ETV Bharat / state

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತ್ಯುತ್ತಮ ಪ್ರಾದೇಶಿಕ ಏರ್​​​​ಪೋರ್ಟ್​​​​​ ಪ್ರಶಸ್ತಿ - Bangalore latest news

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರನೇ ಬಾರಿಗೆ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ ಬಂದಿರುವುದು ಗಮನಾರ್ಹ ಸಾಧನೆಯಾಗಿದೆ. ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ಕೆಐಎಎಲ್​ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ ಪಡೆದುಕೊಂಡಿದೆ.

KIAL
ಕೆಐಎಎಲ್
author img

By

Published : May 12, 2020, 12:46 PM IST

ದೇವನಹಳ್ಳಿ : 2020ರ ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿ ಪ್ರಕಟವಾಗಿದ್ದು, ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಎಲ್​) ಭಾಜನವಾಗಿದೆ.

ಪ್ರಯಾಣಿಕರು ನೀಡುವ ಮತಗಳ ಮೇಲೆ ಆಯ್ಕೆ ನಡೆಯಲಿದ್ದು, ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ಕೆಐಎಎಲ್​ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ ಪಡೆದುಕೊಂಡಿದೆ.

11 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರನೇ ಬಾರಿಗೆ ಭಾರತ ಮತ್ತು ಮಧ್ಯ ಏಷ್ಯಾದಲ್ಲಿ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ ಬಂದಿರುವುದು ಗಮನಾರ್ಹ ಸಾಧನೆಯಾಗಿದೆ. ನವೀನ ತಂತ್ರಜ್ಞಾನ ಮತ್ತು ಗ್ರಾಹಕ ಸೇವಾ ಕ್ರಮಗಳೊಂದಿಗೆ ಬೆಂಗಳೂರು ವಿಮಾನ ನಿಲ್ದಾಣ ಪ್ರವಾಸಿಗರಿಗೆ ವಿಶ್ವಮಟ್ಟದ ಅನುಭವವನ್ನು ಪೂರೈಸಲು ಬದ್ಧತೆಯನ್ನು ಈ ಪ್ರಶಸ್ತಿ ಪುನರ್​ ದೃಢೀಕರಿಸಿದೆ.

ಕೆಐಎಎಲ್

ಸಂಪೂರ್ಣ ವಿಮಾನ ನಿಲ್ದಾಣದ ಸಮುದಾಯದ ಬದ್ಧತೆ ಮತ್ತು ಅಸಾಧಾರಣ ಪ್ರಯತ್ನಗಳಿಗೆ ಇದು ನಿಜಕ್ಕೂ ಅದ್ಭುತ ಬಹುಮಾನವಾಗಿದೆ. ಹಲವಾರು ಸವಾಲುಗಳನ್ನು ನಮ್ಮ ಸಂಸ್ಥೆ ಎದುರಿಸುತ್ತಿರುವ ಇಂತಹ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ತಂಡದ ಸ್ಥೈರ್ಯವನ್ನು ಈ ಪ್ರಶಸ್ತಿ ಪುನರುಜ್ಜೀವನಗೊಳಿಸಿದೆ. ನಮ್ಮ ಪ್ರಯಾಣಿಕರು ಮತ್ತು ಪಾಲುದಾರರು ನಮ್ಮಲ್ಲಿ ಇಟ್ಟುಕೊಂಡ ವಿಶ್ವಾಸ ಮತ್ತು ಅವರ ಮುಂದುವರಿದ ಬೆಂಬಲಕ್ಕಾಗಿ ನಾವು ವಂದನೆ ಸಲ್ಲಿಸುತ್ತೇವೆ ಎಂದು ಬಿಐಎಎಲ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಕೆ ಮಾರರ್​ ಹೇಳಿದ್ದಾರೆ.

ದಿ ವಲ್ಡ್​ ಏರ್​​ಪೋರ್ಟ್​ ಅವಾರ್ಡ್ಸ್​(ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿ), ವಿಮಾನ ನಿಲ್ದಾಣ ಉದ್ಯಮದಲ್ಲಿ ಅತ್ಯಂತ ಪ್ರತಿಷ್ಠಿತ ಪುರಸ್ಕಾರವಾಗಿದೆೆ. ವಾರ್ಷಿಕ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕ ತೃಪ್ತಿ ಸಮೀಕ್ಷೆ ಮೂಲಕ ಗ್ರಾಹಕರು ಈ ಪ್ರಕ್ರಿಯೆಯಲ್ಲಿ ಮತ ನೀಡುತ್ತಾರೆ. ವಿಶ್ವ ವಿಮಾನ ನಿಲ್ದಾಣ ಉದ್ಯಮದಲ್ಲಿ ಗುಣಮಟ್ಟದ ಮಾನದಂಡವಾಗಿ ಈ ಪ್ರಶಸ್ತಿಗಳನ್ನು ಗುರುತಿಸಲಾಗುತ್ತದೆ. 550ಕ್ಕೂ ಹೆಚ್ಚಿನ ವಿಮಾನ ನಿಲ್ದಾಣಗಳಲ್ಲಿನ ಗ್ರಾಹಕ ಸೇವೆ ಮತ್ತು ಸೌಲಭ್ಯಗಳನ್ನು ಇದರಲ್ಲಿ ಮೌಲ್ಯೀಕರಿಸಲಾಗುತ್ತದೆ. ಆರು ತಿಂಗಳುಗಳ ಸಮೀಕ್ಷೆ ಅವಧಿಯಲ್ಲಿ ನೂರಕ್ಕೂ ಹೆಚ್ಚಿನ ರಾಷ್ಟ್ರೀಯತೆಯ ವಿಮಾನ ನಿಲ್ದಾಣ ಗ್ರಾಹಕರು ತುಂಬಿರುವಂತಹ ವಿಶ್ವ ವಿಮಾನ ನಿಲ್ದಾಣ ಸಮೀಕ್ಷೆ ಪ್ರಶ್ನಾವಳಿಗಳ ಪತ್ರಗಳನ್ನು ಈ ಪ್ರಶಸ್ತಿಗಳು ಆಧರಿಸಿರುತ್ತವೆ. ಚೆಕ್‍ಇನ್, ಆಗಮನ, ವರ್ಗಾವಣೆಗಳು, ಶಾಪಿಂಗ್, ಭದ್ರತೆ ಮತ್ತು ವಲಸೆಯಿಂದ ನಿರ್ಗಮನದವರೆಗಿನ ವಿಮಾನ ನಿಲ್ದಾಣ ಸೇವೆ ಮತ್ತು ಉತ್ಪನ್ನಗಳ ಪ್ರಮುಖ ಪ್ರದರ್ಶನ ಸೂಚ್ಯಂಕಗಳನ್ನು ಈ ಸಮೀಕ್ಷೆ ಒಳಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.