ದೊಡ್ಡಬಳ್ಳಾಪುರ : ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿದ್ದಾರೆ.
ನಿನ್ನೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 157 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಪಡೆದಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ನ್ಯೂ ಹಾರಿಜನ್ ಸ್ಕೂಲ್ನ ಗ್ರೀಷ್ಮಾ, ದೊಡ್ಡಬಳ್ಳಾಪುರ ತಾಲೂಕಿನ ಮೇಳೆಕೋಟೆಯ ಎಸ್ಜೆಸಿಆರ್ ವಿದ್ಯಾನಿಕೇತನದ ಯಶಸ್ವಿನಿ ಮತ್ತು ಲಿಖಿತ್, ದೊಡ್ಡಬಳ್ಳಾಪುರ ನಗರದ ಕಾರ್ಮಲ್ ಜ್ಯೋತಿ ಶಾಲೆಯ ಪ್ರಿಯದರ್ಶಿನಿ 625ಕ್ಕೆ 625 ಅಂಕಗಳನ್ನ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಓದಿ: ಶಾಲಾರಂಭಕ್ಕೆ ಮುಹೂರ್ತ: ಶಿಕ್ಷಕರು, ವಿದ್ಯಾರ್ಥಿಗಳ ಕುಟುಂಬದವರಿಗೆ ಲಸಿಕೆ ನೀಡಲು ಸರ್ಕಾರದ ಸೂಚನೆ