ETV Bharat / state

ಮರಗಳನ್ನ ರಕ್ಷಿಸುವುದಾಗಿ ಸಿಎಂ ಮಾತು ಕೊಟ್ಟಿದ್ದಾರೆ: ಸಾಲು ಮರದ ತಿಮ್ಮಕ್ಕ

ಹೆಸರಘಟ್ಟದ ಐಐಹೆಚ್​ಆರ್​ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ 26 ಎಕರೆ ವಿಸ್ತೀರ್ಣದ ಜೈವಿಕ ಉದ್ಯಾನ ಉದ್ಘಾಟಿಸಿದರು. ಮಕ್ಕಳಂತೆ ಬೆಳೆಸಿರುವ ಮರಗಳನ್ನು ರಕ್ಷಿಸಿ ಎಂದು ಸಿಎಂ ಬಳಿ ಮನವಿ ಮಾಡಿದ್ದಕ್ಕೆ ಅವರು ಸಹ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ತಿಮ್ಮಕ್ಕ ಹೇಳಿದ್ರು.

ಸಾಲು ಮರದ ತಿಮ್ಮಕ್ಕ
author img

By

Published : Jun 7, 2019, 6:05 AM IST

Updated : Jun 7, 2019, 7:43 AM IST

ನೆಲಮಂಗಲ: ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರು ಹೊರವಲಯದ ಹೆಸರಘಟ್ಟದ ಐಐಹೆಚ್ ಆರ್ ನಲ್ಲಿ 25 ಎಕರೆ ವಿಸ್ತಿರ್ಣದ ಜೈವಿಕ ಉದ್ಯಾನವನವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕೆ ಉದ್ಘಾಟಿಸಿದ್ದಾರೆ.

ಹೆಸರ ಘಟ್ಟದ ಐಐಹೆಚ್ ಆರ್ ನಲ್ಲಿ ಜೈವಿಕ ಉದ್ಯಾನ ಉದ್ಘಾಟಿಸಿದ ಸಾಲು ಮರದ ತಿಮ್ಮಕ್ಕ

ವಿಶ್ವ ಪರಿಸರ ದಿನವನ್ನು ವಾಯು ಮಾಲಿನ್ಯ ಶಿರ್ಷಿಕೆಯಡಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಅವರಣದಲ್ಲಿ ಜೈವಿಕ ಉದ್ಯಾನವನ್ನು ಸ್ಥಾಪನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹೆಸರಘಟ್ಟದ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜೈವಿಕ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು.

ಜೈವಿಕ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಈ ದಿನ ಮರ ಹಾಕುವ ಭಾಗ್ಯ ನನ್ನದು. ನಾನು ನನ್ನ ಪತಿ ನಾಲ್ಕು ಕಿ.ಮೀ ಮರಗಳನ್ನು ಹಾಕಿ ಮಕ್ಕಳಂತೆ ಪೋಷಿಸಿದೆವು. ಇವತ್ತು ಇದೇ ಮರಗಳು ನಮಗೆ ಹೆಮ್ಮ ತಂದಿವೆ. ಹಾಗೆ ಮರಗಳನ್ನು ರಕ್ಷಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ ಎಂದರು.

ಸಾಲು ಮರದ ತಿಮ್ಮಕ್ಕ ತಮ್ಮ ಪತಿ ಜೊತೆಯಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಿಂದ ಕುದೂರು ಗ್ರಾಮದವರೆಗೂ ಸುಮಾರು 4 ಕಿ.ಮೀ ಸಾಲು ಮರಗಳನ್ನು ಹಾಕಿ ಅವುಗಳನ್ನು ತಮ್ಮ ಮಕ್ಕಳಂತೆ ಸಾಕಿದ್ರು. ಇದೀಗ ಈ ಮರಗಳು ಬೃಹದಾಗಿ ಬೆಳೆದು ದಾರಿಹೋಕರಿಗೆ ನೆರಳು ಮತ್ತು ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲು ನೀಡುತ್ತಿವೆ. ರಾಜ್ಯ ಹೆದ್ದಾರಿ 94ರ ಹಲಗೂರು ಮತ್ತು ಬಾಗೇಪಲ್ಲಿ ರಸ್ತೆ ಅಗಲೀಕರಣದಿಂದ ಸಾಲು ಮರದ ತಿಮ್ಮಕ್ಕನವರ ಮರಗಳಿಗೆ ಕೊಡಲಿ ಬಿಡುವ ಸಾಧ್ಯತೆ ಇತ್ತು.

ಎರಡು ಮೂರು ದಿನಗಳಿಂದ ರಸ್ತೆ ಮಾಡಲು ಮರ ಕಡಿಯುವುದಾಗಿ ಹೇಳಿ ನಿನ್ನೆ ಮೊನ್ನೆ ನಮಗೆ ಸಾಕಷ್ಟು ಹಿಂಸೆ ಕೊಟ್ಟರು. ನಾನು ಯಾವುದೇ ಕಾರಣಕ್ಕೂ ಮರಗಳನ್ನ ಕತ್ತರಿಸೊಕ್ಕೆ ಬಿಡೋದಿಲ್ಲ. ಈ ಸಾಲು ಮರಗಳಿಂದ ಹುಲಿಕಲ್ ಮತ್ತು ಕುದೂರು ಜನತೆಗೆ ಒಳ್ಳೆಯದಾಗಿದೆ. ಮರಗಳನ್ನು ಕಡಿಯದಂತೆ ಮನವಿ ಮಾಡಲು ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ಭೇಟಿ ಮಾಡಿದ್ದೆ. ದೇಶಕ್ಕೋಸ್ಕರ ಮರಗಳನ್ನ ಕಡಿಯದಂತೆ ಕಾಪಾಡಿ ಅಂತ ಮನವಿ ಸಲ್ಲಿಸಿದ್ದು, ಸಿಎಂ ಅವರು ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯೊಕ್ಕೆ ಬಿಡಲ್ಲ ಅಂತ ಮಾತು ಕೊಟ್ಟಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ತಿಮ್ಮಕ್ಕ ಹೇಳಿದರು.

ಸೆಲ್ಫಿಗಾಗಿ ಮುಗಿ ಬಿದ್ದ ವಿದ್ಯಾರ್ಥಿಗಳು: ಹೆಸರಘಟ್ಟದ ಐಐಹೆಚ್ ಆರ್ ನಲ್ಲಿ ಜೈವಿಕ ಉದ್ಯಾನ ಉದ್ಘಾಟನೆಗೆ ಬಂದಿದ್ದ ವಿದ್ಯಾರ್ಥಿಗಳು ಸಾಲು ಮರದ ತಿಮ್ಮಕ್ಕರವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ಉದ್ಘಾಟನೆ ಮಾಡಿದ ತಕ್ಷಣವೇ ನಾಮುಂದು ತಾಮುಂದು ಎನ್ನುತ್ತ ತಿಮ್ಮಕ್ಕ ಅವರ ಬಳಿ ಬಂದು ಸೆಲ್ಫಿ ತೆಗೆಸಿಕೊಂಡರು.

Intro:
ಮರಗಳನ್ನ ಕಡಿಯದಂತೆ ಸಿಎಂ ವಾಕ್ಯ ಕೊಟ್ಟಿದ್ದಾರೆ- ಸಾಲು ಮರದ ತಿಮ್ಮಕ್ಕ
ಹೆಸರಘಟ್ಟದ ಐಐಹೆಚ್ ಆರ್ ನಲ್ಲಿ ಜೈವಿಕ ಉದ್ಯಾನ ಉದ್ಘಾಟನೆ
Body:ನೆಲಮಂಗಲ : ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರು ಹೊರವಲಯದ ಹೆಸರಘಟ್ಟದ ಐಐಹೆಚ್ ಆರ್ ನಲ್ಲಿ 25 ಎಕರೆ ವಿಸ್ತಿರ್ಣದ ಜೈವಿಕ ಉದ್ಯಾನವನವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕೆ ಉದ್ಘಾಟಸಿದರು. ಇದೇ ವೇಳೆ ಮಾತನಾಡಿದ ವೃಕ್ಷಮಾತೆ ಈ ದಿನ ಮರಗಳನ್ನು ಹಾಕುವ ಭಾಗ್ಯ ನನ್ನದು ಎಂದರು
ಈ ವರ್ಷದ ವಿಶ್ವ ಪರಿಸರ ದಿನವನ್ನು ವಾಯು ಮಾಲಿನ್ಯ ಶಿರ್ಷಿಕೆಯಾಡಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕಾಗಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಅವರಣದಲ್ಲಿ ಜೈವಿಕ ಉದ್ಯಾನವನ್ನು ಸ್ಫಾಪನೆ ಮಾಡಲಾಗಿದ್ದು. ಈ ಉದ್ಯಾನವನ್ನು ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕರವರ ಕೈಯಲ್ಲಿ ಉದ್ಘಾಟನೆ ಮಾಡಲಾಗಿದೆ. ಹೆಸರಘಟ್ಟದ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೈವಿಕ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು. 25 ಎಕರೆಯಲ್ಲಿ ತಲೆ ಎತ್ತಿರುವ ಜೈವಿಕಾ ಉದ್ಯಾನವನದ ವಿಶೇಷತೆ . ನೂರು ವಿವಿಧ ಪ್ರಭೇದಗಳನ್ನು ಒಳಗೊಂಡ ಗಿಡ ಮರಗಳನ್ನು ಬೆಳಸಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಈ ಜೈವಿಕಾ ಉದ್ಯಾನವನ ಹಲವು ಪ್ರಾಣಿ ಪಕ್ಷಿ ಮತ್ತು ಸಸ್ಯಗಳಿಗೂ ಅಶ್ರಮ ನೀಡಲಿದೆ.
ಜೈವಿಕಾ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪಶಸ್ತ್ರಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಈ ದಿನ ಮರ ಹಾಕುವ ಭಾಗ್ಯ ನನ್ನದು. ನಾನು ನನ್ನ ಪತಿ ನಾಲ್ಕು ಕಿ.ಮೀ ಮರಗಳನ್ನು ಹಾಕಿ ಮಕ್ಕಳಂತೆ ಪೋಷಿಸಿದೆವು. ಇವತ್ತು ಇದೇ ಮರಗಳು ನಮ್ಮಗೆ ಹೆಮ್ಮ ತಂದಿದೆ. ಫಲ ಕೊಡುವ ಮರಗಳನ್ನು ಹಾಕಿ ಅವುಗಳನ್ನು ತಮ್ಮ ಮಕ್ಕಳಂತೆ ಸಾಕಿ, ಈ ಮರಗಳು ಬೀಡುವ ಹಣ್ಣುಗಳನ್ನು ಮಾರಿ ಬದುಕು ಕಟ್ಟಿಕೊಳ್ಳುವುದು. ಇದರ ಜೊತೆಗೆ ಫಲ ಕೊಡದ ಮರಗಳಾದ ಬಿದಿರು. ಸಿಗೇ ಮರಗಳು ಸಹ ತಮ್ಮ ಬದುಕಿಗೆ ಭದ್ರತೆಯನ್ನು ಕೊಡುವ ಜೊತೆಗೆ ದೇಶದಲ್ಲಿ ಒಳ್ಳೇಯ ಮಳೆ ಬೆಳೆಯಾಗುತ್ತದೆ ಎಂದು ಅರ್ಶಿವಾದ ಮಾಡಿದರು.
ಮರ ಕಡಿಯದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ.
ಸಾಲು ಮರದ ತಿಮ್ಮಕ್ಕ ತಮ್ಮ ಗಂಡನ ಜೊತೆಯಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಿಂದ ಕುದೂರು ಗ್ರಾಮದವರೆಗೂ ಸುಮಾರು 4 ಕಿ.ಮೀ ಸಾಲು ಮರಗಳನ್ನು ಹಾಕಿ ಅವುಗಳನ್ನು ತಮ್ಮ ಮಕ್ಕಳಂತೆ ಸಾಕಿದ್ರು. ಇದೀಗ ಈ ಮರಗಳು ಬೃಹತಾಗಿ ಬೆಳೆದು ದಾರಿಹೋಕರಿಗೆ ನೆರಳು ಮತ್ತು ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲು ನೀಡುತ್ತಿವೆ. ರಾಜ್ಯ ಹೆದ್ದಾರಿ 94ರ ಹಲಗೂರು ಮತ್ತು ಬಾಗೇಪಲ್ಲಿ ರಸ್ತೆ ಅಗಲೀಕರಣದಿಂದ ಸಾಲು ಮರದ ತಿಮ್ಮಕ್ಕನವರ ಮರಗಳಿಗೆ ಕೊಡಲಿ ಬಿಡುವ ಸಾಧ್ಯೆತೆ ಇತ್ತು. ಎರಡು ಮೂರು ದಿನಗಳಿಂದ ರಸ್ತೆ ಮಾಡಲು ಮರ ಕಡಿಯುವುದ್ದಾಗಿ ಹೇಳಿ ನಿನ್ನೆ ಮೊನ್ನೆ ನಮಗೆ ಸಾಕಷ್ಟು ಹಿಂಸೆ ಕೊಟ್ಟರು. ನಾನು ಯಾವುದೇ ಕಾರಣಕ್ಕೂ ಮರಗಳನ್ನ ಕತ್ತರಿಸೊಕ್ಕೆ ಬಿಡೋದಿಲ್ಲ. ಈ ಸಾಲು ಮರಗಳಿಂದ ಹುಲಿಕಲ್ ಮತ್ತು ಕುದೂರು ಜನತೆಗೆ ಒಳ್ಳೆದಾಗಿದೆ. ಮರಗಳನ್ನು ಕಡಿಯದಂತೆ ಮನವಿ ಮಾಡಲು ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ಭೇಟಿ ಮಾಡಲಾಯ್ತು, ಸಿಎಂ ಬಳಿ ದೇಶಕೊಸ್ಕರ ಮರಗಳನ್ನ ಕಡಿಯದಂತೆ ಕಾಪಾಡಿ ಅಂತ ಕೇಳಿಕೊಂಡೆ, ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯೊಕ್ಕೆ ಬೀಡಲ್ಲ ಅಂತ ವಾಕ್ಯ ಕೊಟ್ಟಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಸೆಲ್ಫಿಗಾಗಿ ಮುಗಿ ಬಿದ್ದ ವಿದ್ಯಾರ್ಥಿಗಳು
ಹೆಸರಘಟ್ಟದ ಐಐಹೆಚ್ ಆರ್ ನಲ್ಲಿ ಜೈವಿಕ ಉದ್ಯಾನ ಉದ್ಘಾಟನೆಗೆ ಬಂದ ಸಾಲು ಮರದ ತಿಮ್ಮಕ್ಕರವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಸಾಕಷ್ಟು ವಿದ್ಯಾರ್ಥಿಗಳು ಮುಗಿ ಬಿದ್ದರು. ಉದ್ಘಾಟನೆ ಮಾಡಿದ ತಕ್ಷಣವೇ ನಾಮುಂದು ತಾಮೂಂದೆಂದ ತಿಮ್ಮಕ್ಕರವರ ಬಳಿ ಬಂದು ಸೆಲ್ಫಿಗೆ ಸೆರೆಯಾದರು. ಸಾಲು ಮರದ ತಿಮ್ಮಕ್ಕ ಸಹ ಶಾಂತವಾಗಿಯೇ ಪ್ರತಿಯೊಬ್ಬರ ಸೆಲ್ಫಿಗೆ ಸಹಕರಿಸಿದರು

ಬೈಟ್:1- ಡಾ. ಎಂ. ಆರ್ ದಿನೇಶ್, ನಿರ್ದೇಶಕರು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಧೆ
ಬೈಟ್ :2- ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ

Conclusion:
Last Updated : Jun 7, 2019, 7:43 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.