ETV Bharat / state

ಒಂದೇ ಬಸ್​ನಲ್ಲಿ ನೂರಾರು ವಿದ್ಯಾರ್ಥಿಗಳು: ಮತ್ತೊಂದು ಬಸ್​ಗಾಗಿ ಹಠ ಹಿಡಿದ ಯುವಕರು - ಬಸ್​ಗಾಗಿ ಹಠ ಹಿಡಿದ ಯುವಕರು

ಒಂದೇ ಬಸ್​ನಲ್ಲಿ ಎರಡು ಬಸ್​ನಷ್ಟು ವಿದ್ಯಾರ್ಥಿಗಳನ್ನು ತುಂಬಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ದಾರಿ ಮಧ್ಯೆಯೇ ಮತ್ತೊಂದು ಬಸ್ ​ಬೇಕೆಂದು ಪಟ್ಟು ಹಿಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ನಡೆದಿದೆ.

bus
author img

By

Published : Sep 20, 2019, 11:01 PM IST

ದೊಡ್ಡಬಳ್ಳಾಪುರ: ಒಂದೇ ಬಸ್​ನಲ್ಲಿ ಎರಡು ಬಸ್ಸಿನಷ್ಟು ವಿದ್ಯಾರ್ಥಿಗಳನ್ನು ತುಂಬಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ದಾರಿ ಮಧ್ಯೆಯೇ ಬಸ್ ನಿಲ್ಲಿಸಿ ಮತ್ತೊಂದು ಬಸ್ಸಿಗಾಗಿ ಹಠ ಹಿಡಿದ ಘಟನೆ ತಾಲೂಕಿನ ಸಾಸಲು ಹೋಬಳಿಯಲ್ಲಿ ನಡೆದಿದೆ.

ದಾರಿ ಮಧ್ಯೆಯೇ ಬಸ್​ ತಡೆಹಿಡಿದಿರುವ ವಿದ್ಯಾರ್ಥಿಗಳು

ದೊಡ್ಡಬಳ್ಳಾಪುರ ನಗರಕ್ಕೆ ಸಾಸಲು ಹೋಬಳಿಯಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೆರಳುತ್ತಾರೆ. ಆದರೆ ಸಾಸಲು ಭಾಗದಿಂದ ನಗರಕ್ಕೆ ಬಂದು ಹೋಗಲು ಅಸರೆಯಾಗಿರೋದು ಸರ್ಕಾರಿ ಬಸ್ ಮಾತ್ರ. ಕೇವಲ ಎರಡು ಬಸ್​ಗಳು ಮಾತ್ರ ಬೆಳಗ್ಗೆ ಮತ್ತು ಸಂಜೆ ಈ ಮಾರ್ಗದಲ್ಲಿ ಸಂಚರಿಸುತ್ತವೆ.

ಇಂದು ಒಂದು ಬಸ್ ಕೈಕೊಟ್ಟ ಹಿನ್ನೆಲೆ ಎರಡು ಬಸ್ಸಿನಷ್ಟು ವಿದ್ಯಾರ್ಥಿಗಳು ಒಂದೇ ಬಸ್ಸಿನಲ್ಲಿ ತುಂಬಿದ್ರು. ಬಸ್ಸಿನಲ್ಲಿ ಕಾಲಿಡುವುದಕ್ಕೂ ಜಾಗವಿಲ್ಲದೇ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಆಕ್ರೋಶಗೊಂಡು, ಬಸ್ ಅನ್ನು ದಾರಿ ಮಧ್ಯೆಯೇ ತಡೆದರು. ಅಲ್ಲದೆ, ಮತ್ತೊಂದು ಬಸ್​ ಬಿಡುವಂತೆ ಹಠ ಹಿಡಿದಿದ್ದರು.

ಅಲ್ಲದೇ ಡಿಪೋ ಮ್ಯಾನೇಜರ್ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ಡಿಪೋ ಮ್ಯಾನೇಜರ್ ಮತ್ತೊಂದು ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

Intro:ಬಸ್ ಒಂದೇ ಎರಡು ಬಸ್ ನಷ್ಟು ವಿದ್ಯಾರ್ಥಿಗಳು

ದಾರಿ ಮಧ್ಯೆ ಬಸ್ ನಿಲ್ಲಿಸಿ ಮತ್ತೊಂದ್ ಬಸ್ ಗೆ ಹಠ ಹಿಡಿದ ವಿದ್ಯಾರ್ಥಿಗಳು.
Body:ದೊಡ್ಡಬಳ್ಳಾಪುರ : ಒಂದೇ ಬಸ್ ನಲ್ಲಿ ಎರಡು ಬಸ್ಸಿನಷ್ಟು ವಿದ್ಯಾರ್ಥಿಗಳು ತುಂಬಿದ್ರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ದಾರಿ ಮಧ್ಯೆಯೇ ಬಸ್ ನಿಲ್ಲಿಸಿ ಮತ್ತೊಂದು ಬಸ್ಸಿಗೆ ಹಠ ಹಿಡಿದರು.

ದೊಡ್ಡಬಳ್ಳಾಪುರ ನಗರಕ್ಕೆ ಸಾಸಲು ಹೋಬಳಿಯಿಂದ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರ್ತಾರೆ. ಸಾಸಲು ಭಾಗದಿಂದ ನಗರಕ್ಕೆ ಬಂದು ಹೋಗಲು ಅಸರೆಯಾಗಿರೊದು ಸರ್ಕಾರಿ ಬಸ್ ಮಾತ್ರ. ಕೇವಲ ಎರಡು ಬಸ್ ಗಳು ಮಾತ್ರ ಬೆಳಗ್ಗೆ ಮತ್ತು ಸಂಜೆ ಸಂಚಾರಿಸುತ್ತವೆ. ಇಂದು ಒಂದು ಬಸ್ ಕೈ ಕೊಟ್ಟ ಹಿನ್ನೆಲೆ ಎರಡು ಬಸ್ಸಿನಷ್ಟು ವಿದ್ಯಾರ್ಥಿಗಳು ಬಸ್ಸಿನಲ್ಲಿ ತುಂಬಿದ್ರು. ಬಸ್ಸಿನಲ್ಲಿ ಕಾಲಿಡುವುದಕ್ಕು ಜಾಗವಿಲ್ಲದೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಆಕ್ರೋಶಗೊಂಡು ಬಸ್ ನ್ನು ದಾರಿ ಮಧ್ಯೆಯೇ ತಡೆದು ಮತ್ತೊಂದು ಬಸ್ಸಿಗೆ ಹಠ ಹಿಡಿದರು. ಡಿಪೋ ಮ್ಯಾನೇಜರ್ ಸ್ಥಳಕ್ಕೆ ಬಂದು ಸಮಸ್ಯೆ ಬಗ್ಗೆ ಹರಿಸುವಂತೆ ಬಸ್ ತಡೆದು ನಿಲ್ಲಿಸಿದರು. ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದ ಡಿಪೋ ಮ್ಯಾನೇಜರ್ ಮತ್ತೊಂದು ಬಸ್ ವ್ಯವಸ್ಥೆ ಮಾಡಿಕೊಟ್ಟರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.