ದೊಡ್ಡಬಳ್ಳಾಪುರ: ಗಾಳಿ ಮಳೆಯ ರಭಸಕ್ಕೆ ಅಶ್ವಥ್ ಕಟ್ಟೆಯಲ್ಲಿನ ಅರಳಿಮರದ ಕೊಂಬೆ ಮುರಿದು ಮನೆಯ ಮೇಲೆ ಬಿದ್ದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೋವಿಂದಪ್ಪ ಬೋವಿಪಾಳ್ಯದಲ್ಲಿ ಘಟನೆ ನಡೆದಿದೆ. ಭಾರೀ ಗಾಳಿ ಮಳೆಯ ಆರ್ಭಟಕ್ಕೆ ಗ್ರಾಮದ ಮಧ್ಯದಲ್ಲಿನ ಅಶ್ವಥ್ ಕಟ್ಟೆಯಲ್ಲಿನ ಬೃಹತ್ ಅರಳಿ ಮರದ ಕೊಂಬೆ ಮುರಿದು ಮನೆಗಳ ಮೇಲೆ ಬಿದ್ದಿದ್ದು, ಅದೃಷ್ಟಕ್ಕೆ ಯಾವುದೇ ಪ್ರಾಣಹಾನಿಯಾಗಿಲ್ಲ.
ಮರದ ಕೊಂಬೆ ಬಿದ್ದ ಪರಿಣಾಮ ಮನೆಯ ಸಿಮೆಂಟ್ ಶೀಟ್ಗಳು ಹೊಡೆದು ಜಖಂಗೊಂಡಿದೆ. ಗ್ರಾಮಸ್ಥರೇ ಮನೆಯ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವು ಮಾಡಿ ಮನೆಯವರ ಆತಂಕ ದೂರ ಮಾಡಿದ್ದಾರೆ.