ETV Bharat / state

ಹೆಂಡತಿಯ ಶೀಲೆ ಶಂಕಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯ ಬಂಧನ

ಎರಡನೇ ಹೆಂಡತಿಯ ಶೀಲೆ ಶಂಕಿಸಿ ಕೊಲೆ ಮಾಡಿ ಪರಾರಿಯಾಗಿದ್ದ ನೇಪಾಳ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ
ಬಂಧಿತ ಆರೋಪಿ
author img

By

Published : May 27, 2023, 9:25 PM IST

ಬೆಂಗಳೂರು: ಎರಡನೇ ಹೆಂಡತಿಯ ಕೊಲೆ ಮಾಡಿ ಪರಾರಿಯಾಗಿದ್ದ ಗಂಡನನ್ನು ಸೂರ್ಯನಗರ ಪೊಲೀಸರು ಬಂಧಿಸಿದ್ದಾರೆ. ಏ.23ರ ಬೆಳಗ್ಗೆ ಆರೋಪಿ ತನ್ನ ಹೆಂಡತಿ ನಿಶು(19)ಳ ಕತ್ತಿಗೆ ವೈರ್ ನಿಂದ ಬಿಗಿದು ತನ್ನಿಬ್ಬರ ಮಕ್ಕಳ ಮುಂದೆಯೇ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ತನ್ನ ಅತ್ತೆಯ ಮನೆಯಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದ. ನೇಪಾಳ ಮೂಲದ ಅಮರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಮರ್​ ನಿಶುಳನ್ನ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ.

ನಿಶು ಕೂಡ ನೇಪಾಳ ಮೂಲದವರಾಗಿದ್ದು, ಇಲ್ಲಿಯ ಕೂಡ್ಲು ಬಳಿಯ ನೆಂಟರ ಮನೆಗೆ ಆರು ತಿಂಗಳ ಹಿಂದೆ ಬಂದು ನೆಲೆಸಿದ್ದರು. ನಂತರ ಗುರು ಹಿರಿಯರ ಸಮ್ಮುಖದಲ್ಲಿ ನಿಶುಳಿಗೆ ಅಮರ್​ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಇದಕ್ಕೂ ಮುನ್ನ ಆರೋಪಿಗೆ ಪುಷ್ಪ ಎಂಬವವರ ಜೊತೆ ವಿವಾಹವಾಗಿತ್ತು. ಮೊದಲ ಹೆಂಡತಿಗೆ 5 ಮತ್ತು 6ವರ್ಷದ ಹೆಣ್ಣು ಗಂಡು ಮಕ್ಕಳಿದ್ದರು. ಅಮರ್​ನ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದ್ದು ಇದೀಗ ಅದೂ ಕೂಡ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

ಅಂತರಾಜ್ಯ ಕಳ್ಳರ ಬಂಧನ: ವಿಧಾನಸಭೆ ಚುನಾವಣೆಯಂದು ಮತದಾನಕ್ಕೆಂದು ಊರಿಗೆ ತೆರಳಿದ್ದ ವ್ಯಕ್ತಿಯೊಬ್ಬರು ಮನೆಗೆ ನುಗ್ಗಿ ಕಳ್ಳತನ ನಡೆಸಿದ್ದ ಅಂತಾರಾಜ್ಯ ಕಳ್ಳರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿಯ ಹರೀಶ್ ಎಂಬುವವರ ಮನೆಯ ಬೀಗ ಮುರಿದು ಚಿನ್ನ ಒಡವೆ ಕಳ್ಳತನ ಮಾಡಲಾಗಿತ್ತು. ತಮಿಳುನಾಡು ಮೂಲದ ಸರವಣ(39) ಮತ್ತು ದಿನೇಶ್(33) ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 155 ಗ್ರಾಂ ಚಿನ್ನ, 210 ಗ್ರಾಂ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ 9,75,000ರೂ ಎಂದು ಇನ್ಸ್​ಪೆಕ್ಟರ್​​ ಬಿ ಐಯ್ಯಣ್ಣ ರೆಡ್ಡಿ ತಿಳಿಸಿದ್ದಾರೆ. ಜೊತೆಗೆ ಆರೋಪಿಗಳು ಬಳಸಿದ್ದ ಸುಝುಕಿ ಆಕ್ಸಿಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.

ದರೋಡೆಗೆ ಯತ್ನಿಸಿದ ಆರೋಪಿಗಳ ಬಂಧನ: ತಾಲೂಕಿನ ಸೂರ್ಯನಗರ ಎರಡನೇ ಹಂತದ ಹಿನ್ನಕ್ಕಿ ರಸ್ತೆಯಲ್ಲಿ ಮೇ22ರ ರಾತ್ರಿ ಶಿಪ್ಟ್ ಕಾರಿನಲ್ಲಿ ಕುಳಿತು ದರೋಡೆಗೆ ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಸೂರ್ಯನಗರ ಇನ್ಸ್​ಪೆಕ್ಟರ್​ ರಾಘವೇಂದ್ರ ಎಸ್ ಮತ್ತು ಸಿಬ್ಬಂದಿಗಳಾದ ಎಸ್ಐ ನಾಗರಾಜ್, ಸತೀಶ್, ಕೃಷ್ಣಮೂರ್ತಿ ತಂಡ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮೂವರು ಆರೋಪಿಗಳು ಜೈಲಿನಲ್ಲಿರುವ ಕುಖ್ಯಾತ ರೌಡಿ ಮನೋಜ್ ಸಹಚರರೆಂದು ಗುರತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರು ಮೇ.9ರಂದು ರಾತ್ರಿ ಯಲ್ಲಮ್ಮನಪಾಳ್ಯ ಲೋಕೇಶ್ ಎಂಬುವವರು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದ ವೇಳೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು ಮೂಲಗಳು ತಿಳಿಸಿವೆ.

ಆನೇಕಲ್​ ವಾಸಿ ಕಾರು ಚಾಲಕ ವರ್ಷದ ಸುನಿಲ್ ವಡ್ಡಿಗೆರೆ, ಯಲ್ಲಮ್ಮನಪಾಳ್ಯದ ಕಾಂತರಾಜು ಹಾಗು ತಮಿಳುನಾಡಿನ ಹೊಸೂರಿನ ಹಂದಿವಾಡಿಯ ಶರವಣ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಮಾರಕಾಸ್ತ್ರಗಳ ಸಮೇತ ಒಂದು ಶಿಪ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪೊಲೀಸರ‌ ಮೇಲೆ ಹಲ್ಲೆ ಆರೋಪ: ಕಲಬುರಗಿಯಲ್ಲಿ ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.