ETV Bharat / state

ಫೇಸ್​ಬುಕ್​ನಲ್ಲಿ ಹೆಂಡತಿಯ ಫೋಟೋ ಹಾಕಿ 'RIP' ಎಂದ ಗಂಡ: ಮಹಿಳೆ ನಾಪತ್ತೆ, ಪೋಷಕರಲ್ಲಿ ಆತಂಕ - ದೊಡ್ಡಬಳ್ಳಾಪುರ ಕ್ರೈಂ ನ್ಯೂಸ್​

ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದನೊಬ್ಬ ತನ್ನ ಫೇಸ್​ಬುಕ್ ಅಕೌಂಟ್​ನಲ್ಲಿ ಹೆಂಡತಿಯ ಫೋಟೋ ಹಾಕಿ 'RIP' ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದು, ಇದೀಗ ಹೆಂಡತಿ ನಾಪತ್ತೆಯಾಗಿದ್ದಾಳೆ.

ಮಹಿಳೆ ನಾಪತ್ತೆ
ಮಹಿಳೆ ನಾಪತ್ತೆ
author img

By

Published : Feb 25, 2022, 11:26 AM IST

ದೊಡ್ಡಬಳ್ಳಾಪುರ: ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಮರುದಿನ ಗಂಡ ತನ್ನ ಫೇಸ್​ಬುಕ್ ಅಕೌಂಟ್​ನಲ್ಲಿ ಹೆಂಡತಿಯ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ಇದೀಗ ಹೆಂಡತಿ ನಾಪತ್ತೆಯಾಗಿದ್ದಾಳೆ. ಆಕೆಯ ಪೋಷಕರಲ್ಲಿ ಆತಂಕ ಮನೆಮಾಡಿದೆ.

ದೊಡ್ಡಬಳ್ಳಾಪುರ ತಾಲೂಕಿನ ಉದನಹಳ್ಳಿಯ ಆರ್ಕೆಸ್ಟ್ರಾ ಕಲಾವಿದ ಮುನಿಕೃಷ್ಣ ತನ್ನ ಹೆಂಡತಿ ಲೀಲಾವತಿ (22) ಪೋಟೋವನ್ನು ಫೇಸ್​ಬುಕ್‌ನಲ್ಲಿ ಪೋಸ್ಟ್ ಮಾಡಿ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ಪೇಸ್​ಬುಕ್ ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ ಪೋಷಕರು, ಆಕೆಗಾಗಿ ಹುಡುಕಾಡಿದ್ದಾಗ ನಾಪತ್ತೆಯಾಗಿರೋದು ಗೊತ್ತಾಗಿದೆ. ದೊಡ್ಡಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

ಫೆಬ್ರವರಿ 23ರ ರಾತ್ರಿ ಮುನಿಕೃಷ್ಣ ತನ್ನ ತಂಗಿ ಮಗನ ಬರ್ತ್​ಡೇ ಪಾರ್ಟಿಗೆ ಹೋಗಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೀಲಾವತಿ ತನ್ನ ಗಂಡನ ಜೊತೆ ಜಗಳ ಮಾಡಿದ್ದಾಳೆ. ಈ ವೇಳೆ ಮುನಿಕೃಷ್ಣ ಹೆಂಡತಿಗೆ ಹೊಡೆದಿದ್ದ ಎನ್ನಲಾಗಿದ್ದು, ಮರುದಿನ ಮಧ್ಯಾಹ್ನ ಒಂದು ಗಂಟೆಗೆ ತನ್ನ ಫೇಸ್​ಬುಕ್ ಅಕೌಂಟ್​ನಲ್ಲಿ ಹೆಂಡತಿಯ ಫೋಟೋ ಹಾಕಿ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಿದ್ದಾನೆ. ಪೋಸ್ಟ್ ನೋಡಿ ಗಾಬರಿಗೊಂಡ ಲೀಲಾವತಿ ತಂದೆ, ಉದನಹಳ್ಳಿಗೆ ಬಂದು ಮಗಳನ್ನು ಹುಡುಕಾಡಿದ್ದಾರೆ. ಮಗಳು ಪತ್ತೆಯಾಗದಿರುವುದನ್ನ ಕಂಡು, ಮುನಿಕೃಷ್ಣನೇ ಹೊಡೆದು ಸಾಯಿಸಿದ್ದಾನೆಂದು ಎಂದು ಆರೋಪಿಸಿದ್ದಾರೆ.

ಈ ಕುರಿತು ಮುನಿಕೃಷ್ಣನ ತಮ್ಮ ಮುನಿರಾಜುನನ್ನು ಕೇಳಿದ್ರೆ ಆತ ಬೇರೆಯೇ ಕಥೆ ಹೇಳುತ್ತಿದ್ದಾನೆ. ಬರ್ತ್ ಡೇ ಪಾರ್ಟಿ ವಿಚಾರಕ್ಕೆ ಅಣ್ಣ-ಅತ್ತಿಗೆ ನಡುವೆ ಜಗಳವಾಗಿದ್ದು ನಿಜ. ಮರುದಿನ ಬೆಳಗ್ಗೆ ಅತ್ತಿಗೆಗೆ ಅಣ್ಣ ಹೊಡೆದ. ಅನಂತರ ಅತ್ತಿಗೆ ಬ್ಯಾಗ್ ತೆಗೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಅಣ್ಣನ ಮೊಬೈಲ್ ಆಕೆಯ ಬಳಿ ಇದ್ದು, ಅತ್ತಿಗೆಯೇ ಅಣ್ಣನ ಫೇಸ್​ಬುಕ್ ಅಕೌಂಟ್​ನಲ್ಲಿ ತನ್ನ ಫೋಟೋ ಹಾಕಿ RIP ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾಳೆ ಎನ್ನುತ್ತಿದ್ದಾನೆ.

ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೀಲಾವತಿ ನಾಪತ್ತೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಆಕೆಯ ಗಂಡ ಮುನಿಕೃಷ್ಣನನ್ನು ಠಾಣೆಗೆ ಕರೆದು ವಿಚಾರಣೆ ಮಾಡಲಾಗಿದೆ. ಜೊತೆಗೆ ಮೊಬೈಲ್ ಟವರ್ ಲೊಕೇಶನ್ ಪತ್ತೆ ಮಾಡಿದಾಗ ಆಕೆ ತಿರುಪತಿಯಲ್ಲಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.