ದೊಡ್ಡಬಳ್ಳಾಪುರ : ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುವ ಗ್ಯಾಂಗ್ ತಾಲೂಕಿಗೆ ಕಾಲಿಟ್ಟಿದೆ. ಕಬ್ಬಿಣ ಕಟ್ ಮಾಡುವ ಯಂತ್ರದಿಂದ ದರೋಡೆಗೆ ಯತ್ನಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತಾಲೂಕಿನ ಕಂಟನಕುಂಟೆ ಗ್ರಾಮದ ಹೊರಗಿನ ಒಂಟಿ ಮನೆಯಲ್ಲಿ ತಿಮ್ಮರಾಜು ಕುಟುಂಬ ವಾಸವಿದೆ. ಮಾರ್ಚ್ 27ರ ಮಧ್ಯರಾತ್ರಿ 12:30ರ ಸಮಯದಲ್ಲಿ 7 ಜನ ದರೋಡೆಕೊರರು ಇವರ ಮನೆಯ ದರೋಡೆಗೆ ಯತ್ನಿಸಿದ್ದಾರೆ. ಕೈಯಲ್ಲಿ ಕಬ್ಬಿಣ ಕಟ್ಟಿಂಗ್ ಮಾಡುವ ಮೆಷಿನ್, ಮೈಗೆ ಆಯಿಲ್ ಬಳಿದುಕೊಂಡು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.
ಮನೆಯನ್ನು ಸುತ್ತುವರಿದ ವೇಳೆ ನಾಯಿ ಬೊಗಳಿದ ಶಬ್ಬ ಕೇಳಿ ಎಚ್ಚರಗೊಂಡ ತಿಮ್ಮರಾಜು ಕಿಟಕಿಯ ಮೂಲಕ ನೋಡಿ, ಮನೆಯೊಳಗಿಂದಲೇ ಅವರನ್ನು ವಿಚಾರಿಸಿದಾಗ ನಾವು ಆರ್ಮಿಯವರು ಎಂದು ಕುಂಟು ನೆಪ ಹೇಳಿದ್ದಾರೆ.
ಅನುಮಾನಗೊಂಡು ತಕ್ಷಣವೇ ಪಕ್ಕದೂರಿನ ಸ್ನೇಹಿತರಿಗೆ ವಿಷಯ ತಿಳಿಸಿದ್ದು, ಅವರು ಬರುವಷ್ಟರಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ.. ಕೊರೊನಾ ಹೆಚ್ಚಳ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭ