ETV Bharat / health

ಮೈಗ್ರೇನ್​ ಸಮಸ್ಯೆಯೇ: ನಿರ್ವಹಣೆಗೆ ಇಲ್ಲಿವೆ ಪರಿಣಾಮಕಾರಿ, ಅತ್ಯುತ್ತಮ ಸಲಹೆಗಳು! - how to get rid from Migraine

ಬಹುತೇಕರನ್ನು ಕಾಡುವ ಮೈಗ್ರೇನ್​ ಮುನ್ಸೂಚನೆ ಅರಿತು ಸ್ವಯಂ ನಿಯಂತ್ರಣದ ಮೂಲಕ ಅದರ ಪರಿಹಾರ ನಡೆಸುವುದು ಅಗತ್ಯವಾಗಿದೆ.

how-to-get-rid-from-migraine-pain-here-is-the-some-tips-to-manage
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jul 30, 2024, 4:35 PM IST

ಹೈದರಾಬಾದ್​: ಮೈಗ್ರೇನ್​ ಎಂಬುದು ಸಹಿಸಲಾಸಾಧ್ಯ ನೋವಾಗಿದ್ದು, ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಾಗಿದ್ದು, ಸಹಿಸಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಕೆಲವು ಬಾರಿ ಈ ನೋವು ಬರುವ ಮುನ್ಸೂಚನೆ ತಿಳಿದು ಇದರ ಬಗ್ಗೆ ಅಗತ್ಯ ಕಾಳಜಿ ವಹಿಸಬಹುದಾಗಿದೆ. ಈ ನೋವು ಬಗ್ಗೆ ಮುನ್ಸೂಚನೆ ತಿಳಿಯಲು ಅಗತ್ಯ ಕ್ರಮ ಎಂದರೆ, ದೇಹದಲ್ಲಿ ಉಂಟಾಗುವ ಬದಲಾವಣೆ ಗಮನಿಸುವುದಾಗಿದೆ.

ಮುನ್ಸೂಚನೆ ತಿಳಿಯಿರಿ: ಮೈಗ್ರೇನ್​ ದಾಳಿಗೆ ಒಳಗಾಗುವುದರಲ್ಲಿ ಇದರ ಲಕ್ಷಣದ ಮುನ್ಸೂಚನೆ ಅರಿವು ಇರುತ್ತದೆ. ಇದರ ಅನುಸಾರ ಕ್ರಮಕ್ಕೆ ಮುಂದಾಗಬಹುದು. ಇನ್ನು ಕೆಲವರಲ್ಲಿ ಮಲಬದ್ಧತೆ ಅಥವಾ ನೀರಿನಂತಹ ಭೇದಿ, ಮನಸ್ಥಿತಿ ಬದಲಾವಣೆ, ಕುತ್ತಿಗೆ ನೋವು, ಆಗಾಗ್ಗೆ ನೀರು ಕುಡಿಯುವ ಲಕ್ಷಣಗಳನ್ನು ಕೆಲವರು ಅನುಭವಿಸುತ್ತಾರೆ. ಈ ಲಕ್ಷಣಗಳು ಮೈಗ್ರೇನ್​ ಸಂಭವಿಸುವ ಒಂದೆರಡು ದಿನಗಳ ಮೊದಲು ಕಾಣಿಸುತ್ತದೆ. ಮತ್ತು ಕೆಲವರು ಕಣ್ಣಿನ ಸುತ್ತ ಬೆಳಕಿನ ಉಂಗುರಗಳನ್ನು ಕಾಣುತ್ತಾರೆ. ಕಣ್ಣಿನ ಆಕಾರ, ಬೆಳಕಿನ ಪ್ರಖರತೆಗಳು ಅವರ ದೃಷ್ಟಿಗೆ ಅಡ್ಡಿಯಾಗಬಹುದು. ಕೆಲವರಲ್ಲಿ ಶಬ್ಧ ಅಥವಾ ಸಂಗೀತವೂ ಕೂಡಾ ಕಿರಿಕಿರಿಯಾಗಿಸಬಹುದು. ಕಾಲು ಮತ್ತು ತೊಡೆಗಳು ಸೂಜಿಯಿಂದ ಚುಚ್ಚಿದ ರೀತಿ ಅನುಭವಕ್ಕೆ ಒಳಗಾಗಬಹುದು.

ಮೈಗ್ರೇನ್​ ಹೊಂದಿರುವವರು ಮಾಡಬೇಕಿರುವ ಕ್ರಮ

  • ತಕ್ಷಣಕ್ಕೆ ವೈದ್ಯರು ಸಲಹೆ ನೀಡಿದ ಮಾತ್ರೆಗಳನ್ನು ನುಂಗುವುದು
  • ಅಗತ್ಯವಾದಲ್ಲಿ ವಿಶ್ರಾಂತಿ ಪಡೆಯಿರಿ. ಕತ್ತಲ ಕೋಣೆಯಲ್ಲಿ ಅಗತ್ಯ ನಿದ್ರೆ ಮಾಡಿ.
  • ಕೆಲವು ಜನರು ಕಾಫಿ ಮತ್ತು ಟೀ ಕುಡಿದಾಗ ತಾಜಾತನಕ್ಕೆ ಒಳಗಾಗುತ್ತೇವೆ ಎಂದು ನಂಬಿರುತ್ತಾರೆ. ಆದರೆ, ಇದನ್ನು ಹೆಚ್ಚು ಸೇವಿಸಬಾರದು
  • ಸಣ್ಣ ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಐಸ್​ ಕ್ಯೂಬ್​ಗಳನ್ನು ಹಾಕಿ, ಅದನ್ನು ನಿಮ್ಮ ತಲೆ ಅಥವಾ ಕುತ್ತಿಗೆ ಬಳಿ ಇರಿಸಿ. ಕೆಲವರಿಗೆ ಬಿಸಿ ಕಪ್​ ಕೂಡ ಆರಾಮದಾಯಕ ಎನಿಸಬಹುದು.
  • ಸಾಕಷ್ಟು ನೀರು ಕುಡಿಯಿರಿ.

ಏನು ಮಾಡಬಾರದು:

  • ಹೆಚ್ಚು ಔಷಧಗಳನ್ನು ತೆಗೆದುಕೊಳ್ಳಬಾರದು. ತಿಂಗಳಲ್ಲಿ 10 ದಿನಕ್ಕಿಂತ ಹೆಚ್ಚು ಸಮಯ ನೋವು ನಿವಾರಕ ಔಷಧ ಸೇವಿಸಿದರೆ, ನೀವು ಅತಿ ಹೆಚ್ಚು ಬಳಕೆ ಮಾಡುತ್ತಿದ್ದೀರಿ ಎಂದು ಅರ್ಥ. ಇದು ಮತ್ತೆ ತಲೆ ನೋವಿಗೆ ಕಾರಣವಾಗಬಹುದು.
  • ಊಟ, ತಿಂಡಿಗಳನ್ನು ತಪ್ಪಿಸಬೇಡಿ. ಜೊತೆಗೆ ಊಟದ ನಡುವಿನ ಅಂತರವನ್ನು ಹೆಚ್ಚಿಸಬೇಡಿ. ಆದಾಗ್ಯೂ, ಆಲ್ಕೋಹಾಲ್​, ಚಾಕೋಲೆಟ್​ ಮತ್ತು ಕೃತಕ ಸಕ್ಕರೆ ಅಂಶ ಇರುವ ಪದಾರ್ಥಗಳನ್ನು ಕೂಡ ತಪ್ಪಿಸುವುದು ಅಗತ್ಯ. ಇದು ಕೂಡ ಬೆನ್ನು ನೋವಿಗೆ ಕಾರಣವಾಗುತ್ತದೆ.
  • ಒತ್ತಡ, ಅತಿ ಹೆಚ್ಚು ಚಿಂತೆಗಳು ಕೂಡ ಮೈಗ್ರೇನ್​ ನೋವನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಒತ್ತಡ ನಿವಾರಣೆ ತಂತ್ರಗಳು, ಮಸಾಜ್​ ಅಥವಾ ಪ್ರಾಣಾಯಾಮ ಮತ್ತು ಧ್ಯಾನದಂತಹ ಚಟುವಟಿಕೆಯಲ್ಲಿ ಭಾಗಿಯಾಗಿ.

ಸೂಚನೆ: ಇಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಮಾಹಿತಿ ಮತ್ತು ಸೂಚನೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ಸಂಶೋಧನೆ, ಅಧ್ಯಯನ, ವೈದ್ಯಕೀಯ ಮತ್ತು ಆರೋಗ್ಯಕರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮುನ್ನ ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮೈಗ್ರೇನ್​ ಪದೇ ಪದೇ ಕಾಡುತ್ತಿದ್ಯಾ; ಇದಕ್ಕೆ ಸಂಶೋಧಕರು ತಿಳಿಸಿದ ಕಾರಣ ಏನ್​ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.