ದೇವನಹಳ್ಳಿ: ಪ್ರಕರಣ ಕೈಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಠಾಣೆಯಲ್ಲಿ ದಾಖಲಾಗಿದ್ದ ದೂರಿನ ವಿಚಾರಕ್ಕೆ ಸಂಬಂಧಿಸಿದಂತೆ ಮಂಡಿಬೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕತತ್ತಮಂಗಲ ಗ್ರಾಮದ ಮಂಜುನಾಥ್ ಎಂಬುವರಿಂದ ನಿನ್ನೆ ಸಂಜೆ 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಚಂದ್ರಶೇಖರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಹಣದ ಸಮೇತ ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಚಿವ ಬೈರತಿ ಬಸವರಾಜ್ ವಿರುದ್ಧ ಲೋಕಾಯುಕ್ತಕ್ಕೆ ದೂರು: ತನಿಖೆ ವಿಳಂಬ ಕೈ ಕಾರ್ಯಕರ್ತರ ಆಕ್ರೋಶ..
ಮಂಜುನಾಥ್ ಮತ್ತು ಅವರ ಸಹೋದರಿಯ ನಡುವೆ ಹಣಕಾಸಿನ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಜುನಾಥ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದು ಸೆಲ್ನಲ್ಲಿ ಇರಿಸಲಾಗಿದೆ. ಠಾಣೆಯಿಂದ ಬಿಡುಗಡೆ ಮಾಡಿ ಹೊರಕಳುಹಿಸಲು ಕಾನ್ಸ್‌ಟೇಬಲ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಪಟ್ಟಣದ ಶಿವಗಣೇಶ ಸರ್ಕಲ್ನಲ್ಲಿರುವ ಹಾಪ್ ಕಾಮ್ಸ್ ಬಳಿ, ಮಂಜುನಾಥ್ಅವರಿಂದ ಹಣ ಪಡೆದುಕೊಳ್ಳುವಾಗ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಸಚಿವ ಬೈರತಿ ಬಸವರಾಜ್ ವಿರುದ್ಧ ಲೋಕಾಯುಕ್ತಕ್ಕೆ ದೂರು: ತನಿಖೆ ವಿಳಂಬ ಕೈ ಕಾರ್ಯಕರ್ತರ ಆಕ್ರೋಶ..
ಕಾನ್ಸ್‌ಟೇಬಲ್ ಚಂದ್ರಶೇಖರ್ ಮಾತ್ರವಲ್ಲದೇ ಸಬ್ ಇನ್ಸ್ಪೆಕ್ಟರ್ ಈರಮ್ಮ ಮೇಲೆ ಕೂಡ ದೂರು ದಾಖಲಾಗಿದೆ. ಆದ್ರೆ, ಈರಮ್ಮ ಅವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.