ಆನೇಕಲ್ : ಕೊರೊನಾ ಸಂಕಷ್ಟದಲ್ಲಿ ವಲಸೆ ಕಾರ್ಮಿಕರು ಪರದಾಡುತ್ತಿದ್ದರೆ, ಇತ್ತ ಪುರಸಭೆ - ನಗರಸಭೆ-ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಸದಸ್ಯರ ಕೃಪೆಗೆ ಪಾತ್ರರಾದವರಿಗೆ ಮಾತ್ರ ಕಾರ್ಮಿಕ ಇಲಾಖೆಯ ಕಿಟ್ ವಿತರಣೆಯಾಗ್ತಿದೆ. ಅಲ್ಲದೇ ಈ ಕುರಿತು ಕಾರ್ಮಿಕ ಇಲಾಖೆಯ ನಿರೀಕ್ಷಕರಿಗೂ ಈ ಕುರಿತು ಮಾಹಿತಿಯಿಲ್ಲದಂತೆ ಪುರಸಭೆಯಲ್ಲಿ ಕಿಟ್ ವಿತರಣೆಯಾಗಿದೆ ಎಂದು ಮಹಿಳಾ ಹೋರಾಟಗಾರ್ತಿ ಆರೋಪಿಸಿದ್ದಾರೆ.
ಕಿಟ್ ವಿತರಿಸಿದ್ದನ್ನು ಕಂಡು ಪುರಸಭೆ ಸದಸ್ಯರು - ಮುಖ್ಯಾಧಿಕಾರಿ ಹಾಗೂ ಶಾಸಕರ ಸಭೆಯಲ್ಲಿ ಈ ಕುರಿತು ಪ್ರಶ್ನೆ ಮಾಡಿದ ಮಹಿಳಾ ಹೋರಾಟಗಾರ್ತಿ ಮಮತಾರ ಪ್ರಶ್ನೆಗೆ ತಕ್ಕ ಉತ್ತರ ನೀಡದೇ ಹಾಗೇನಿಲ್ಲ ಎಂದು ಶಾಸಕರು ಎದ್ದು ಹೊರನಡೆದರು.
ಆನೇಕಲ್ ಪಟ್ಟಣದಲ್ಲಿ 350 ಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಅವ್ರಿಗೆ ಪಟ್ಟಿಯಂತೆ ಇಂದು 27 ವಾರ್ಡ್ಗಳ 100 ಜನಕ್ಕೆ ಕಿಟ್ ವಿತರಿಸಿದ್ದೇವೆ ಎಂದು ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ. ತಹಶೀಲ್ದಾರ್ ಮಹದೇವಯ್ಯ, ಶಾಸಕ ಬಿ ಶಿವಣ್ಣ ಕಿಟ್ ವಿತರಿಸಿ ಹೊರಟರು.