ETV Bharat / state

ವಿಜಯಪುರದಲ್ಲಿ ಕೊಳವೆ ಬಾವಿ ಇದ್ದರೂ ನೀರು ಬಿಡದ ಪುರಸಭೆ: ಸಾರ್ವಜನಿಕರ ಆರೋಪ - Devanahalli

ದೇವನಹಳ್ಳಿಯ ವಿಜಯಪುರದಲ್ಲಿ ಜನರ ಸಮಸ್ಯೆ ಆಲಿಸಲು ಅಧಿಕಾರಿಗಳು ಕಚೇರಿಯತ್ತ ಕಾಲಿಡುತ್ತಿಲ್ಲ. ಈ ಕೂಡಲೇ ಅಧಿಕಾರಿಗಳು ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನೀರಿನ ಸಂಪ್​
author img

By

Published : Jun 6, 2019, 4:48 PM IST

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನೀರಿಗೆ ಹಾಹಾಕಾರ ಎದುರಾಗಿದ್ದು, ಕೊಳವೆ ಬಾವಿಗಳಿದ್ದರೂ ನೀರು ಬಿಡುತ್ತಿಲ್ಲ ಎಂದು ಸಾರ್ವಜನಿಕರು ಪುರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಪುರಸಭೆಯ ವ್ಯಾಪ್ತಿಯಲ್ಲಿ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಿಲ್ಲ. ಇದರಿಂದ ನೀರಿಗಾಗಿ ಅಲೆದಾಡುವಂತಾಗಿದೆ ಎಂದು ದೂರಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ಸಾಕಷ್ಟು ತೊಂದರೆ ಇದೆ. ಕೆಲವೊಂದು ವಾರ್ಡ್​ಗಳಲ್ಲಿ ನಾಲ್ಕೈದು ದಿನಗಳಿಗೊಮ್ಮೆ ಮತ್ತು ಇನ್ನು ಕೆಲವು ವಾರ್ಡ್​ಗಳಿಗೆ 10 ದಿನಗಳಿಗೊಮ್ಮೆ ನೀರು ಬರುತ್ತಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ನೀರಿನ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದಾರೆ. ಅದರೆ, ಇಲ್ಲಿರುವ ಪರಿಸ್ಥಿತಿ ಬೇರೆಯೇ ಇದೆ.

ನೀರಿನ ಸಂಪ್​
ಕೊಳವೆ ಬಾವಿಗಳ ಜತೆಗೆ ಒಂದು ಸಂಪು ಕೂಡಾ ನಿರ್ಮಿಸಲಾಗಿದೆ. ಆ ಕೊಳವೆ ಬಾವಿಗಳಿಂದ ಎರಡು ಮೂರು ತಿಂಗಳ ಹಿಂದೆಯೇ ಸಂಪ್​ಗೆ ಬಿಟ್ಟಿರುವ ನೀರನ್ನು ಜನರಿಗೆ ಪೂರೈಸಲು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶೇಖರಿಸಿರುವ ಒಂದು ಲಕ್ಷ ಲೀಟರ್​ ನೀರು, ಈಗ ಬಳಕೆಗೆ ಯೋಗ್ಯವಾಗಿಲ್ಲ. ನೀರಿನಲ್ಲಿ ಕಸ ಕಡ್ಡಿ ತುಂಬಿದೆ.

ಅಷ್ಟೇ ಅಲ್ಲದೆ, ಸಂಪ್ ಸುತ್ತಮುತ್ತ ಕಸದ ರಾಶಿಯೇ ಬಿದ್ದಿದೆ. ಪುರಸಭೆ ಅಧಿಕಾರಿಗಳು ನೀರಿನ ವಿಷಯದಲ್ಲಿ ತುಂಬಾ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಸಾವಿರಾರು ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದರೆ, ಇರುವ ನೀರನ್ನೇ ಜನರಿಗೆ ಪೂರೈಸದೇ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಪುರಸಭೆ ವ್ಯಾಪ್ತಿಯಲ್ಲಿ ನೀರಿನ‌ ಸಮಸ್ಯೆಯೇ ಇಲ್ಲ. ಅಲ್ಲಿ ಕೊಳವೆ ಬಾವಿ ಕೊರೆಸಿರುವುದು ಮತ್ತು ಸಂಪ್ ನಿರ್ಮಿಸಿರುವುದು ನಿಜ. ಇನ್ನೆರಡು ದಿನಗಳಲ್ಲಿ ಸಂಪ್ ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗುವುದು. ಜನರಿಗೆ ತೊಂದರೆಯಾಗಂತೆ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

Intro:KN_BNG_01_06_Water problem_Ambarish_7203301

Slug: ವಿಜಯಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ: ಕೊಳವೆ ಬಾವಿ ಇದ್ದರೂ ನೀರು ಬಿಡದ ಪುರಸಭೆ

ಬೆಂಗಳೂರು: ಅಲ್ಲಿ ನೀರಿಗೆ ಹಾಹಾಕಾರವಿದೆ.. ನೀರಿಗಾಗಿ ಪರದಾಡುವ ಜನರಿದ್ದಾರೆ.. ಅದೇ ರೀತಿ ನೀರಿಗಾಗಿ ಕೊರೆಸಿದ ಕೊಳವೆ ಬಾವಿ ಇದೆ.. ಬಾವಿ ಇದ್ದರೂ ಅದು ಉಪಯೋಗಕ್ಕೆ ಬರ್ತಾ ಇಲ್ಲ.. ಇದರಿಂರ ಜನರು ಪುರಸಭೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಯೆಸ್, ನಾವು ಹೇಳ್ತಾ ಇರೋದು ಬೇರೆ ಎಲ್ಲೂ ಅಲ್ಲ.. ವಿಮಾನ ನಗರಿ‌ ಎನಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿನ ಪುರಸಭೆಯ ವೈಫಲ್ಯದ ಕುರಿತ ವರದಿ.. ಈ ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ಸಾಕಷ್ಟು ತೊಂದರೆ ಇದೆ.. ಕೆಲವೊಂದು ವಾರ್ಡ್ ಗಳಲ್ಲಿ ನಾಲ್ಕು ದಿನಕ್ಕೊಮ್ಮೆ‌ಕುಡಿಯುವ ನೀರು ಬಿಟ್ಟರೆ ಕೆಲವು ವಾರ್ಡ್ ಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರನ್ನು ಪುರಸಭೆ ಬಿಡುಗಡೆ ಮಾಡುತ್ತಿದೆ.. ಪುರಸಭೆ ಅಧಿಕಾರಿಗಳನ್ನು ಕೇಳಿದ್ರೆ ನೀರಿನ‌ ಸಮಸ್ಯೆ ಇಲ್ಲ ಅಂತ ಹೇಳ್ತಾರೆ..‌ಆದರೆ ಇಲ್ಲಿನ ನೀರಿನ ಸಮಸ್ಯೆಯನ್ನು ಅಲ್ಲಿನ ಜನರೇ ಹೇಳ್ತಾರೆ..

ನೀರಿನ ಸಮಸ್ಯೆಯಿಂದ ಸರ್ಕಾರದ ಹಣದಲ್ಲಿ ಪುರಸಭೆಯಿಂದ ಕೊಳವೆ ಬಾವಿ ಕೊರೆಯಲಾಗಿದೆ.. ಇದರಿಂದ ಬರುವ ನೀರನ್ನು ಸಂಗ್ರಹಿಸಿ ಮನೆಗಳಿಗೆ ನೀರು ಬಿಡಲು ಒಂದು ಸಂಪನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನೀರನ್ನು ಸಂಪ್ಗೆ ಬಿಡಲಾಗಿದೆ.. ಸಂಪ್ಗೆ ಬಿಟ್ಟ ನೀರನ್ನು ಜನರಿಗೆ ತಲುಪಿಸುವಂತ ವ್ಯವಸ್ಥೆ ಪುರಸಭೆ ಕೈಗೊಂಡಿಲ್ಲ.. ಎರಡು ಮೂರು ತಿಂಗಳ ಹಿಂದೆ ಬಿಟ್ಟ ನೀರು ಸಂಪ್ ನಲ್ಲಿ ಹಾಗೇ ಇದೇ.. ಸುಮಾರು ಒಂದು ಲಕ್ಷಕ್ಕೂ ಅಧಿಕ ಲೀಟರ್ ನೀರು ಶೇಖರಣೆ ಆಗಿದೆ.. ಆದರೆ ಆ ನೀರು ಈಗ ಬಳಕೆಗೆ ಯೋಗ್ಯವಾಗಿಲ್ಲ.. ನೀರೆಲ್ಲಾ ಕಸ ತುಂಬಿ ಕೆಟ್ಟು ಹೋಗಿದೆ.. ಮತ್ತೊಂದು ಕಡೆ ಆ ಸಂಪ್ ಸುತ್ತಮುತ್ತ ಕಸದ ರಾಶಿಯೇ ಬಿದ್ದಿದೆ ಅದನ್ನು ಪುರಸಭೆ ಕ್ಲೀನ್‌ ಮಾಡದೇ ಹಾಗೇ ಬಿಟ್ಟಿದೆ..

ಇದನ್ನು ಕಂಡ ಸ್ಥಳೀಯ ನಿವಾಸಿಗಳು, ಪುರಸಭೆ ನೀರಿನ ವಿಷಯದಲ್ಲಿ ತುಂಬಾ ನಿರ್ಲಕ್ಷ್ಯ ಮಾಡುತ್ತಿದೆ.. ಇವಾಗ್ಲೇ ನಮಗೆ ಕುಡಿಯಲು ನೀರಿಲ್ಲ..‌ಸಾವಿರಾರು ಅಡಿ ಕೊಳವೆ ಬಾವಿ ತೋಡಿದ್ರು ನೀರು ಸಿಕ್ತಿಲ್ಲ.. ಅಂತದ್ರಲ್ಲಿ ಸಿಕ್ಕಿರುವ ನೀರನ್ನು ಸರಿಯಾಗಿ ಜನರಿಗೆ ತಲುಪಿಸುವಂತ ವ್ಯವಸ್ಥೆ ಪುರಸಭೆ ಅಧಿಕಾರಿಗಳು ಮಾಡುತ್ತಿಲ್ಲ.. ಕಚೇರಿಗೆ‌ ಸರಿಯಾಗಿ ಅಧಿಕಾರಿಗಳು ಬರದೇ ಜನರ ಸಮಸ್ಯೆಗಳನ್ನು ಕೇಳದೆ ನಿರ್ಲಕ್ಷ್ಯ ವಹಿಸಿದ್ದಾರೆ.. ಇದರಿಂದ ನೀರಿದ್ದರೂ ನೀರನ್ನು ನೀಡುವಲ್ಲಿ ಅಧಿಕಾರಿಗಳು ಸೋತಿದ್ದಾರೆ ಎಂದು ಆರೋಪಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪೊಲಾಗುತ್ತಿರುವ ನೀರನ್ನು ಸರಿಯಾಗಿ ಜನರಿಗೆ ತಲುಪಿಸುವಂತ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು..

ಇದಕ್ಕೆ ಪುರಸಭೆ ಅಧಿಕಾರಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು, ನಮ್ಮ‌ ಪುರಸಭೆ ವ್ಯಾಪ್ತಿಯಲ್ಲಿ ನೀರಿನ‌ ಸಮಸ್ಯೆ ಇಲ್ಲ.. ಅಲ್ಲಿ ಒಂದು ಕೊಳವೆ ಬಾವಿ ಕೊರೆಸಿರುವುದು ನಿಜ.. ನೀರನ್ನು ಜನರಿಗೆ ತಲುಪಿಸಲು ಸಂಪ್ ಕೂಡ ನಿರ್ಮಾಣ ಮಾಡಲಾಗಿದೆ.. ಇನ್ನೆರಡು ದಿನಗಳಲ್ಲಿ ಸಂಪ್ ಅನ್ನು ಕ್ಲೀನ್ ಮಾಡಿ ಜನರಿಗೆ ನೀರು ಬಿಡುವ ವ್ಯವಸ್ಥೆ ಮಾಡುತ್ತೇವೆ ಎಂದು ಟೊಳ್ಲು ಭರವಸೆ ನೀಡುತ್ತಿದ್ದಾರೆ..Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.