ಆನೇಕಲ್: ಗಣೇಶ ಮೂರ್ತಿ ನಿಮಜ್ಜನೆಗೆ ಹೋದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ತಮಿಳುನಾಡಿನ ಸೂಳಗಿರಿ ಸಮೀಪದ ಅನಾಸಂದ್ರಂ ಕೆರೆಯಲ್ಲಿ ನಡೆದಿದೆ.
ಸೂಳಗಿರಿ ನಿವಾಸಿಗಳಾದ ಭೂಪತಿ (12), ಮುರಳಿ (12) ಮೃತ ಬಾಲಕರು. ಮೂರ್ತಿ ಪ್ರತಿಷ್ಠಾಪಿಸಿ ನಾಲ್ಕು ದಿನಗಳ ಬಳಿಕ ಇಂದು ಸ್ನೇಹಿತರೊಂದಿಗೆ ಕೆರೆಯಲ್ಲಿ ಮೂರ್ತಿ ನಿಮಜ್ಜನ ಮಾಡಲು ಹೋಗಿದ್ದರು. ಆಳ ಅರಿಯದೇ ಕೆರೆಗಿಳಿದಿದ್ದು, ಎಲ್ಲರೂ ನೋಡುತ್ತಿದ್ದಂತೆ ಮೂರ್ತಿ ಜೊತೆ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ.
ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.