ಆನೇಕಲ್ : ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಅಡುಗೆ ತಯಾರಿಕಾ ಘಟಕಕ್ಕೆ ಆನೇಕಲ್ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಅಡುಗೆ ಜಾಗದ ಶುಚಿತ್ವ ಮತ್ತು ತರಕಾರಿ, ಅಕ್ಕಿಯ ಗುಣಮಟ್ಟದ ಕುರಿತಂತೆ ಮಾಹಿತಿ ಪಡೆದರು.
ಪಟ್ಟಣದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ 750 ಊಟಗಳನ್ನು ತಯಾರಿಸಿ ತಾಲೂಕಿನ ಚಂದಾಪುರ, ಅತ್ತಿಬೆಲೆ, ಬೊಮ್ಮಸಂದ್ರ, ಸರ್ಜಾಪುರ ಮತ್ತಿತರ ಕಡೆಗೆ ಸರಬರಾಜು ಮಾಡಲಾಗುತ್ತಿದೆ. ಸಿಲ್ವರ್ ಪೊಟ್ಟಣಗಳಲ್ಲಿ 600ರಿಂದ 650 ಗ್ರಾಂ ತೂಕದ ಆಹಾರ ತಲುಪಿಸಲಾಗುತ್ತಿದೆ.
ಆನೇಕಲ್ ಹಿರಿಯ ಸಿವಿಲ್ ನ್ಯಾಯಾಧೀಶ ಪಿ ಸಿ ಶ್ರೀನಿವಾಸ್, ಪ್ರಧಾನ ಸಿವಿಲ್ ನ್ಯಾಯಾಧೀಶ ಎ ಗೋಕುಲ್ ಹಾಗೂ ಸಿಬ್ಬಂದಿಯಾದ ದೇವರಮನಿ-ಶೋಭಾ ಕೂಡ ಈ ವೇಳೆ ಹಾಜರಿದ್ದರು.