ETV Bharat / state

ಶಾಲಾ ವ್ಯವಸ್ಥಾಪಕನ ಮೇಲೆ ಮಾರಣಾಂತಿಕ ಹಲ್ಲೆ..!

ಯಾರೋ ದುಷ್ಕರ್ಮಿಗಳು ಶಾಲಾ ಸಿಬ್ಬಂದಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ದೊಡ್ಡಬೆಳವಂಗಲ ಪೊಲೀಸ್​ ಠಾಣಾ ವ್ಯಾಪ್ತಿಯ ಕುಂಬಳಗುಂಟೆ ಬಳಿ ನಡೆದಿದೆ.

ಹಲ್ಲೆಗೊಳಗಾದ ಶಾಲಾ ವ್ಯವಸ್ಥಾಪಕ ನಾಗೇಶ್ವರ್​ ರಾವ್
author img

By

Published : May 18, 2019, 12:56 PM IST

ದೊಡ್ಡಬಳ್ಳಾಪುರ : ಶಾಲಾ ವ್ಯವಸ್ಥಾಪಕನೋರ್ವನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಕಾರಿನಿಂದ ಡಿಕ್ಕಿ ಹೊಡೆದು ಅಡ್ಡಗಟ್ಟಿದ ದುಷ್ಕರ್ಮಿಗಳು ನಂತರ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಹೆಚ್​ಎಸ್​ಎಸ್​ಎನ್​ ಹೈಯರ್ ಪ್ರೈಮರಿ ಸ್ಕೂಲ್ ವ್ಯವಸ್ಥಾಪಕ ನಾಗೇಶ್ವರ್​ ರಾವ್ (43) ಹಲ್ಲೆಗೊಳಗಾದ ವ್ಯಕ್ತಿ. ಹೆಸರಘಟ್ಟ ನಿವಾಸಿಯಾದ ನಾಗೇಶ್ವರ್​ ರಾವ್ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೊಳಗಾದ ಶಾಲಾ ವ್ಯವಸ್ಥಾಪಕ ನಾಗೇಶ್ವರ್​ ರಾವ್

ಕೆಲಸದ ನಿಮಿತ್ತ ಗೌರಿಬಿದನೂರಿಗೆ ತೆರಳಿದ್ದ ನಾಗೇಶ್ವರ್​ ರಾವ್, ಗುರುವಾರ ಬೆಳಗ್ಗೆ ಹೆಸರುಘಟ್ಟದತ್ತ ಕಾರಿನಲ್ಲಿ ಬರುತ್ತಿದ್ದಾಗ ಕುಂಬಳಗುಂಟೆ ಸಮೀಪ ಇವರ ಕಾರಿಗೆ ಒಂದು ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ನಾಗೇಶ್ವರ್​ ರಾವ್, ತಮ್ಮ ಕಾರು ನಿಲ್ಲಿಸಿ ನೋಡುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋಯಿಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಗೇಶ್ವರ್​ ರಾವ್ ಅವರನ್ನು ಸ್ಥಳೀಯರು ಆ್ಯಂಬುಲೆನ್ಸ್​ ಮೂಲಕ ಕೊಲಂಬಿಯಾ ಏಷಿಯಾಗೆ ದಾಖಲಿಸಿದ್ದಾರೆ. ಘಟನೆ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಕೊಲೆಯತ್ನದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Intro:ಶಾಲಾ ವ್ಯವಸ್ಥಾಪಕನ ಮೇಲೆ ಮಾರಣಾಂತಿಕ ಹಲ್ಲೆ ಕೈ ಬೆರಳುಗಳು ಕಟ್

ಕಾರು ಡಿಕ್ಕಿ ಹೊಡೆದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ
ದುಷ್ಕರ್ಮಿಗಳು
Body:ದೊಡ್ಡಬಳ್ಳಾಪುರ : ಕಾರಿನಲ್ಲಿ ಶಾಲೆಗೆ ಬರುವ ವೇಳೆ ಶಾಲೆಯ ವ್ಯವಸ್ಥಾಪಕನನ್ನ ಕಾರಿನಿಂದ ಡಿಕ್ಕಿ ಹೊಡೆದು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬಳಗುಂಟೆ ಬಳಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿ ಹೆಸರಘಟ್ಟ ನಿವಾಸಿ ಎಚ್‌ಎಸ್‌ಎಲ್‌ಎನ್ ಹೈಯರ್ ಪ್ರೈಮರಿ ಸ್ಕೂಲ್ ವ್ಯವಸ್ಥಾಪಕ ನಾಗೇಶ್ವರರಾವ್(೪೩). ಹಲ್ಲೆಗೊಳಗಾದ ನಾಗೇಶ್ವರರಾವ್ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ನಾಗೇಶ್ವರರಾವ್ ಬುಧವಾರ ಸಂಜೆ ಮಡದಿಯ ಜೊತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆಸಲಾಗುತ್ತಿರುವ ಗ್ಲೋಬಲ್ ಸ್ಕೂಲ್ ನೋಡಲು ತೆರಳಿದ್ದಾರೆ.ಮಡದಿಯನ್ನು ಅಲ್ಲಿಯೆ ಬಿಟ್ಟು ಗುರುವಾರ ಬೆಳಗ್ಗೆ ೮.೩೦ರ ಸಮಯದಲ್ಲಿ ಹೆಸರುಘಟ್ಟಗೆ ಕಾರಿನಲ್ಲಿ ತೆರಳುವ ವೇಳೆ ಬ್ಯಾತ ಹಾಗೂ ಮಧುರೆ ನಡುವಿನ ಕುಂಬಳಗುಂಟೆ ಸಮೀಪ ಹಿಂಬದಿಯಿಂದ ಮತ್ತೊಂದು ಕಾರು ಗುದ್ದಿದ್ದು ಕಾರನ್ನು ನಿಲ್ಲಿಸಿ ಕೆಳಗಿಳಿದು ನೋಡುವ ವೇಳೆ ಮತ್ತೊಂದು ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋಯಿಚ್ಚೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಗೇಶ್ವರ ರಾವ್ ಅವರನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ಕೊಲಂಬಿಯಾ ಏಷಿಯಾಗೆ ದಾಖಲಿಸಿದ್ದಾರೆ.

ಘಟನೆ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಕೊಲೆಯತ್ನದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಸ್ಥಳ ಪರಿಶೀಲನೆ ನಡೆಸಿದ ಸಬ್ ಇನ್ಸ್‌ಪೆಕ್ಟರ್ ಗಜೇಂದ್ರ ದುಷ್ಕರ್ಮಿಗಳ ಪತ್ತೆಗಾಗಿ ಬಲೆ ಬಿಸಿದ್ದಾರೆ
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.