ದೊಡ್ಡಬಳ್ಳಾಪುರ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜಿನಲ್ಲಿ ಎನ್ಸಿಸಿ ಕೆಡೆಟ್‌ಗಳಿಗೆ ಕಟ್ಟುನಿಟ್ಟಿನ ತರಬೇತಿ ನೀಡಲಾಗುತ್ತಿದೆ.
ಕರ್ನಾಟಕ ಮತ್ತು ಗೋವಾ ಸೇರಿ ಒಂದು ತಂಡವಾಗಿ ದೆಹಲಿ ಪರೇಡ್‌ನಲ್ಲಿ ಭಾಗವಹಿಸುತ್ತದೆ. ಒಟ್ಟು 106 ವಿದ್ಯಾರ್ಥಿಗಳನ್ನು ಅಂತಿಮವಾಗಿ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಪೆರೇಡ್‌ಗೆ ಆಯ್ಕೆ ಮಾಡಲಾಗುತ್ತಿದೆ. ಅದಕ್ಕೂ ಮುನ್ನ ಕೆಡೆಟ್‌ಗಳು ಹಲವು ಪೂರ್ವಸಿದ್ಧತಾ ಕ್ಯಾಂಪ್‌ಗಳಲ್ಲಿ ಭಾಗವಹಿಸಬೇಕು. ಅಲ್ಲಿ ಯಾರು ಡ್ರಿಲ್, ಪೆರೇಡ್, ಫೈರಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಡ್ರಾಯಿಂಗ್ ಪ್ರಕಾರಗಳಲ್ಲಿ ಉತ್ತಮ ಪ್ರದರ್ಶನ ಕೊಡುವ ವಿದ್ಯಾರ್ಥಿಗಳು ದೆಹಲಿ ಕ್ಯಾಂಪ್ಗೆ ಆಯ್ಕೆಯಾಗುತ್ತಾರೆ. ಈ ಹಿನ್ನೆಲೆ ಅಕ್ಟೋಬರ್ 10 ರಂದು ಪ್ರಾರಂಭವಾಗಿರುವ ಕ್ಯಾಂಪ್ 19ರಂದು ಕೊನೆಗೊಳ್ಳಲಿದೆ.
ಕಳೆದ ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಮತ್ತು ಗೋವಾ ತಂಡಕ್ಕೆ ಪ್ರಧಾನಿ ಬ್ಯಾನರ್ ಪ್ರಶಸ್ತಿ ಗಳಿತ್ತು.
ಕ್ಯಾಂಪ್‌ನಲ್ಲಿ ಭಾಗವಹಿಸಿದವರು ನಮ್ಮ ದೇಶದ ಸಂಸ್ಕೃತಿ, ಕಲೆ ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ.