ನೆಲಮಂಗಲ : ಪಾತಕ ಲೋಕದಲ್ಲಿ ಕುಖ್ಯಾತಿಗಳಿಸಿದ ಬೆತ್ತನಗೆರೆ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಶಾಂತಿ ಸಭೆ ನಡೆಸಿದರು.
ಸಾರ್ವಜನಿಕರಲ್ಲಿ ಶಾಂತಿ ಮೂಡಿಸುವ ಸಲುವಾಗಿ ಬೆತ್ತನಗೆರೆ ಗ್ರಾಮದಲ್ಲಿ ಶಾಂತಿ ಸಭೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ರವಿ ಡಿ ಚೆನ್ನಣ್ಣನವರ್ ಸಮಾಜಘಾತುಕ ಕೃತ್ಯಗಳಲ್ಲಿ ಭಾಗವಹಿಸುವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಪೊಲೀಸರಿಗೆ ಲಾಠಿ-ಪಿಸ್ತೂಲ್ ಕೊಟ್ಟಿರೊದು ಆಯುಧಪೂಜೆ ಮಾಡ್ಲಿಕ್ಕೆ ಅಲ್ಲ. ಯಾರು ಕಾನೂನನ್ನ ಮೂರಿಯುತ್ತಾರೊ, ಯಾರು ಅಮಾಯಕರಿಗೆ ತೊಂದರೆ ಕೊಡುತ್ತಾರೊ ಅಂಥವರ ಕಾಲು ಮುರಿಯುತ್ತೆವೆ. ಅಂತವರ ಮೇಲೆ ಆಯುಧ ಬಳಸೋದಕ್ಕೆ ಒಂದು ಕ್ಷಣ ಸಹ ಯೋಚಿಸುವುದಿಲ್ಲ. ಹಣ ಬಲ, ತೊಳ್ಬಲದಿಂದ ಸಮಾಜ ಶಾಂತಿ ಕದಡುವವರ ವಿರುದ್ಧ ಕಾನೂನಿನ ಅಡಿ ಕ್ರಮ ತೆಗೆದು ಕೊಳ್ಳುತ್ತೆವೆ ಎಂದಿದ್ದಾರೆ.
ಸರ್ಕಾರ ನಮಗೆ ನೌಕರಿ ಕೊಟ್ಟು, ತರಬೇತಿ ಕೊಟ್ಟು, ಸಂಬಳ ಕೊಡುತ್ತಿರುವುದು ಅಮಾಯಕರ ರಕ್ಷಣೆಗೆ. ಅದರಲ್ಲು ಬಡ ರೈತಾಪಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡುವುದು. ತಿಳಿದೊ ತಿಳಿಯದೆಯೋ ತಪ್ಪುಗಳು ಆಗುತ್ತವೆ. ಯಾರು ಸಹ ಜೈಲಿಗೆ ಹೋಗಲು ಬಯಸೊದಿಲ್ಲ. ಅರಿಯದೆ ಮಾಡೊದು ತಪ್ಪಾಲ್ಲ. ಆದರೆ ಅರಿತು ಮಾಡೋದು ತಪ್ಪು. ಅಂತವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವೆ ಎಂದು ಎಚ್ಚರಿಕೆ ನೀಡಿದರು.