ದೇವನಹಳ್ಳಿ(ಬೆಂಗಳೂರು): ವಿಯೆಟ್ ಜೆಟ್ ಏರ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಾಗ ತಾವು ವಂಚನೆಗೊಳಗಾದ ವಿಷಯ ಗೊತ್ತಾಗಿದೆ. ವಿಯೆಟ್ನಾಂಗೆ ಕಡಿಮೆ ದರದ ವಿಮಾನ ಸೇವೆ ನೀಡುವ ವಿಯೆಟ್ ಜೆಟ್ಏರ್ನಲ್ಲಿ ಬೆಂಗಳೂರಿಗರು ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದರು. ಇಂದು ಪ್ರಯಾಣಿಕರು ಏರ್ಪೋರ್ಟ್ಗೆ ಬಂದಿದ್ದು, ಬೆಂಗಳೂರಿಗೆ ವಿಮಾನವೇ ಇಲ್ಲವೆಂಬ ಸತ್ಯ ಗೊತ್ತಾಗಿ ಆತಂಕಕ್ಕೆ ಒಳಗಾದರು.
ವಿಯೆಟ್ ಜೆಟ್ಏರ್ ಪ್ರತಿನಿಧಿಗಳು ಜುಲೈ ತಿಂಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಡಿಮೆ ದರದಲ್ಲಿ ವಿಮಾನ ಸೇವೆ ನೀಡಲಾಗುವುದು. ನವೆಂಬರ್ ಮೊದಲ ವಾರದಿಂದ ಬೆಂಗಳೂರಿನಿಂದ ವಿಯೆಟ್ನಾಂನ ವಿವಿಧ ಸ್ಥಳಗಳಿಗೆ ಸೇವೆ ಪ್ರಾರಂಭಿಸುವುದ್ದಾಗಿ ಹೇಳಿದ್ದರು. ಇದನ್ನು ನಂಬಿ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿ ಪ್ರವಾಸ ಹೋಗಲು ವಿಮಾನ ನಿಲ್ದಾಣಕ್ಕೆ ಬಂದಾಗ ಮೋಸ ಹೋಗಿರುವುದು ತಿಳಿದಿದೆ.
ಮುಂಬೈನಲ್ಲಿರುವ ಪಿಆರ್ ಕಚೇರಿಗೆ ಕರೆ ಮಾಡಿದರೂ ಯಾವುದೇ ಪತ್ರಿಕ್ರಿಯೆ ಸಿಗಲಿಲ್ಲ. ಟಿಕೆಟ್ ಮರುಪಾವತಿ ಹಣ ಸಹ ಬಂದಿಲ್ಲ ಅನ್ನೋದು ಪ್ರಯಾಣಿಕರ ಆರೋಪ. ಬೆಂಗಳೂರಿನಿಂದ ವಿಯೆಟ್ ಜೆಟ್ ಏರ್ ಸೇವೆ ಇಲ್ಲ. ಹೀಗಿರುವಾಗ ಅವರು ಹೇಗೆ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಕೆಐಎಎಲ್ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಅರ್ಧ ದಿನ ತಡವಾಗಿ ಬಂದ ವಿಮಾನ : ಸ್ಪೈಸ್ ಜೆಟ್ ವಿರುದ್ಧ ಪ್ರಯಾಣಿಕರ ಪ್ರತಿಭಟನೆ