ETV Bharat / state

ಕರವೇ ನಾರಾಯಣ ಗೌಡರಿಗೆ ಜಾಮೀನು ಮಂಜೂರು: 29 ಕನ್ನಡಪರ ಹೋರಾಗಾರರ ಬಿಡುಗಡೆಗೆ ಕೋರ್ಟ್​ ಆದೇಶ

author img

By ETV Bharat Karnataka Team

Published : Jan 6, 2024, 7:33 PM IST

ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವಾಗ ಸಾರ್ವಜನಿಕ ಆಸ್ತಪಾಸ್ತಿಗೆ ಹಾನಿ ಮಾಡಿದ ಆರೋಪದಡಿ, ಬಂಧನಕ್ಕೊಳಗಾಗಿದ್ದ ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿ 29 ಜನ ಕನ್ನಡಪರ ಹೋರಾಟಗಾರರಿಗೆ ಜಾಮೀನು ಸಿಕ್ಕಿದೆ. ಇಂದು ಅವರು ಬಿಡುಗಡೆ ಆಗಿದ್ದಾರೆ.

Pro Kannada Activist Narayana Gowda granted bail
ಕರವೇ ನಾರಾಯಣ ಗೌಡರಿಗೆ ಜಾಮೀನು ಮಂಜೂರು

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕನ್ನಡ ನಾಮಫಲಕಕ್ಕಾಗಿ ಹೋರಾಟ ನಡೆಸಿ ನ್ಯಾಯಾಂಗ ಬಂಧನದಲ್ಲಿದ್ದ ನಾರಾಯಣ ಗೌಡ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲು ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ನಾರಾಯಣ ಗೌಡ ಅವರ ಜೊತೆಗೆ ಬಂಧಿಸಿದ್ದ 29 ಕನ್ನಡಪರ ಹೋರಾಟಗಾರರ ಬಿಡುಗಡೆಗೂ ಕೋರ್ಟ್ ಆದೇಶಿಸಿದೆ.

ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡ ನಾಮಫಲಕಕ್ಕೆ ಒತ್ತಾಯಿಸಿ ಕರವೇ ನಾರಾಯಣ ಗೌಡ ಅವರ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಾಗಿತ್ತು. ಡಿ. 27 ರಂದು ದೇವನಹಳ್ಳಿಯ ಸಾದಹಳ್ಳಿ ಗೇಟ್​ನಿಂದ ಕರವೇ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ಅಯೋಜನೆ ಮಾಡಿದ್ದರು.

ಪ್ರತಿಭಟನೆ ವೇಳೆ ಕನ್ನಡಪರ ಕಾರ್ಯಕರ್ತರು ಬೃಹತ್ ಫ್ಲೆಕ್ಸ್​ಗಳನ್ನು ಹರಿದು ಹಾಕಿದ್ದರು. ಬೋರ್ಡ್​ಗಳನ್ನು ಒಡೆದು ಹಾಕಿದ್ದರು. ಸಾರ್ವಜನಿಕ ಅಸ್ತಿಪಾಸ್ತಿ ಹಾಳು ಮಾಡಿದ ಆರೋಪದ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕರವೇ ನಾರಾಯಣ ಗೌಡ ಸೇರಿದಂತೆ 29 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಹೆದ್ದಾರಿ ತಡೆ, ಸಾರ್ವಜನಿಕ ಅಸ್ತಿ ಹಾನಿ ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮೂರು ಪ್ರಕರಣಗಳು ದಾಖಲಾಗಿದ್ದವು.

ಪ್ರಕರಣಗಳ ಮೇಲೆ ಡಿ.28 ರಂದು ನಾರಾಯಣ ಗೌಡ ಸೇರಿದಂತೆ 29 ಜನರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನಾರಾಯಣ ಗೌಡ ಸೇರಿದಂತೆ 29 ಜನರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಧೀಶರು ಆದೇಶಿಸಿದ್ದರು.

ನಂತರ ನಾರಾಯಣ ಗೌಡ ಅವರು ಜನವರಿ 2 ರಂದು ಜಾಮೀನು ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ದೇವನಹಳ್ಳಿ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶವನ್ನು ಜ. 6ಕ್ಕೆ(ಇಂದು) ಕಾಯ್ದಿರಿಸಿತ್ತು. ಈ ಹಿನ್ನೆಲೆಕೋರ್ಟ್ ನಾರಾಯಣ ಗೌಡ ಸೇರಿದಂತೆ 29 ಜನರ ಬಿಡುಗಡೆಗೆ ಅದೇಶಿಸಿದೆ.

ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ: ನಾರಾಯಣ ಗೌಡ ಸೇರಿ 6 ಜನರ ವಿರುದ್ಧ ಎಫ್‌ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.