ETV Bharat / state

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಬ್ಯಾಗ್! ಮತ್ತೇನಾಯ್ತು? - ಕೆಂಪೇಗೌಡ ವಿಮಾನ ನಿಲ್ದಾಣ ಸುದ್ದಿ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಯಂತ್ರದ ಮೂಲಕ ಭದ್ರತಾ ಸಿಬ್ಬಂದಿ ಅನುಮಾನಾಸ್ಪದ ಬ್ಯಾಗನ್ನು ಪರಿಶೀಲನೆ‌ ನಡೆಸಿದರು. ಕೊನೆಗೆ ಯಾವುದೇ ಅನುಮಾನಸ್ಪದ ರೀತಿಯ ಸ್ಫೋಟಕ ವಸ್ತುಗಳಿಲ್ಲವೆಂದು ಅರಿವಿಗೆ ಬಂದ ನಂತರ ಟ್ರಾಲಿ ಸಮೇತ ಬ್ಯಾಗನ್ನು ಭದ್ರತಾ ಸಿಬ್ಬಂದಿ ಕೊಂಡೊಯ್ದರು.

ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಠಿಸಿದ ಅನುಮಾನಾಸ್ಪದ ಬ್ಯಾಗ್, Suspicious bag created anxiety at Kempegowda airport
ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಠಿಸಿದ ಅನುಮಾನಾಸ್ಪದ ಬ್ಯಾಗ್
author img

By

Published : Dec 29, 2019, 11:34 PM IST

ದೇವನಹಳ್ಳಿ/ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು.

ಏರ್ಪೋರ್ಟ್​ನ‌ ಅರೈವಲ್ಸ್ ಗೇಟ್ ಬಳಿಯ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್​ವೊಂದು ಯಾರೂ ವಾರಸುದಾರರಿಲ್ಲದೆ ಏಕಾಂಗಿಯಾಗಿ ಪತ್ತೆಯಾಗಿತ್ತು.‌ ಇದನ್ನ ಗಮನಿಸಿದ ಏರ್ಪೋರ್ಟ್ ಭದ್ರತಾ ಸಿಬ್ಬಂದಿ, ಸಾಕಷ್ಟು ಸಮಯ ಕಾದರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಕಿಯಾಗಿದ್ದ ಬ್ಯಾಗ್ ಕಂಡ ಏರ್ಪೋರ್ಟ್ ಭದ್ರತಾ ‌ಸಿಬ್ಬಂದಿ ಸಾಕಷ್ಟು ಅನುಮಾನ‌ ಪಡುವಂತಾಯಿತು.

ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಠಿಸಿದ ಅನುಮಾನಾಸ್ಪದ ಬ್ಯಾಗ್

ತದನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಯಂತ್ರದ ಮೂಲಕ ಭದ್ರತಾ ಸಿಬ್ಬಂದಿ ಅನುಮಾನಾಸ್ಪದ ಬ್ಯಾಗನ್ನು ಪರಿಶೀಲನೆ‌ ನಡೆಸಿದರು. ಕೊನೆಗೆ ಯಾವುದೇ ಅನುಮಾನಸ್ಪದ ರೀತಿಯ ಸ್ಫೋಟಕ ವಸ್ತುಗಳಿಲ್ಲವೆಂದು ಅರಿವಿಗೆ ಬಂದ ನಂತರ ಟ್ರಾಲಿ ಸಮೇತ ಬ್ಯಾಗನ್ನು ಭದ್ರತಾ ಸಿಬ್ಬಂದಿ ಕೊಂಡೊಯ್ದರು. ಸದ್ಯ ಬ್ಯಾಗನ್ನು ಏರ್ಪೋರ್ಟ್ ಟರ್ಮಿನಲ್ ಮ್ಯಾನೇಜರ್ ಕಚೇರಿಗೆ ಕೊಡಲಾಗಿದೆ.

ಏರ್ಪೋರ್ಟ್​ನಲ್ಲಿ ಕೆಲ ಪ್ರಯಾಣಿಕರು ಆತುರದಲ್ಲಿ ಬ್ಯಾಗ್ ಬಿಟ್ಟು ಹೋಗುವ ಈ ರೀತಿಯ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಆದ್ರೆ ಅದನ್ನು ನಿರ್ಲಕ್ಷ್ಯ ವಹಿಸುವಂತಿಲ್ಲ. ಏರ್ಪೋರ್ಟ್​ನಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತದೆ.

Intro:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಠಿಸಿದ ಅನುಮಾನಸ್ಪದ ಬ್ಯಾಗ್

ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಬ್ಯಾಗ್ ಪರಿಶೀಲನೆ.Body:ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಸ್ಫದ ಬ್ಯಾಗ್ ವೊಂದು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಠಿಯಾದ ಘಟನೆ ನಡೆಯಿತು.

ಏರ್ಪೋರ್ಟ್ ನ‌ ಅರೈವಲ್ಸ್ ಗೇಟ್ ಬಳಿಯ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ ವೊಂದು ಯಾರೂ ವಾರಸುದಾರರಿಲ್ಲದೆ ಏಕಾಂಗಿಯಾಗಿ ಪತ್ತೆಯಾಗಿತ್ತು.‌ ಇದನ್ನ ಗಮನಿಸಿದ ಏರ್ಪೋರ್ಟ್ ಭದ್ರತಾ ಸಿಬ್ಬಂದಿ, ಬ್ಯಾಗ್ ಟ್ರಾಲಿ ಮೇಲೆ ಸಾಕಷ್ಟು ಸಮಯ ಕಾದ್ರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಕಿಯಾಗಿದ್ದ ಬ್ಯಾಗ್ ಕಂಡ ಏರ್ಪೋರ್ಟ್ ಭದ್ರತಾ ‌ಸಿಬ್ಬಂದಿ ಸಾಕಷ್ಟು ಅನುಮಾನ‌ ಪಡುವಂತಾಯಿತು. ತದನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಯಂತ್ರದ ಮೂಲಕ ಭದ್ರತಾ ಸಿಬ್ಬಂದಿ ಅನುಮಾನಸ್ಫದ ಬ್ಯಾಗ್ ನ್ನ ಪರಿಶೀಲನೆ‌ ನಡೆಸಿದರು. ಕೊನೆಗೆ ಯಾವುದೇ ಅನುಮಾನಸ್ಫದ ರೀತಿಯ ಸ್ಫೋಟಕ ವಸ್ತುಗಳಿಲ್ಲ ಅಂತ ಅರಿವಿಗೆ ಬಂದ ನಂತರ ಟ್ರಾಲಿ ಸಮೇತ ಬ್ಯಾಗ್ ನ್ನ ಭದ್ರತಾ ಸಿಬ್ಬಂದಿ ಕೊಂಡೊಯ್ದರು. ಇನ್ನೂ ಭದ್ರತಾ ಸಿಬ್ಬಂದಿ ಕೊಂಡೊಯ್ದು ಬ್ಯಾಗ್ ಏರ್ಪೋರ್ಟ್ ಟರ್ಮಿನಲ್ ಮ್ಯಾನೇಜರ್ ಕಚೇರಿಗೆ ಕೊಡಲಾಗಿದೆ. ಏರ್ಪೋರ್ಟ್ ‌ನಲ್ಲಿ ಕೆಲ ಪ್ರಯಾಣಿಕರು ಅತುರದಲ್ಲಿ ಬ್ಯಾಗ್ ಬಿಟ್ಟು ಹೋಗುವ ಈ ರೀತಿಯ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ... ಆದ್ರೆ ಅದನ್ನ ನಿರ್ಲಕ್ಷ್ಯ ವಹಿಸುವಂತಿಲ್ಲ. ಏರ್ಪೋರ್ಟ್ ನಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.