ಬೆಂಗಳೂರು/ಆನೇಕಲ್: ಜಮೀರ್ ಅಹಮದ್ಗೆ ಪಾಕಿಸ್ತಾನದ ಒಲವು ಆಗಿಂದಾಗ್ಗೆ ಉಕ್ಕಿ ಬರುತ್ತೆ. ಈ ದೇಶದ ಅನ್ನ ತಿಂದು ಇಲ್ಲಿ ಜೀವಿಸಿ ಪಾಕಿಸ್ತಾನವನ್ನೇ ಹೊಗಳುವುದು ಅವರಿಗೆ ವಾಡಿಕೆಯಾಗಿದೆ. ಅಷ್ಟು ಒಲವಿದ್ದರೆ ಆತ ಅಲ್ಲಿಗೇ ಹೋಗಲಿ ಎಂದು ಬೊಮ್ಮನಹಳ್ಳಿ ಶಾಸಕ ಶಾಸಕ ಸತೀಶ್ ರೆಡ್ಡಿ ಕಿಡಿ ಹೇಳಿದ್ದಾರೆ.
ಬೊಮ್ಮನಹಳ್ಳಿ ಭಾಗದ ಗಾರ್ಮೆಂಟ್ಸ್ ಕಾರ್ಮಿಕರಿಗೆ 20 ಸಾವಿರ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾತು ಮುಂದುವರೆಸಿ ಕಳೆದ ಪಾದರಾಯನಪುರ ಗಲಭೆಕೋರರಿಗೆ ಹೂ ಚೆಲ್ಲಿ ಸ್ವಾಗತಿಸಿದ್ದಾರೆ. ಜಮೀರ್ ಹೇಳಿಕೆಗಳು ದೇಶದ್ರೋಹದ್ದಾಗಿವೆ. ಬೆಡ್ ಬ್ಲಾಕಿಂಗ್ ದಂಧೆ ಹಗರಣದಲ್ಲಿ ಸಿಲುಕಿಕೊಂಡವರು ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಇರುವುದು ಬಯಲಿಗೆ ಬರುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಪ ಮಾಡಿದಾಗಲೂ ಬಾಬು ಎಂಬುವರು ಯಾರು ಎಂದು ನಮಗೆ ತಿಳಿದಿರಲಿಲ್ಲ. ನನ್ನ ಸಂಪರ್ಕದಲ್ಲಿಯೇ ಇರದ ಬಾಬು ಹೆಸರಿನ ಜೊತೆಗೆ ನನ್ನ ಹೆಸರನ್ನು ಪ್ರಸ್ತಾಪಿಸಿರುವುದು ಒಂದು ಷಡ್ಯಂತ್ರವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಓದಿ: ನಮ್ಮಲ್ಲಿ ಸಿದ್ದರಾಮಯ್ಯ, ಡಿಕೆಶಿ ಬಣಗಳಿಲ್ಲ.. ಇರೋದೊಂದೇ ಅದು ಕಾಂಗ್ರೆಸ್ : ಸಿದ್ದರಾಮಯ್ಯ