ETV Bharat / state

ಮೊದಲ ಬಾರಿ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ರವಿ ಡಿ.ಚನ್ನಣ್ಣನವರ್... ಅದ್ಧೂರಿ ಸ್ವಾಗತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರವಿ ಡಿ.ಚನ್ನಣ್ಣನವರ್ ಪ್ರತಿ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದು, ದೊಡ್ಡಬಳ್ಳಾಪುರ ನಗರಕ್ಕೆ ಭೇಟಿ ನೀಡಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಸಮಸ್ಯೆ ಆಲಿಸಿದರು.

ಮೊದಲ ಬಾರಿಗೆ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ರವಿ ಡಿ.ಚನ್ನಣ್ಣನವರ್..ಸಾರ್ವಜನಿಕರಿಂದ ಅದ್ಧೂರಿ ಸ್ವಾಗತ
author img

By

Published : Aug 17, 2019, 1:16 AM IST

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ರವಿ ಡಿ.ಚನ್ನಣ್ಣನವರ್ ಇದೇ ಮೊದಲ ಬಾರಿಗೆ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದು, ಅವರನ್ನು ಸಾರ್ವಜನಿಕರು ಅದ್ಧೂರಿಯಾಗಿ ಸ್ವಾಗತಿಸಿದರು.

ಮೊದಲ ಬಾರಿಗೆ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ರವಿ ಡಿ.ಚನ್ನಣ್ಣನವರ್..ಸಾರ್ವಜನಿಕರಿಂದ ಅದ್ಧೂರಿ ಸ್ವಾಗತ

ಇದೇ ಮೊದಲ ಬಾರಿಗೆ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿದ ರವಿ ಚನ್ನಣ್ಣನವರ್​ರನ್ನು ಸ್ವಾಗತಿಸಲು ಸಾಕಷ್ಟು ಸಾರ್ವಜನಿಕರು ಸೇರಿದ್ದು, ಹೂವು-ಹಾರ ಹಾಕಿ, ಪಟಾಕಿ ಸಿಡಿಸಿ ನೂತನ ಎಸ್ಪಿಯವರಿಗೆ ಅದ್ಧೂರಿ ಸ್ವಾಗತ ಕೋರಿದ್ರು. ಬಳಿಕ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ ರವಿ ಅವರು, ದೊಡ್ಡಬಳ್ಳಾಪುರ ಉಪ ವಿಭಾಗದ 5 ಸ್ಟೇಷನ್ ವ್ಯಾಪ್ತಿಯ ಜನರ ಸಮಸ್ಯೆ ಆಲಿಸಿದರು. ದೊಡ್ಡಬಳ್ಳಾಪುರ ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಬಗ್ಗೆ ಸಾಕಷ್ಟು ಬೇಡಿಕೆ ಬಂದಿರುವ ಹಿನ್ನೆಲೆ, ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ರು.

ಜೊತೆಗೆ ಪಟ್ಟಣದಲ್ಲಿ ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದೆ. ಪುಂಡರ ಬೈಕ್ ವೀಲಿಂಗ್​ನಿಂದ ಅಮಾಯಕ ಜನರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಪುಂಡಾಂಟ ಆಡೋರಿಗೆ ಕೇಸ್ ಖಾಯಂ, ಒದೆ ಬೋನಸ್ ಎಂದು ಎಚ್ಚರಿಕೆ ನೀಡಿದರು. ಹಾಗೆಯೇ ಗಾಂಜಾ ದಂಧೆಗೂ ಕಡಿವಾಣ ಹಾಕುವ ಎಚ್ಚರಿಕೆ ನೀಡಿದರು.

Intro:ನೂತನ ಎಸ್ಪಿ ಸಾಹೆಬ್ರೂಗೆ ದೊಡ್ಡಬಳ್ಳಾಪುರ ಜನತೆಯಿಂದ ಭವ್ಯ ಸ್ವಾಗತ.

ಪುಂಡರ ಆಟೋಟೋಪಗಳಿಗೆ ಬ್ರೇಕ್ ಕೇಸ್ ಗ್ಯಾರಂಟಿ ಒದೆ ಬೋನಸ್- ರವಿ ಡಿ ಚೆನ್ನಣ್ಣನವರ್
Body:ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರವಿ ಡಿ ಚೆನ್ನಣ್ಣನವರ್ ಪ್ರತಿ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದಾರೆ. ಹಾಗೆಯೇ ದೊಡ್ಡಬಳ್ಳಾಪುರ ನಗರಕ್ಕೆ ಭೇಟಿ ನೀಡಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಸಮಸ್ಯೆ ಅಲಿಸಿದರು.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಅಂತಾನೇ ಕರೆಸಿಕೊಳ್ಳುವ ರವಿ ಡಿ ಚೆನ್ನಣ್ಣನವರ್ ಈಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಇದು ಜಿಲ್ಲೆಯ ಜನರ ಖುಷಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿದ ರವಿ ಡಿ ಚೆನ್ನಣ್ಣನವರ್ ರಿಗೆ ದೊಡ್ಡಬಳ್ಳಾಪುರ ನಾಗರೀಕರಿಂದ ಭವ್ಯ ಸ್ವಾಗತ ಸಿಕ್ಕಿತು.

ಜನ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ ರವಿ ಡಿ ಚೆನ್ನಣ್ಣನವರ್ ದೊಡ್ಡಬಳ್ಳಾಪುರ ಉಪ ವಿಭಾಗದ 5 ಸ್ಟೇಷನ್ ವ್ಯಾಪ್ತಿಯ ಜನರ ಸಮಸ್ಯೆ ಅಲಿಸಿದರು. ದೊಡ್ಡಬಳ್ಳಾಪುರ ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಬಗ್ಗೆ ಸಾಕಷ್ಟು ಬೇಡಿಕೆ ಬಂದ ಹಿನ್ನೆಲೆ ಸರ್ಕಾರಕ್ಕೆ ಪತ್ರ ಬರೆಯುವುದ್ದಾಗಿ ಹೇಳಿದರು. ಜೊತೆಗೆ ಪಟ್ಟಣದಲ್ಲಿ ಪುಂಡಪೋಕರಿಗಳ ಹಾವಳಿ ಹೆಚ್ಚಾಗಿದೆ, ಪುಂಡರ ಬೈಕ್ ವಿಲ್ಹಿಂಗ್ ನಿಂದ ಅಮಾಯಕ ಜನ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಪುಂಡು ಪೋಕರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ರವಿ ಡಿ ಚೆನ್ನಣ್ಣನವರ್ ಪುಡಾಂಟ ಆಡೋರಿಗೆ ಕೇಸ್ ಖಾಯಂ ಒದೆ ಬೋನಸ್ ಎಚ್ಚರಿಕೆ ನೀಡಿದರು. ಹಾಗೆಯೇ ಗಾಂಜಾ ದಂಧೆಗೂ ಕಡಿವಾಣ ಹಾಕುವ ಎಚ್ಚರಿಕೆ ನೀಡಿದರು.

ರವಿ ಚನ್ನಣ್ಣನವರನ್ನು ಸ್ವಾಗತಿಸಲು ಸಾಕಷ್ಟು ಸಾರ್ವಜನಕರು ಸೇರಿದ್ದು ಪೊಲೀಸರು ಜನರ ನಿಯಂತ್ರಿಸಲು ಹರ ಸಾಹಸ ಪಟ್ಟರು, ಸೆಲ್ಪಿಗಾಗಿ ಜನರು ಮುಗಿಬಿದ್ದು ಹೂ, ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿ ನೂತನ ಎಸ್ಪಿಯವರಿಗೆ ಅದ್ದೂರಿ ಸ್ವಾಗತ ನೀಡಿದರು.

01a-ಬೈಟ್: ರವಿ ಡಿ ಚನ್ನಣ್ಣನವರ್, ಬೆಂಗಳೂರು ಗ್ರಾಮಾಂತರ ಎಸ್.ಪಿ
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.