ETV Bharat / state

ತ್ರಿಕೋನ ಪ್ರೇಮ ಕಥೆ.. ಆತ್ಮಹತ್ಯೆಗೆ ಶರಣಾದ ಭಗ್ನಪ್ರೇಮಿ.. - ದೊಡ್ಡಬಳ್ಳಾಪುರ ಲೇಟೆಸ್ಟ್ ನ್ಯೂಸ್

ಪ್ರೀತಿಸುತ್ತಿದ್ದ ಯುವತಿಯನ್ನು ಮತ್ತೊಬ್ಬ ಪ್ರೀತಿಸುತ್ತಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬೆಳವಂಗಲ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ..

ಆನಂದ್
ಆನಂದ್
author img

By

Published : Oct 17, 2021, 8:05 PM IST

ದೊಡ್ಡಬಳ್ಳಾಪುರ : ತಾಲೂಕಿನ ಸೂಲುಕುಂಟೆ ಗ್ರಾಮದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನಂದ್​(23) ಎಂಬಾತ ಮೃತ ದುರ್ದೈವಿ.

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆನಂದ್ ಮೃತದೇಹ ಇಂದು ಕಟ್ಟೆಯಲ್ಲಿ ಪತ್ತೆಯಾಗಿದೆ. ಆನಂದ್​ ಹಾಗೂ ಯುವತಿಯೊಬ್ಬಳು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಈ ವೇಳೆ ಯುವತಿ ಸಮುದಾಯಕ್ಕೆ ಸೇರಿದ್ದ ಮತ್ತೊಬ್ಬ ಯುವಕ ಆಕೆಯನ್ನು ಪ್ರೀತಿಸುತ್ತಿದ್ದನಂತೆ.

ಯುವತಿ ಪೋಷಕರೂ ಅವನೊಂದಿಗೆ ಮದುವೆಗೆ ತಯಾರಿ ನಡೆಸಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಯುವಕ ಕಟ್ಟೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.