ನೆಲಮಂಗಲ: ಸಚಿವ ಸ್ಥಾನ ಹಾಗೂ ಹಣದ ಆಮಿಷವೊಡ್ಡಿ ಬಿಜೆಪಿ ಆಪರೇಷನ್ ಕಮಲಕ್ಕೆ ಕೈಹಾಕಿದ್ದು ನಿಜವೆಂದು ನೆಲಮಂಗಲ ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ, ನೂರಕ್ಕೆ ನೂರು ಪರ್ಸೆಂಟ್ ಬಿಜೆಪಿ ಮುಖಂಡರು ನನ್ನನ್ನು ಸಂಪರ್ಕಿಸಿ ಗಾಳ ಹಾಕಲು ಯತ್ನಿಸಿದ್ದಾರೆ. ಪೋನ್ ಮಾಡಿ ಸಚಿವ ಸ್ಥಾನ ಮತ್ತು ಹಣದ ಆಮಿಷವೊಡ್ಡಿ ಬಿಜೆಪಿ ಸೇರುವಂತೆ ಹೇಳಿದರು ಎಂದು ತಿಳಿಸಿದ್ದಾರೆ.
ಆದರೆ, ನಾನು ಇದಕ್ಕೆ ತಕ್ಕ ಉತ್ತರ ನೀಡಿದ್ದೇನೆ ಎಂದ ಅವರು, ನಾನು ಬೆನ್ನಿಗೆ ಚೂರಿ ಹಾಕುವವನಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ. ಬಿಜೆಪಿ ಸೇರುವಂತೆ ಸಾಕಷ್ಟು ಆಮಿಷವೊಡ್ಡಿದ್ದರು ಅದಕ್ಕೆಲ್ಲ ಕಿವಿ ಕೊಡಲಿಲ್ಲ ಎಂದು ವಿವರಿಸಿದ್ದಾರೆ.