ETV Bharat / state

ದೊಡ್ಡಬಳ್ಳಾಪುರ: ಸಾಲದ ಸುಳಿಗೆ ಸಿಲುಕಿದ ಉರಗ ರಕ್ಷಕ ಆತ್ಮಹತ್ಯೆ

author img

By

Published : Jun 3, 2022, 8:52 PM IST

ಸಾಲದ ಸುಳಿಗೆ ಸಿಲುಕಿದ್ದ ಉರಗ ರಕ್ಷಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

snake-rescuer-commits-suicide-in-doddaballapura
ಸಾಲದ ಸುಳಿಗೆ ಸಿಲುಕಿ ಉರಗ ರಕ್ಷಕ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಸಾಲದ ಸುಳಿಗೆ ಸಿಲುಕಿದ್ದ ಉರಗ ರಕ್ಷಕನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೊಡ್ಡಬಳ್ಳಾಪುರ ನಗರದ ಶಾಂತಿನಗರದ 7ನೇ ಕ್ರಾಸ್​ನಲ್ಲಿ ಘಟನೆ ನಡೆದಿದ್ದು, ಪುನೀತ್ ರಾಂ (28) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ.

ಮೃತ ಯುವಕ ರೆಸಾರ್ಟ್​​ನಲ್ಲಿ ಸಾಹಸ ಕ್ರೀಡೆಗಳ ಅಯೋಜನೆ ಮಾಡುತ್ತಿದ್ದು, ಇದಕ್ಕಾಗಿ ಬಂಡವಾಳ ಹಾಕಿದ್ದ. ಆದರೆ, ನಷ್ಟಕ್ಕೊಳಗಾದ ಹಿನ್ನೆಲೆಯಲ್ಲಿ ಸಾಲದ ಸುಳಿಗೆ ಸಿಲುಕಿದ್ದ ಎನ್ನಲಾಗುತ್ತಿದೆ. ಉರಗ ಸಂರಕ್ಷಣೆ ಮಾಡುತ್ತಿದ್ದ ಪುನೀತ್, ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಿದ್ದ. ಜೊತೆಗೆ ಹಿಂದೂ ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದ.

snake-rescuer-commits-suicide-in-doddaballapura
ಪುನೀತ್

ಸಾಲ ಬಾಧೆಯಿಂದ ಬೇಸತ್ತ ಪುನೀತ್ ಶುಕ್ರವಾರ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಶುದ್ಧ ನೀರು ಪೂರೈಕೆ ಆರೋಪ: ಸಾವಿನ ಬಾಗಿಲು ತಟ್ಟುತ್ತಿದ್ದಾರೆ ಇಲ್ಲಿನ ಜನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.