ETV Bharat / state

ಜನರಿಗೆ ಉಚಿತ ಕೊಡುಗೆ ನೀಡಲು ಕೇಜ್ರಿವಾಲ್ ಸರ್ಕಾರ ಸಾಲ ಮಾಡಿಲ್ಲ: ಭಾಸ್ಕರ್ ರಾವ್

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು ಮತ್ತು ಸೋರಿಕೆಯನ್ನು ತಡೆಗಟ್ಟಿದ್ದರಿಂದ ಕಾಮಗಾರಿಗಳಲ್ಲಿ ಕೋಟಿ ಕೋಟಿ ಹಣವನ್ನು ಉಳಿಸಲಾಗಿದೆ. ಈ ಹಣವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.

Bhaskara Rao talked to press
ಮಾಧ್ಯಮದೊಂದಿಗೆ ಮಾತನಾಡಿದ ಎಎಪಿ ಮುಖಂಡ ಭಾಸ್ಕರ್ ರಾವ್
author img

By

Published : Apr 21, 2022, 9:17 AM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ದೇಶ ಹಾಗೂ ರಾಜ್ಯದ ಜನತೆ ರಾಜಕೀಯ ಬದಲಾವಣೆ ಬಯಸಿದ್ದಾರೆ. ದೇಶಾದ್ಯಂತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಬಗ್ಗೆ ಭರವಸೆ ಮೂಡಿದೆ ಎಂದು ದೊಡ್ಡಬಳ್ಳಾಪುರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಎಎಪಿ ಮುಖಂಡ ಭಾಸ್ಕರ್ ರಾವ್ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಎಎಪಿ ಮುಖಂಡ ಭಾಸ್ಕರ್ ರಾವ್

ಉಚಿತ ಕೊಡುಗೆಗಳು ದೇಶವನ್ನು ಅಧೋಗತಿಗೆ ತರುತ್ತೆ ಮತ್ತು ಇವತ್ತಿನ ಶ್ರೀಲಂಕಾ ಪರಿಸ್ಥಿತಿ ಬರುತ್ತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆಪ್ ಪಕ್ಷದ ಮುಖಂಡ ಭಾಸ್ಕರ್ ರಾವ್ ಕಳೆದ 7 ವರ್ಷಗಳಿಂದ ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ಜನರಿಗೆ ಉಚಿತ ಕೊಡುಗೆಗಳನ್ನು ಕೊಡುತ್ತಲೇ ಬಂದಿದೆ. 200 ಯುನಿಟ್ ವಿದ್ಯುತ್ ಮತ್ತು 20 ಸಾವಿರ ಲೀಟರ್ ನೀರು ಮತ್ತು ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಲಾಗುತ್ತಿದೆ. ಈ ಎಲ್ಲಾ ಉಚಿತ ಕೊಡುಗೆಗಳನ್ನು ನೀಡಲು ಕೇಜ್ರಿವಾಲ್ ಸರ್ಕಾರ ಸಾಲ ಮಾಡಿಲ್ಲ ಎಂದರು.

ಕರ್ನಾಟಕ ಸರ್ಕಾರ ಇವತ್ತು 7.5 ಲಕ್ಷ ಕೋಟಿ ಸಾಲದ ಹೊರೆ ಇದೆ. ಆದರೆ ಅರವಿಂದ್ ಕೇಜ್ರಿವಾಲ್ ಉಚಿತ ಕೊಡುಗೆ ನೀಡಲು ಸಾಲ ಮಾಡಿಲ್ಲ ಮತ್ತು ತೆರಿಗೆಯನ್ನು ಹೆಚ್ಚು ಮಾಡಿಲ್ಲ. ಹಾಗಾದರೆ ಹಣವನ್ನು ಎಲ್ಲಿಂದ ತಂದ್ರು ಎನ್ನುವ ಪ್ರಶ್ನೆ ಬರುತ್ತದೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು ಮತ್ತು ಸೋರಿಕೆಯನ್ನು ತಡೆಗಟ್ಟಿದ್ದರಿಂದ ಕಾಮಗಾರಿಗಳಲ್ಲಿ ಕೋಟಿ ಕೋಟಿ ಹಣವನ್ನು ಉಳಿಸಲಾಗಿದೆ. ಈ ಹಣವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದರು.

ದೆಹಲಿ ರಾಜ್ಯದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಳೆದ 7 ವರ್ಷಗಳಲ್ಲಿ ಮಾದರಿ ಆಡಳಿತ ನೀಡಿದ್ದಾರೆ. ನಿಜವಾದ ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ‌. ದ್ವೇಷ, ಜಾತಿ, ಧರ್ಮತೀತಾವಾಗಿ ಕೆಲಸ ಮಾಡಲಾಗುತ್ತದೆ. ಯುವಕರು ರಾಜಕೀಯಕ್ಕೆ ಬರಬೇಕು. ಪಂಜಾಬ್​ನಲ್ಲಿ 92 ಮಂದಿ ಶಾಸಕರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಇದು ಅರವಿಂದ್ ಕೇಜ್ರಿವಾಲ್ ಜನಪರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಬಿಎಸ್ಪಿ ಮುಖಂಡರು ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಭಾಸ್ಕರ್ ರಾವ್ ಸಮ್ಮುಖದಲ್ಲಿ ಎಎಪಿ ಸೇರ್ಪಡೆಯಾದರು.

ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಗಳೂರು ಭೇಟಿ; ಬೃಹತ್ ಸಮಾವೇಶದೊಂದಿಗೆ ರಾಜ್ಯ ಚುನಾವಣೆಗೆ ಆಪ್ ರಣಕಹಳೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.