ದೊಡ್ಡಬಳ್ಳಾಪುರ: ರೈಲ್ವೆ ಹಳಿಗಳ ಮೇಲೆ ದುಷ್ಕರ್ಮಿಗಳು ಸೈಜ್ ಕಲ್ಲಿಟ್ಟು ರೈಲಿನ ಮುಂಭಾಗಕ್ಕೆ ಹಾನಿ ಮಾಡಿದ ಘಟನೆ ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಮತ್ತು ವಡ್ಡರಹಳ್ಳಿ ರೈಲ್ವೆ ಸ್ಟೇಷನ್ ನಡುವಿನ ನಂದಿಮೋರಿ ಬಳಿ ನಡೆದಿದೆ. ಸ್ಥಳಕ್ಕೆ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಚಾಲಕ ರೈಲು ನಿಲ್ಲಿಸಿ ನೋಡಿದ್ದ, ತಕ್ಷಣ ಹಳಿ ಮೇಲಿದ್ದ ಸೈಜ್ ಕಲ್ಲು ಹೊರಹಾಕಿ ಮತ್ತೆ ರೈಲು ಚಾಲನೆ ಮಾಡಿದ್ದಾನೆ. ಸೈಜ್ ಕಲ್ಲಿನಿಂದ ರೈಲಿನ ಮುಂಭಾಗಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಘಟನೆಯ ಗಂಭೀರತೆ ಅರಿತ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಡಾ.ಸೌಮ್ಯಲತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈಲ್ವೇ ಪೊಲೀಸರು ಈ ಮಾರ್ಗದಲ್ಲಿ ಕಾವಲು ಕಾಯಲು ಗನ್ ಮ್ಯಾನ್ಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಹಳಿ ತಪ್ಪಿದ ರೈಲು ಮತ್ತೊಂದಕ್ಕೆ ಡಿಕ್ಕಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ