ಆನೇಕಲ್: ಹುಡುಗಿಯನ್ನು ಬಳಸಿ ಪೂಜಾರಿಗೆ ಇನ್ಸ್ಟಾಗ್ರಾಂ ಮೂಲಕ ಬಲೆಗೆ ಬೀಳಿಸಿ ಸುಲಿಗೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಬನ್ನೇರುಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 12 ರಂದು ಬೆಂಗಳೂರಿನ ಜೆಪಿ ನಗರದ ವಾಸಿ ಪೂಜಾರಿ ಶಶಾಂಕ್ಗೆ ಇದೇ ಜೆಪಿ ನಗರದ ಮೊಹಮದ್ (23) ಸಮೀರ್(21) ಗೊಟ್ಟಿಗೆರೆಯ ಎಸ್ವಿ ಋತಿಕ್ ವಿಷ್ಣು (23) ಶಾಹಿದ್ (23) ಮತ್ತು ಯಾಸಿನ್ ಪಾಷ (20) ಸೇರಿ ಗೊತ್ತಾಗದಂತೆ ಹುಡುಗಿಯಿಂದ ಇನ್ಸ್ಟಾಗ್ರಾಮ್ ಮೂಲಕ ಪ್ರೇಮದ ಬಲೆಗೆ ಬೀಳಿಸಿ ಬನ್ನೇರುಘಟ್ಟ ಹಕ್ಕಿಪಿಕ್ಕಿ ಕಾಲೋನಿಯ ಬಂಡೆಗೆ ಕರೆಸಿ ಐವರೂ ಏಕಾಏಕಿ ಶಶಾಂಕ್ಗೆ ಥಳಿಸಿ ಒಂದು ಐಫೋನ್, ಚಿನ್ನದ ಓಲೆ, ಕತ್ತಿನ ಸರ, ಚಿನ್ನದ ಗಟ್ಟಿ, ಸೇರಿ ಚಿನ್ನದ ಉಂಗುರಗಳನ್ನು ಕಸಿದು ಪರಾರಿಯಾಗಿರುತ್ತಾರೆ.
ಇದನ್ನೂ ಓದಿ : ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್ ಕಂಪನಿಗೆ ಟೋಪಿ ಹಾಕಿದ ವಂಚಕರು ಅಂದರ್
ಶಶಾಂಕ್ ಕಡೆಯಿಂದ ದೂರು ದಾಖಲಿಸಿಕೊಂಡು ಆರೋಪಿಗಳ ಬೆನ್ನತ್ತಿದ ಪಿಐ ಉಮಾ ಮಹೇಶ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್ಐ ಸಿದ್ದನಗೌಡ, ಎಎಸ್ಐ ಸರಸ್ವತಿ, ಹೆಚ್ಸಿ ದಿನೇಶ್, ಚೆನ್ನವೀರಯ್ಯ, ಕೋಟೇಶ್, ಹನುಮಂತಯ್ಯ, ಪ್ರಕಾಶ್, ಶಿವಕುಮಾರ್ ಮುಂತಾದವರ ಪರಿಶ್ರಮದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ತಿಬೆಲೆ ಗಡಿ ಚೆಕ್ ಪೋಸ್ಟ್ ದಾಖಲೆಯಿಲ್ಲದ 13 ಲಕ್ಷ ನಗದು, ಕಾರು ವಶ: ಕಳೆದ 15 ರಿಂದ ಆನೇಕಲ್ ಉಪವಿಭಾಗದ ಪೊಲೀಸರು ನಡೆಸಿರುವ ಗಡಿ ಚೆಕ್ ಪೋಸ್ಟ್ ತಪಾಸಣೆಯಲ್ಲಿ ತಮಿಳುನಾಡಿನಿಂದ ಸ್ಕೋಡಾ ಕಾರಿನಲ್ಲಿ ಬರುತ್ತಿದ್ದವರಿಂದ ದಾಖಲೆಯಿಲ್ಲದ 13,42,700 ರೂಪಾಯಿಗಳ ನಗದು ಮತ್ತು 10 ಲಕ್ಷ ಬೆಲೆಯ ಸ್ಕೋಡಾ ಕಾರನ್ನು ಅತ್ತಿಬೆಲೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೇಗೂರಿನ ವಿಶ್ವಪ್ರಿಯ ಬಡಾವಣೆಯ ತಂಗಮಣಿ ಪೊಲೀಸರಿಗೆ ಸಮರಗೊಕ ಮಾಹಿತಿಯ ದಾಖಲೆ ಒದಗಿಸದ ಕಾರಣ ಈ ಕ್ರಮ ಎಂದು ಸ್ಥಳಕ್ಕೆ ಬೇಟಿ ನೀಡಿದ್ದ ಬೆಂಗಳೂರು ಗ್ರಾಮಾಂತರ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಇದನ್ನೂ ಓದಿ : ಮಂಗಳೂರಿನಲ್ಲಿ ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣ: ಮೂವರು ಸ್ಮಗ್ಲರ್ ಸೇರಿ ಆರು ಮಂದಿ ಬಂಧನ
ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಕೆ : 21,000 ರೂಪಾಯಿ ಬೆಲೆ ಬಾಳುವ 63,550 ಎಂಎಲ್ ಅಕ್ರಮ ಮದ್ಯ, 25,000 ಮೌಲ್ಯದ 1 ಕಿಲೋ 250 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಚುನಾವಣಾ ಆಯೋಗದ ನಿಯಮದಂತೆ ಚುನಾವಣಾ ಅಕ್ರಮಗಳನ್ನು ತಡೆಯಲು ಗಡಿ ತಪಾಸಣಾ ನಿಯಮಗಳನ್ನು ಪಾಲಿಸಿ ಈ ವರೆಗೆ ಒಟ್ಟು 23,88,700 ರೂ ಮೌಲ್ಯದ ಅಕ್ರಮ ಸಂಪತ್ತು ವಶಪಡಿಸಿಕೊಂಡು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಎಎಸ್ಪಿ ಎಂ ಎಲ್ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮಿನಾರಾಯಣ್ ತಿಳಿಸಿದ್ದಾರೆ.
ಇದನ್ನೂ ಓದಿ : ನೆಲಮಂಗಲ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 20 ಲಕ್ಷ , ಬೆಳ್ಳಿ ವಸ್ತು, ಸೀರೆ ವಶ