ETV Bharat / state

ಅಕ್ರಮವಾಗಿ ರಕ್ತಚಂದನ ಸಾಗಾಟ: ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಕೆರೆ ಬಳಿ ನಡೆದಿದೆ.

ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಯ ಮೇಲೆ ಪೊಲೀಸರ ಗುಂಡಿನ ದಾಳಿ
author img

By

Published : Oct 3, 2019, 11:52 PM IST

ಹೊಸಕೋಟೆ: ಅಕ್ರಮವಾಗಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಕೆರೆ ಬಳಿ ನಡೆದಿದೆ.

ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಯ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ಕಟ್ಟಿಗೇನಹಳ್ಳಿ ಸಮೀಪ ರಕ್ತಚಂದನ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಡಿವೈಎಸ್​ಪಿ ಸಕ್ರಿ ನೇತೃತ್ವದ ತಂಡ ಆರೋಪಿಗಳನ್ನು ಹಿಡಿಯಲು ಮುಂದಾಗಿತ್ತು. ಈ ವೇಳೆ ಇಬ್ಬರು ಆರೋಪಿಗಳು ಪೊಲೀಸರ ಮೇಲೆಯೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಡಿವೈಎಸ್​ಪಿ ಸಕ್ರಿ ಆತ್ಮರಕ್ಷಣೆಗಾಗಿ ಆರೋಪಿ ಜಾವಿದ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಇಮ್ರಾನ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಸುಮಾರು 800 ಕೆಜಿ ರಕ್ತಚಂದನ, ಸ್ಕಾರ್ಪಿಯೋ ವಾಹನ ಜಪ್ತಿ ಮಾಡಲಾಗಿದ್ದು, ಗಾಯಗೊಂಡ ಆರೋಪಿಯನ್ನ ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಆಸ್ಪತ್ರೆಗೆ ಬೆಂಗಳೂರು ಗ್ರಾಮಾಂತರ ಎಸ್​​ಪಿ ರವಿ ಡಿ. ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Intro:ಹೊಸಕೋಟೆ:

ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಯ ಮೇಲೆ ಪೊಲೀಸರ ಗುಂಡಿನ ದಾಳಿ

ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಕೆರೆ ಮೇಲೆ ನಡೆದಿದೆ. ಅಂದಹಾಗೆ ಕಟ್ಟಿಗೇನಹಳ್ಳಿ ಸಮೀಪ ರಕ್ತಚಂದನ ಸಾಗಾಣಿಕೆ ಮಾಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಡಿವೈಎಸ್ ಪಿ ಸಕ್ರಿ ನೇತೃತ್ವದ ತಂಡ ಆರೋಪಿಗಳ ಹಿಡಿಯಲು ಮುಂದಾಗಿದ್ದರು. ಈ ವೇಳೆ ಇಬ್ಬರು ಆರೋಪಿಗಳು ಪೊಲೀಸರ ಮೇಲೆಯೆ ಹಲ್ಲೆಗೆ ಯತ್ನ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಡಿವೈಎಸ್ ಪಿ ಸಕ್ರಿ ಆತ್ಮರಕ್ಷಣೆಗಾಗಿ ಆರೋಪಿ ಜಾವಿದ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇನ್ನೂ ಸುಮಾರು‌ 800 ಕೆಜಿ ಗೂ‌ ಹೆಚ್ಚು ರಕ್ತ ಚಂದನ ಸಾಗಿಸ್ತಿರೋದು ಕಂಡು ಬಂದಿದ್ದು ಮತ್ತೊಬ್ಬ ಆರೋಪಿ ಇಮ್ರಾನ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದೆ.

Body:ಜತೆಗೆ ಬಂಧಿತರಿಂದ ಸುಮಾರು 800 ಕೆಜಿ ರಕ್ತ ಚಂದನ, ಸ್ಕಾರ್ಪಿಯೋ ವಾಹನ ಜಪ್ತಿ ಮಾಡಲಾಗಿದ್ದು, ಗಾಯಗೊಂಡ ಆರೋಪಿಯನ್ನ ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಆಸ್ಪತ್ರೆಗೆ ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ ಡಿ ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದು,ಪ್ರಕರಣ ದಾಖಲಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Conclusion:ರವಿ ಡಿ ಚನ್ನಣ್ಣನವರ್
ಮಾತನಾಡಿ ರಕ್ತ ಚಂದನ
ಅಕ್ರಮ ಸಾಗಟ ಮಾಡುವವರಿ ಸಾಕಷ್ಟು ಬಾರಿ ಎಚ್ಚರಿಕೆ ನೀಡುದರು ಹೆಚ್ಚೆತ್ತು ಕೊಳ್ಳುತ್ತಿಲ್ಲ ಅನೇಕ ಬಾರಿ
ಕಟ್ಟಿಗೆನಹಳ್ಳಿಯ ಕೆಲವು ಪ್ರಮುಖ ‌ಆರೋಪಿಗಳಿಗೆ ಅಕ್ರಮವನ್ನು‌ ಮಾಡಬಾರದು ಎಂದು ಹೇಳಿದರು ಏನೂ ಪ್ರಯೋಜನ ಅಗಿಲ್ಲ .ಆದರೆ ಈ ರೀತಿ ಅಕ್ರಮ‌ಮಾಡುವವರರಿಗೆ
ನಾವು ಸರಿಯಾದ ಪಾಠ ಕಳಿಸುತ್ತೇವೆ ಎಂದರು.

ಬೈಟ್: ರವಿ ಡಿ ಚನ್ನಣ್ಣನವರ್, ಎಸ್.ಪಿ ಬೆಂಗಳೂರು ಗ್ರಾಮಾಂತರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.