ETV Bharat / state

ಕರ್ಫ್ಯೂ ಜಾರಿಯಲ್ಲಿದ್ದರೂ ಕೆಲಸಕ್ಕೆ ಹಾಜರಾಗುವಂತೆ ಆದೇಶ: ಗೊಂದಲದಲ್ಲಿ ಕಂಪನಿ ಕಾರ್ಮಿಕರು

author img

By

Published : May 23, 2020, 8:25 PM IST

ಕೋವಿಡ್‌-19 ನಿಯಂತ್ರಿಸುವ ಹಿನ್ನೆಲೆ ರಾಜ್ಯ ಸರ್ಕಾರ ಪ್ರತಿ ಭಾನುವಾರ ಕರ್ಫ್ಯೂ ಮಾದರಿಯಲ್ಲಿ ಪೂರ್ಣ ಪ್ರಮಾಣದ ಲಾಕ್​​ಡೌನ್​​ ಜಾರಿಗೊಳಿಸಿದ್ದರೂ ಸರ್ಕಾರದ ಆದೇಶವನ್ನು ದೊಡ್ಡಬಳ್ಳಾಪುರದ ಕಂಪನಿಯೊಂದು ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.

Violation of government order in Doddaballapura
ಸಂಗ್ರಹ ಚಿತ್ರ

ದೊಡ್ಡಬಳ್ಳಾಪುರ: ಕೊರೊನಾ ನಿಯಂತ್ರಣಕ್ಕಾಗಿ 4ನೇ ಹಂತದ ಲಾಕ್​ಡೌನ್​ನಲ್ಲಿ ನಾಳೆಯಿಂದ 31ರ ವರೆಗೆ ಪ್ರತಿ ಭಾನುವಾರ ರಾಜ್ಯ ಸರ್ಕಾರ ಕರ್ಫ್ಯೂ ಜಾರಿ ಮಾಡುವ ಮೂಲಕ ಜನರ ಓಡಾಟಕ್ಕೆ ಬ್ರೇಕ್ ಹಾಕಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಸರ್ಕಾರದ ಆದೇಶವನ್ನು ಕಂಪನಿಯೊಂದು ಗಾಳಿಗೆ ತೂರಿದೆ ಎಂಬ ಆರೋಪ ಕೇಳಿಬಂದಿದೆ.

Violation of government order in Doddaballapura
ಕರ್ಫ್ಯೂ ಜಾರಿಯಲ್ಲಿದ್ದರೂ ಕೆಲಸಕ್ಕೆ ಹಾಜರಾಗುವಂತೆ ಆದೇಶ!

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಏಸ್ಸಿಲಾರ್​​ ಕಂಪನಿಯು ಕಾರ್ಮಿಕರನ್ನು ಕೆಲಸಕ್ಕೆ ಕರೆಯುವ ಮೂಲಕ ಸಿಬ್ಬಂದಿ ಜೊತೆ ಚೆಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ ಮೇ 24 ಮತ್ತು ಮೇ 31ರ ಭಾನುವಾರದಂದು ದಿನನಿತ್ಯದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿದೆ.

ಆದರೆ, ಏಸ್ಸಿಲಾರ್ ಆಡಳಿತ ಮಂಡಳಿಯು ಮೇ 24 ರ ಭಾನುವಾರ ಕೆಲಸಕ್ಕೆ ಬರುವಂತೆ ಕಾರ್ಮಿಕರಿಗೆ ಸೂಚಿಸಿದೆ ಎನ್ನಲಾಗುತ್ತಿದೆ. ಆಡಳಿತ ಮಂಡಳಿಯ ಈ ಕ್ರಮದಿಂದ ಕೆಲಸಕ್ಕೆ ಹೋಗಬೇಕಾ ಅಥವಾ ಸರ್ಕಾರದ ಆದೇಶದಂತೆ ಮನೆಯಲ್ಲಿರಬೇಕಾ ಎಂಬ ಗೊಂದಲದಲ್ಲಿದ್ದಾರೆ ಇಲ್ಲಿನ ಕಾರ್ಮಿಕರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.