ETV Bharat / entertainment

ರಾಜಮೌಳಿ ಕುರಿತ ಡಾಕ್ಯುಮೆಂಟರಿ​​ 'ಮಾಡರ್ನ್ ಮಾಸ್ಟರ್ಸ್‌' TO ಬ್ಯಾಟ್​ಮ್ಯಾನ್​: ಈ ವಾರದ ಒಟಿಟಿ ಪ್ರಾಜೆಕ್ಟ್​​​ಗಳಿವು - OTT Projects

author img

By ETV Bharat Entertainment Team

Published : Jul 30, 2024, 5:30 PM IST

Updated : Jul 30, 2024, 7:49 PM IST

ವಿವಿಧ ಜಾನರ್​ಗಳ ಸಿನಿಮಾ, ಸೀರಿಸ್​ಗಳು ಈ ವಾರ ಒಟಿಟಿ ಪ್ರವೇಶಿಸಲು ಸಜ್ಜಾಗಿದೆ.

OTT Projects of This Week
ಈ ವಾರ ಬಿಡುಗಡೆಯಾಗಲಿರುವ ಒಟಿಟಿ ಪ್ರಾಜೆಕ್ಟ್​​​ಗಳು (Film Poster)

ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಹಲವು ಸಿನಿಮಾ, ಸರಣಿಗಳು ಸಜ್ಜಾಗಿವೆ. ಬಹು ನಿರೀಕ್ಷಿತ ಸೀರಿಸ್​​ 'ಮಾಡರ್ನ್ ಮಾಸ್ಟರ್ಸ್‌'ನಿಂದ ಹಿಡಿದು ವಿವಿಧ ಜಾನರ್​ಗಳ ಚಿತ್ರಗಳು ಈ ವಾರ ಒಟಿಟಿ ಪ್ರವೇಶಿಸಲು ಸಜ್ಜಾಗಿದೆ. ಜನಪ್ರಿಯ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಈ ವಾರಾಂತ್ಯ ಬಿಡುಗಡೆಯಾಗಲಿರುವ ಹೊಸ ಸಿನಿಮಾಗಳು ಹಾಗೂ ವೆಬ್ ಸರಣಿಗಳ ಮಾಹಿತಿ ಇಲ್ಲಿದೆ.

''ಮಾಡರ್ನ್ ಮಾಸ್ಟರ್ಸ್: ಎಸ್​​​ಎಸ್​​ ರಾಜಮೌಳಿ'' - ಆಗಸ್ಟ್ 2 (ನೆಟ್‌ಫ್ಲಿಕ್ಸ್)

ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ಎಸ್​.ಎಸ್​ ರಾಜಮೌಳಿ ಅವರ ಕುರಿತ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ನಿರ್ಮಾಣಗೊಂಡಿದೆ. ಈ ಜೀವನಚರಿತ್ರೆ ಎಸ್​.ಎಸ್​ ರಾಜಮೌಳಿ ಅವರ ವೃತ್ತಿಜೀವನದ ಸುತ್ತ ಸುತ್ತುತ್ತದೆ. ಈಗ, ಬಾಹುಬಲಿ ಮತ್ತು ಆರ್‌ಆರ್‌ಆರ್‌ನಂತಹ ರೆಕಾರ್ಡ್ ಬ್ರೇಕಿಂಗ್​​​ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕರ ಕುರಿತಾದ ಡಾಕ್ಯುಮೆಂಟರಿ, ಅವರ ಕಲಾತ್ಮಕ ಬೆಳವಣಿಗೆ ಪ್ರದರ್ಶಿಸಲಿದೆ. ಸಾಧಾರಣ ಜೀವನದಿಂದ ಹಿಡಿದು ಚಲನಚಿತ್ರೋದ್ಯಮದಲ್ಲಿ ಉನ್ನತ ಮಟ್ಟಕ್ಕೆ ಏರುವವರೆಗಿನ ಅಂಶಗಳನ್ನು ಈ ಪ್ರೊಜೆಕ್ಟ್​​ ಒಳಗೊಂಡಿರಲಿದೆ.

ರಾಜಮೌಳಿ ಅವರ ಆಪ್ತರಾದ ಪ್ರಭಾಸ್, ಜೂನಿಯರ್ ಎನ್‌ಟಿಆರ್, ರಾಣಾ ದಗ್ಗುಬಾಟಿ ರಾಮ್ ಚರಣ್ ಮತ್ತು ಜೋ ರುಸ್ಸೋ, ಜೇಮ್ಸ್ ಕ್ಯಾಮರೂನ್‌ರಂತಹ ಚಲನಚಿತ್ರೋದ್ಯಮದ ಐಕಾನ್‌ಗಳೊಂದಿಗಿನ ವಿಶೇಷ ಸಂದರ್ಶನಗಳನ್ನು ಇದರಲ್ಲಿ ಸೇರಿಸಲಾಗಿದೆ. ನಿರ್ದೇಶಕರ ಅಗಾಧ ಸಾಧನೆಗಳನ್ನು ಪ್ರದರ್ಶಿಸುವುದರ ಜೊತೆಗೆ, ಅವರ ಸಿನಿಮಾ ತಯಾರಿಕೆಯ ಪ್ರಕ್ರಿಯೆಯಲ್ಲಿನ ತೆರೆಮರೆಯ ಇಣುಕುನೋಟವನ್ನು ಈ ಡಾಕ್ಯುಮೆಂಟರಿ ನೀಡಲಿದೆ. ಆಗಸ್ಟ್ 2 ನೆಟ್‌ಫ್ಲಿಕ್ಸ್​ನಲ್ಲಿ ಪ್ರಸಾರ ಕಾಣಲಿದೆ.

''ಕಿಂಗ್‌ಡಮ್ ಆಫ್ ದಿ ಪ್ಲಾನೆಟ್ ಆಫ್ ದಿ ಏಪ್ಸ್'' - ಆಗಸ್ಟ್ 2 - (ಡಿಸ್ನಿ+ ಹಾಟ್‌ಸ್ಟಾರ್)

ಪ್ಲಾನೆಟ್ ಆಫ್ ದಿ ಏಪ್ಸ್ ರೀಬೂಟ್ ಸರಣಿಯ ನಾಲ್ಕನೇ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿಂಪಾಜಿ (chimpanzee) ಸುತ್ತ ಕಥೆ ಸಾಗುತ್ತದೆ. ಕಥೆಯು ಓವನ್ ಟೀಗ್ ನಿರ್ವಹಿಸಿದ ಚಿಂಪಾಂಜಿ ನೋವಾ ಮತ್ತು ಸ್ನೇಹಿತರಾದ ಸೂನಾ (ಲಿಡಿಯಾ ಪೆಕ್ಹ್ಯಾಮ್) ಮತ್ತು ಅನಯಾ (ಟ್ರಾವಿಸ್ ಜೆಫ್ರಿ)ರ ಸುತ್ತ ಸುತ್ತುತ್ತದೆ. ಆಗಸ್ಟ್ 2 ರಂದು ಡಿಸ್ನಿ ಪ್ಲಸ್​​ ಹಾಟ್​​​​ಸ್ಟಾರ್​​​​ನಲ್ಲಿ ಬಿಡುಗಡೆ ಆಗಲಿದೆ.

''ಬ್ಯಾಟ್‌ಮ್ಯಾನ್: ಕ್ಯಾಪ್ಡ್ ಕ್ರುಸೇಡರ್'' - ಆಗಸ್ಟ್ 1 (ಪ್ರೈಮ್​​ ವಿಡಿಯೋ)

'ಬ್ಯಾಟ್‌ಮ್ಯಾನ್: ಕ್ಯಾಪ್ಡ್ ಕ್ರುಸೇಡರ್' ಆಗಸ್ಟ್ 1 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಕಥೆ ಗೋಥಮ್ ಸಿಟಿಯ ಸುತ್ತ ಸುತ್ತುತ್ತದೆ.

''ಅನ್​ಸ್ಟೇಬಲ್​​​ ಸೀಸನ್ 2'' - ಆಗಸ್ಟ್ 1 (ನೆಟ್‌ಫ್ಲಿಕ್ಸ್)

ಅನ್​ಸ್ಟೇಬಲ್​​​ ಸೀಸನ್ 2 ನೆಟ್​ಫ್ಲಿಕ್ಸ್​ನಲ್ಲಿಆಗಸ್ಟ್ 1ರಿಂದ ಸ್ಟ್ರೀಮ್​ ಆಗಲಿದೆ. ತಂದೆ-ಮಗ ಜೋಡಿ ಎಲ್ಲಿಸ್ (ರಾಬ್ ಲೋವ್) ಮತ್ತು ಜಾಕ್ಸನ್ (ಜಾನ್ ಓವೆನ್ ಲೋವ್) ಅವರ ಹಾಸ್ಯಮಯ, ಹೃದಯಸ್ಪರ್ಶಿ ಕಥೆಯನ್ನು ಹೇಳಲಿದೆ.

ಬಾರ್ಡರ್​​​​ಲೆಸ್​​​ ಫಾಗ್​​ - ಆಗಸ್ಟ್ 1 (ನೆಟ್‌ಫ್ಲಿಕ್ಸ್)

ಈ ಇಂಡೋನೇಷ್ಯಾ ಸಿನಿಮಾ ಮೂಲತಃ ಕಬುತ್ ಬೆರ್ದುರಿ ಎಂದು ಹೆಸರಿಸಲ್ಪಟ್ಟಿದೆ. ಇಂಡೋನೇಷ್ಯಾ-ಮಲೇಷ್ಯಾ ಗಡಿಯ ಬಳಿ ನಿಗೂಢ ಸರಣಿ ಕೊಲೆಗಳ ತನಿಖೆಯನ್ನು ಪ್ರಾರಂಭಿಸಿಸುವ ಸಂಜಾ (ಪುತ್ರಿ ಮರಿನೋ) ಅವರ ಸುತ್ತ ಸುತ್ತುತ್ತದೆ. ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಅನೇಕ ತಿರುವುಗಳು ಎದುರಾಗುತ್ತವೆ.

ಇದನ್ನೂ ಓದಿ: ನನ್ನ ಹೆಸರ ಮುಂದೆ ಪತಿ ಅಮಿತಾಭ್​​​ ಹೆಸರೇಕೆ? ಪಾರ್ಲಿಮೆಂಟ್​ನಲ್ಲಿ ಜಯಾ ಬಚ್ಚನ್​ ಗರಂ - Jaya Bachchan

Last Updated : Jul 30, 2024, 7:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.