ETV Bharat / state

ಕಾರಹಳ್ಳಿಯ BSF ಕ್ಯಾಂಪ್‌ನಲ್ಲಿ ಕೋವಿಡ್​ ಸೋಂಕು ಹೆಚ್ಚಳ: ಸ್ಥಳಕ್ಕೆ DC ಭೇಟಿ - covid news latest news

ದೇವನಹಳ್ಳಿ ತಾಲೂಕಿನ ಬಿಎಸ್ಎಫ್ ಕ್ಯಾಂಪ್​​ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿಯ ವರೆಗೆ ಒಟ್ಟು 83 ಯೋಧರಿಗೆ ಕೋವಿಡ್​ ಪಾಸಿಟಿವ್ ದೃಢಪಟ್ಟಿದೆ.

BSF Camp
BSF ಕ್ಯಾಂಪ್​ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ
author img

By

Published : Sep 23, 2021, 8:54 AM IST

ದೇವನಹಳ್ಳಿ: ತಾಲೂಕಿನ ಬಿಎಸ್ಎಫ್ ಕ್ಯಾಂಪಸ್​ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕ್ಯಾಂಪಸ್​ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ಸಮೀಪವಿರುವ ಬಿಎಸ್ಎಫ್ ಕ್ಯಾಂಪಸ್​ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮೇಘಾಲಯದಿಂದ 753 ಸಿಬ್ಬಂದಿ ಕ್ಯಾಂಪಸ್​ಗೆ ಆಗಮಿಸಿದ್ದಾರೆ. ಈ 753ರಲ್ಲಿ ಮೊದಲಿಗೆ 13 ಬಿಎಸ್ಎಫ್ ಯೋಧರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ನಂತರ ಕೋವಿಡ್​ ತಪಾಸಣೆ ನಡೆಸಲಾಗಿದ್ದು, ಇಲ್ಲಿಯ ವರೆಗೆ ಒಟ್ಟು 83 ಯೋಧರಿಗೆ ಕೋವಿಡ್​ ಪಾಸಿಟಿವ್ ದೃಢಪಟ್ಟಿದೆ.

BSF ಕ್ಯಾಂಪ್​ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ

ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಸೋಂಕು ತಗುಲಿದ ಯೋಧರನ್ನು ಆಕಾಶ್ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಡಿಸಿ ಶ್ರೀನಿವಾಸ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.