ನೆಲಮಂಗಲ: ತಾಲೂಕಿನ ಅವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆ ಕಾರ್ಖಾನೆಯವರು ಅಕ್ರಮವಾಗಿ ಬೋರ್ವೆಲ್ ಕೊರೆಸಲು ಮುಂದಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ದಾಬಸ್ ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನದಿ ನೀರು ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಇದೇ ಕಾರಣಕ್ಕೆ ಅವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಫಾಪನೆಗೆ ಮಾಲೀಕರು ಮುಂದಾಗಿದ್ದಾರೆ. ಆದರೆ, ಕಾರ್ಖಾನೆ ಮಾಲೀಕರು ಹೇಮಾವತಿ ನದಿ ನೀರನ್ನು ಕಾಯುವ ಬದಲಿಗೆ, ತಾವೇ ಕಾರ್ಖಾನೆಯ ಅವರಣದಲ್ಲಿ ಬೋರ್ವೆಲ್ ಕೊರೆಸುವುದಕ್ಕೆ ಮುಂದಾಗಿದ್ದರು.
ಬೆಂಗಳೂರಿನ ರಾಜಾಜಿನಗರ ಮೂಲದ ಎಸ್‍ಎಂಸಿ ಎಂಟರ್ ಪ್ರೈಸಸ್ ಅಂಡ್ ಬಿಲ್ಡರ್ಸ್ ಮಾಲೀಕ ಗೋಪಿನಾಥ್ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.