ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೊಡ್ಡಬಳ್ಳಾಪುರ ಪೊಲೀಸರು ರೌಡಿಗಳ ಪರೇಡ್ ನಡೆಸಿದರು.
ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ರೌಡಿಶೀಟರ್ಗಳಿಗೆ ಪರೇಡ್ ನಡೆಸಲಾಯಿತು. ದೊಡ್ಡಬಳ್ಳಾಪುರ ಪೊಲೀಸ್ ಸರ್ಕಲ್ ವ್ಯಾಪ್ತಿಯ ನಗರ, ಗ್ರಾಮಾಂತರ, ರಾಜಾನುಕುಂಟೆ, ದೊಡ್ಡಬೆಳವಂಗಲ, ಹೊಸಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ಗಳನ್ನು ಕರೆಸಿ ವಾರ್ನ್ ಮಾಡಿದರು. ಚುನಾವಣೆ ವೇಳೆ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು. ಸ್ವಂತ ಮೊಬೈಲ್, ಸ್ವಂತ ವಾಹನಗಳನ್ನು ಬಳಸುವಂತೆ ಎಚ್ಚರಿಕೆ ನೀಡಿದರು.
ಬೇರೆಯವರ ಮೊಬೈಲ್ ಕಸಿದು ಬೆದರಿಕೆ, ಧಮ್ಕಿ ಹಾಕುವುದು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. 5 ವರ್ಷಗಳಿಂದ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದವರನ್ನು ರೌಡಿಶೀಟರ್ ಪಟ್ಟಿಯಿಂದ ಕೈ ಬೀಡಲಾಗುವುದೆಂದು ಇದೇ ಸಮಯದಲ್ಲಿ ತಿಳಿಸಿದರು.