ETV Bharat / state

ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

Sexual harassment in flight: ಮದ್ಯ ಸೇವಿಸಿದ್ದ ಪ್ರಯಾಣಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದೆ.

sexual harassment
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By ETV Bharat Karnataka Team

Published : Nov 23, 2023, 10:47 AM IST

ದೇವನಹಳ್ಳಿ: ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿಯೊಬ್ಬ ಮಹಿಳೆಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 17ರಂದು ಇಂಡಿಗೋ ಏರ್‌ಲೈನ್ಸ್​ನ 6E556 ವಿಮಾನವು ಜೈಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವಾಗ ಘಟನೆ ನಡೆದಿದೆ. 27ಡಿ ಸಂಖ್ಯೆಯ ಸೀಟ್​ನಲ್ಲಿ ಕುಳಿತಿದ್ದ ರಣಧೀರ್ ಸಿಂಗ್ ಎಂಬಾತ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳಾ ಸಹ ಪ್ರಯಾಣಿಕರ ಕೈ ಹಿಡಿದು ಅವಾಚ್ಯ ಶಬ್ದಗಳಿಂದಲೂ ಬೈಯ್ದುಕೊಳ್ಳುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ ಆರೋಪಿ ವಿರುದ್ಧ ಐಪಿಸಿ ಕಲಂ 354 ಎ (ಲೈಂಗಿಕ ಕಿರುಕುಳ) ಕಾಯ್ದೆಯಡಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇತ್ತೀಚಿನ ಪ್ರಕರಣಗಳು-ಗಗನಸಖಿ ಜೊತೆ ಅಸಭ್ಯ ವರ್ತನೆ: ವಿಮಾನದಲ್ಲಿ ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ವಿದೇಶಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಕಳೆದ ಆಗಸ್ಟ್​ ತಿಂಗಳಲ್ಲಿ ಬಂಧಿಸಿದ್ದರು. ಮಾಲ್ಡೀವ್ಸ್ ಮೂಲದ ಅಕ್ರಂ ಅಹಮದ್ (51) ಬಂಧಿತ ಆರೋಪಿ. 33 ವರ್ಷದ ಗಗನಸಖಿ ನೀಡಿದ ದೂರಿನ ಅನ್ವಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದರು.

ಇದನ್ನೂ ಓದಿ: ಗಗನಸಖಿ ಜೊತೆ ಅಸಭ್ಯ ವರ್ತನೆ : ಮಾಲ್ಡೀವ್ಸ್ ಪ್ರಜೆ ಬಂಧನ

ಕಳೆದ ಆಗಸ್ಟ್ 18ರಂದು ಮಾಲೆಯಿಂದ ಬೆಂಗಳೂರಿಗೆ ಬಂದಿದ್ದ ವಿಮಾನದಲ್ಲಿ ಪ್ರಯಾಣಿಸಿದ್ದ ಆರೋಪಿ, ಕ್ಯಾಬಿನ್ ಕ್ರೂ ಯುವತಿಯನ್ನು ಕರೆದು ಬಿಯರ್ ಹಾಗೂ ಗೋಡಂಬಿ ಕೇಳಿದ್ದಾನೆ. ಸರ್ವ್ ಮಾಡುವ ಸಂದರ್ಭದಲ್ಲಿ 51 ವರ್ಷಗಳಿಂದಲೂ ನಿನ್ನಂತೆ ಇರುವ ಹುಡುಗಿಯನ್ನು ಹುಡುಕುತ್ತಿದ್ದೇನೆ. 10 ಡಾಲರ್ ಬದಲು 100 ಡಾಲರ್ ಕೊಡುತ್ತೇನೆ. ಉಳಿದ ಹಣ ನೀನೇ ಇಟ್ಟುಕೋ ಎಂದು ಆಕೆಯ ದೇಹವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ವಿಮಾನದ ಪ್ರಯಾಣಿಕರ ಮಧ್ಯೆಯೇ ಮಲ , ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ಬಂಧನ

ಮೂತ್ರ ವಿಸರ್ಜನೆ ಮಾಡಿದ್ದ ಪ್ರಯಾಣಿಕ ಸೆರೆ: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೂತ್ರ ವಿಸರ್ಜನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಪೊಲೀಸರು ನೀಡಿದ ಮಾಹಿತಿಯಂತೆ, ಏರ್ ಇಂಡಿಯಾ ವಿಮಾನದಲ್ಲಿ ರಾಮ್ ಸಿಂಗ್ ಎಂಬ ಪ್ರಯಾಣಿಕ ಮೂತ್ರ ವಿಸರ್ಜಿಸಿದ್ದ. ಅಷ್ಟೇ ಅಲ್ಲದೆ ಆತ ಪ್ರಯಾಣದುದ್ದಕ್ಕೂ ಉಗುಳುತ್ತಿದ್ದ ಎಂದು ಹೇಳಲಾಗಿತ್ತು. ಈ ಘಟನೆ ವಿಮಾನ ಸಂಖ್ಯೆ AIC866ದಲ್ಲಿ ನಡೆದಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.