ETV Bharat / state

ಲಾಕ್​ಡೌನ್​ನಿಂದ ಸಾಲದ ಶೂಲಕ್ಕೆ ಸಿಲುಕಿ ಖಾಸಗಿ ಬಸ್ ಚಾಲಕ ಆತ್ಮಹತ್ಯೆ - ಮೊದಲಕೋಟೆ ಗ್ರಾಮ

ಲಾಕ್​ಡೌನ್ ವೇಳೆ ಜೀವನ ನಿರ್ವಹಣೆಗೆ ಹಲವರ ಬಳಿ ಕೈಸಾಲ ಮಾಡಿಕೊಂಡಿದ್ದ ಅವರು, ವ್ಯವಸಾಯ ಮಾಡಲು ಸಹ ಸಾಲ ಮಾಡಿದ್ದರು. ಇದೀಗ ಮಾಡಿದ ಸಾಲ ಮರು ಪಾವತಿಸಲಾಗದೇ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ..

bus driver commits suicide
ಸಾಲದ ಶೂಲಕ್ಕೆ ಸಿಲುಕಿ ಖಾಸಗಿ ಬಸ್ ಚಾಲಕ ಆತ್ಮಹತ್ಯೆ
author img

By

Published : Jul 13, 2021, 2:03 PM IST

ನೆಲಮಂಗಲ : ಕೊರೊನಾ ಲಾಕ್​ಡೌನ್​ನಿಂದ ಕೆಲಸ ಕಳೆದೊಂದು ಕೃಷಿ ಮಾಡಲು ಮುಂದಾಗಿದ್ದ ಖಾಸಗಿ ಬಸ್ ಚಾಲಕನೋರ್ವ, ಸಾಲದ ಶೂಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೆಲಮಂಗಲ ತಾಲೂಕಿನ ಮೊದಲಕೋಟೆ ಗ್ರಾಮದ ಹನುಮಂತರಾಜು (35) ಮೃತ ದುರ್ದೈವಿ. ಖಾಸಗಿ ಬಸ್ ಚಾಲಕನಾಗಿದ್ದ ಹನುಮಂತರಾಜು, ಕೊರೊನಾ ಲಾಕ್​ಡೌನ್​ನಿಂದ ಕಳೆದ ಒಂದು ವರ್ಷದಿಂದ ಕೆಲಸವಿಲ್ಲದೇ ಕಂಗಾಲಾಗಿದ್ದರು. ಲಾಕ್​ಡೌನ್ ವೇಳೆ ಜೀವನ ನಿರ್ವಹಣೆಗೆ ಹಲವರ ಬಳಿ ಕೈಸಾಲ ಮಾಡಿಕೊಂಡಿದ್ದ ಅವರು, ವ್ಯವಸಾಯ ಮಾಡಲು ಸಹ ಸಾಲ ಮಾಡಿದ್ದರು.

ಇದೀಗ ಮಾಡಿದ ಸಾಲ ಮರು ಪಾವತಿಸಲಾಗದೇ ಬೇಸತ್ತು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೆಚ್​ಡಿಕೆ ಕದನ ವಿರಾಮ ಘೋಷಿಸಿದರೂ.. ಸಂಸದೆ ಸುಮಲತಾ ಅಂಬಿ ಹೋರಾಟ ಕೈಬಿಟ್ಟಂತಿಲ್ಲ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.