾದ ಹೇಳಿದ್ದಾರೆ. ಯುವತಿಯನ್ನು ಮಂಜುನಾಥ್‌ನಿಂದ ದೂರ ಇರುವಂತೆ ಹೇಳಿ ಹೊಸಕೋಟೆ ಬಳಿ ಅತ್ತೆಯ ಮನೆಗೆ ಕಳುಹಿಸಿದ್ದರು. ಈ ವಿಚಾರ ತಿಳಿದ ಮಂಜುನಾಥ್​, ಯುವತಿ ಇರುವ ಸ್ಥಳಕ್ಕೆ ಹೋಗಿ ತನ್ನ ಜೊತೆ ಬರುವಂತೆ ಒತ್ತಾಯಿಸಿದ್ದಾನೆ. ಆಕೆ ಬರಲೊಪ್ಪದೇ ಇದ್ದುದಕ್ಕೆ ಕೋಪಗೊಂಡು ಬ್ಲೇಡ್‌ನಿಂದ ಆಕೆಯ ಹಲ್ಲೆ ಮಾಡಿ ಬಳಿಕ ತಾನೂ ಕತ್ತು ಕುಯ್ದುಕೊಂಡಿದ್ದಾನೆ. ಕೂಡಲೇ ಇಬ್ಬರನ್ನು ಖಾಸಗಿ ಆಸ್ವತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ: ಗರ್ಭಿಣಿ ಅನುಮಾನಾಸ್ಪದ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.