ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು. ಕೋವಿಡ್-19 ಸಾಂಕ್ರಾಮಿಕ ರೋಗ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಈ ಬಾರಿ ಸರಳ ಯುಗಾದಿ ಆಚರಿಸುವಂತೆ ಮನವಿ ಮಾಡಿದರು. ನಾನು ಸಹ ನನ್ನ ಹೆಂಡತಿಗೆ ಹೇಳಿದ್ದೇನೆ ಹೂ, ಹಣ್ಣು ಇಲ್ಲದೆ ಮನೆಯಲ್ಲಿ ಸಿಗುವ ವಸ್ತುಗಳನ್ನ ಉಪಯೋಗಿಸಿಕೊಂಡ ಯುಗಾದಿ ಹಬ್ಬ ಆಚರಿಸುವಂತೆ ಸೂಚನೆ ನೀಡಿದ್ದೇನೆ. ಪ್ರಾಣ ಮುಖ್ಯ ಯುಗಾದಿ ಹಬ್ಬ ಮುಖ್ಯವಲ್ಲ, ನಮಗೆ ಪ್ರಾಣ ಇದ್ದರೆ ಇಂತಹ ನೂರು ಯುಗಾದಿ ಹಬ್ಬ ಮಾಡಬಹುದು. ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಬಂದರೆ ಇಡೀ ಕುಟುಂಬವೇ ಕಷ್ಟ ಪಡಬೇಕಾಗುತ್ತದೆ ಎಂದು ಕೈ ಮುಗಿದು ಜನರಲ್ಲಿ ಮನವಿ ಮಾಡಿದ್ದಾರೆ.
ಸಮಾಜದ ಹಿತಕ್ಕಾಗಿ ನಿಶ್ಚಿತವಾಗಿರುವ ಮದುವೆ ದಿನಗಳನ್ನು ಮುಂದೂಡಿ ಎಂದು ಮನವಿ ಮಾಡಿದರು. ಪ್ರಧಾನ ಮಂತ್ರಿ ಮೋದಿ ಆದೇಶಕ್ಕೆ ನಾವು ಬದ್ದರಾಗಿದ್ದು , 21 ದಿನ ಇಡೀ ದೇಶವೇ ಲಾಕ್ ಡೌನ್ ಆಗಿದೆ. ದೇಶದಿಂದ ಮಹಾಮಾರಿ ಕೊರೊನ ತೊಲಗಿಸಲು ನಾವು ಕಟಿಬದ್ದರಾಗಬೇಕು. ದೇಶದ ಜನರ ಆರೋಗ್ಯದ ಮುಂದೆ ಯಾವುದೂ ದೊಡ್ಡದಲ್ಲ. ರಾಜ್ಯ ಸರ್ಕಾರ ಯುದ್ದದ ರೀತಿ ಸನ್ನದ್ದವಾಗಿದ್ದು , ನಿನ್ನೆಯಿಂದಲೇ ನಾವು ರಾಜ್ಯವನ್ನ ಬಂದ್ ಮಾಡಿದ್ದೇವೆ 24x7 ಕರ್ನಾಟಕ ಸನ್ನದ್ದವಾಗಿರುವುದಾಗಿ ಹೇಳಿದರು.