ದೊಡ್ಡಬಳ್ಳಾಪುರ : ಸಿಸಿ ಕ್ಯಾಮರಾಗೆ ಟಾರ್ಚ್ ಬಿಟ್ಟು ಮನೆಯ ಕಾಂಪೌಂಡ್ ಒಳಗಡೆ ಇದ್ದ ಸ್ಕೂಟರ್ ಅನ್ನು ಖದೀಮರು ಕದ್ದೊಯ್ದ ಘಟನೆ ನಗರದ ಮುಕ್ತಾಂಬಿಕ ಬಡಾವಣೆಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವೇಣು ಎಂಬವರ ಮನೆಯ ಕಾಪೌಂಡ್ ಒಳಗಡೆ ನಿಲ್ಲಿಸಲಾಗಿದ್ದ ಹೊಂಡ ಆ್ಯಕ್ವಿವ ಸ್ಕೂಟರ್ ಅನ್ನು ಕಳ್ಳತನ ಮಾಡಲಾಗಿದೆ. ಖತರ್ನಾಕ್ ಖದೀಮರು ಸಿಸಿಟಿವಿ ಕ್ಯಾಮರಾಗೆ ಲೈಟ್ ಹೊಡೆದು ಸ್ಕೂಟರ್ ಎಗರಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಓದಿ : ಅಪರಿಚಿತ ವಾಹನ ಡಿಕ್ಕಿ: ಹೊಸಪೇಟೆಯಲ್ಲಿ ಇಬ್ಬರು ಬೈಕ್ ಸವಾರರು ದುರ್ಮರಣ
ಲಾಕ್ ಡೌನ್ ತೆರವಾದ ಬಳಿಕ ನಗರದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಅನ್ಲಾಕ್ ಬಳಿಕ ಇದುವರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ 16 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.