ದೊಡ್ಡಬಳ್ಳಾಪುರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಅಲ್ಲಿಯ ಬೋರ್ವೆಲ್ಗೆ ಸೇರುತ್ತಿದ್ದು, ಬೋರ್ವೆಲ್ ನೀರನ್ನು ಪ್ರಯಾಣಿಕರು ಮತ್ತು ಸಂಸ್ಥೆಯ ಸಿಬ್ಬಂದಿು ಬಳಕೆ ಮಾಡುತ್ತಿದ್ದು, ಈ ಬಗ್ಗೆ ಮನವಿ ಮಾಡಿದರೂ ಸಂಸ್ಥೆ ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ, ನಿತ್ಯ 300ಕ್ಕೂ ಹೆಚ್ಚು ಬಸ್ಗಳ ಸಂಚಾರವಿದ್ದು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿನ ನೀರು ಕುಡಿಯುವ ಮತ್ತು ಬಳಸುವ ಮುನ್ನ ಯೋಚಿಸಬೇಕಾದ ಪರಿಸ್ಥಿತಿ ಇಲ್ಲಿದೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ನೇರವಾಗಿ ಬೋರ್ವೆಲ್ ಸೇರುತ್ತಿವೆ. ಇದೇ ಬೋರ್ವೆಲ್ ನೀರನ್ನ ಬಸ್ ನಿಲ್ದಾಣದಲ್ಲಿರುವ ಹೋಟೆಲ್ ಮತ್ತು ಕಾಂಡಿಮೆಂಟ್ಸ್ಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಶೌಚಾಲಯದ ನೀರಿನ ಬಳಕೆಯಿಂದ ತೊಂದರೆಯಾದರೆ ಯಾರು ಹೊಣೆ ಎಂಬ ಆತಂಕವನ್ನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಸ್ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಟೆಂಡರ್ ತೆಗೆದುಕೊಂಡಿರುವ ಅಂಬರೀಶ್ ಎನ್ನುವವರು ಮಾತನಾಡಿ, ಪ್ರತಿ ತಿಂಗಳು 65 ಸಾವಿರ ಹಣವನ್ನ ಟೆಂಡರ್ಗೆ ಪ್ರತಿಯಾಗಿ ಕೆಎಸ್ಆರ್ಟಿಸಿ ಸಂಸ್ಥೆಗೆ ಕಟ್ಟುತ್ತಿದ್ದೇನೆ. ಬಸ್ ನಿಲ್ದಾಣದಲ್ಲಿನ ಶೌಚಾಲಯದ ನೀರು ಸರಾಗವಾಗಿ ಹರಿದು ಹೋಗದೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತಿದ್ದು, ಸುಮಾರು 20 ಮೀಟರ್ ನಷ್ಟು ನೀರು ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತಿದೆ.
ಈ ಜಾಗದಲ್ಲಿ ಸವಾರರು ವಾಹನಗಳ ಪಾರ್ಕಿಂಗ್ ಮಾಡುತ್ತಿಲ್ಲ, ಇದರಿಂದ ನಷ್ಟವಾಗುತ್ತಿದೆ. ಅಲ್ಲದೇ ಈ ನೀರು ಬೋರ್ವೆಲ್ಗೂ ಸೇರುತ್ತಿದ್ದು, ಸಮಸ್ಯೆ ಬಗೆ ಹರಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಕ್ಕಳು ದೇಶದ ಪ್ರತಿಭಾವಂತ ಸಂಪನ್ಮೂಲವಾಗಬೇಕು: ಸಚಿವ ಡಾ.ಕೆ.ಸುಧಾಕರ್