ETV Bharat / state

ನಡೆ ಹಳ್ಳಿ ಕಡೆ ಕಾರ್ಯಕ್ರಮ: ಹೆಬ್ಬಾಳದಿಂದ ಹೊಸಹಳ್ಳಿಯವರೆಗೂ ಫ್ಲೆಕ್ಸ್​ ಅಬ್ಬರ

ಕಂದಾಯ ಸಚಿವ ಆರ್. ಅಶೋಕ್ ಅವರ ಗಮನ ಸೆಳೆಯುವ ಕಾರಣಕ್ಕೆ ಹೆಬ್ಬಾಳದಿಂದ ಹೊಸಹಳ್ಳಿ ಗ್ರಾಮದವರೆಗೂ ಸುಮಾರು 50 ಕಿ.ಮೀ ಉದ್ದಕ್ಕೂ ರಸ್ತೆ ಬದಿಯಲ್ಲಿ ಸ್ವಾಗತಕೋರುವ ಫ್ಲೆಕ್ಸ್​ಗಳನ್ನು ಹಾಕಲಾಗಿದೆ. ಕಾರ್ಯಕ್ರಮದ ಮಹತ್ವಕ್ಕಿಂತ ಸ್ವಾಗತ ಕೋರುವ ಫ್ಲೆಕ್ಸ್​ಗಳ ಅಬ್ಬರ ಜೋರಾಗಿದೆ.

ಫ್ಲೇಕ್ಸ್
ಫ್ಲೇಕ್ಸ್
author img

By

Published : Feb 19, 2021, 6:46 PM IST

ದೊಡ್ಡಬಳ್ಳಾಪುರ : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದು, ನಾಳೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಇದಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಮಹತ್ವಕ್ಕಿಂತ ಕಂದಾಯ ಸಚಿವರಿಗೆ ಸ್ವಾಗತಕೋರುವ ಫ್ಲೆಕ್ಸ್​​ಗಳೇ ರಸ್ತೆಯುದ್ದಕ್ಕೂ ರಾರಾಜಿಸುತ್ತಿವೆ.

ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಮದಲ್ಲಿಯೇ ಪರಿಹಾರ ನೀಡುವ ವಿನೂತನ ಕಾರ್ಯಕ್ರಮ ಇದಾಗಿದ್ದು, ಪ್ರತಿ ತಿಂಗಳ ಮೂರನೇ ಶನಿವಾರ ಪ್ರತೀ ತಾಲೂಕಿನ ಒಂದು ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಫೆಬ್ರವರಿ 20ರಂದು ಕಂದಾಯ ಸಚಿವ ಆರ್. ಅಶೋಕ್ ಚಾಲನೆ ನೀಡಲಿದ್ದಾರೆ. ಬಳಿಕ ಅವರು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಹೆಬ್ಬಾಳದಿಂದ ಹೊಸಹಳ್ಳಿಯವರೆಗೂ ಫ್ಲೆಕ್ಸ್​ಗಳ ಅಬ್ಬರ

ಸಚಿವ ಆರ್.ಅಶೋಕ್ ಅವರ ಗಮನ ಸೆಳೆಯುವ ಕಾರಣಕ್ಕೆ ಹೆಬ್ಬಾಳದಿಂದ ಹೊಸಹಳ್ಳಿ ಗ್ರಾಮದವರೆಗೂ ಸುಮಾರು 50 ಕಿಮೀ ಉದ್ದಕ್ಕೂ ರಸ್ತೆ ಬದಿಯಲ್ಲಿ ಸ್ವಾಗತಕೋರುವ ಫ್ಲೆಕ್ಸ್​ಗಳನ್ನು ಹಾಕಲಾಗಿದೆ. ಕಾರ್ಯಕ್ರಮದ ಮಹತ್ವಕ್ಕಿಂತ ಸ್ವಾಗತ ಕೋರುವ ಫ್ಲೆಕ್ಸ್​ಗಳ ಅಬ್ಬರ ಜೋರಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಒಂದು ರೀತಿಯಲ್ಲಿ ಪ್ರಚಾರದ ಕಡೆ ಆಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.