ಬೆಂಗಳೂರು: ಸರ್ಕಾರಕ್ಕೆ ಏನೂ ಆಗಲ್ಲ. ಸೇಫ್ ಆಗಿದೆ ಎಂದು ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.
ದೆಹಲಿಯಿಂದ ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್ಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸೇಫ್ ಆಗಿದೆ. ಯಾರು ರಾಜೀನಾಮೆ ಕೊಟ್ಟರೂ ಏನೂ ಆಗಲ್ಲ. ನಾನು ದೆಹಲಿಯಲ್ಲಿ ಮೀಟಿಂಗ್ ಇದ್ದಿದ್ದರಿಂದ ಹೋಗಿದ್ದೆ. ಇಂದು ನಗರಕ್ಕೆ ಆಗಮಿಸಿರುವೆ ಎಂದು ದೆಹಲಿಗೆ ಹೋಗಿದ್ದನ್ನು ಸಮರ್ಥಿಸಿಕೊಂಡರು.