ಬೆಂಗಳೂರು: ಔಷಧಿ ಸಸ್ಯವಾಗಿ, ಅಡುಗೆಯಲ್ಲಿನ ಪರಿಮಳ ಮತ್ತು ರುಚಿಗೂ ಪುದಿನ ಬಳಕೆಯಾಗುತ್ತೆ. ಈ ಬಾರಿಯ ತೋಟಗಾರಿಕೆ ಮೇಳದಲ್ಲಿ ನಾಲ್ಕು ಬಗೆಯ ಪುದಿನ ತಳಿಗಳನ್ನ ಪ್ರದರ್ಶನಕ್ಕೆ ಇಡಲಾಗಿದ್ದು, ನಾಲ್ಕು ಪುದಿನ ತಳಿಗಳು ಬಣ್ಣ, ರುಚಿ , ವಾಸನೆಯಲ್ಲೂ ವಿಭಿನ್ನವಾಗಿದ್ದವು.
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ನಾಲ್ಕು ವಿಧದ ಪುದಿನ ತಳಿಗಳಾದ, ವಿಲಾಯತ್ರಿ ಪುದಿನ (ಪೇಪರ್ ಮಿಂಟ್) , ಪುದಿನ ( ಗಾರ್ಡನ್ ಮಿಂಟ್), ಜಪಾನಿ ಪುದಿನ , ಬೆಟ್ಟದ ಪುದಿನ (ಸ್ಪಿಯರ್ ಮಿಂಟ್ ) ಗಮನ ಸೆಳೆದವು.
ಪುದಿನವನ್ನು ಪ್ರಮುಖವಾಗಿ ಔಷಧಿ ಸಸ್ಯವಾಗಿ ಮತ್ತು ಅಡುಗೆಯಲ್ಲೂ ಬಳಸಲಾಗುತ್ತದೆ. ವಿಲಾಯತ್ರಿ ಪುದಿನ ಮೆಂಥಲ್ ಫ್ಲೇವರ್ ಹೊಂದಿದ್ದು, ಟೂತ್ ಪೇಸ್ಟ್ ಮತ್ತು ಸಾಬುನೂ ತಯಾರಿಕೆಯಲ್ಲಿ ಸುವಾಸನೆಗಾಗಿ ಬಳಸಲಾಗುತ್ತದೆ. ಪುದಿನ (ಗಾರ್ಡನ್ ಪುದಿನ ) ಆಡುಗೆಗೆ ಬಳಸುವ ಪುದಿನವಾಗಿದೆ. ಬೆಟ್ಟದ ಪುದಿನ ಮತ್ತು ಜಪಾನಿ ಪುದಿನ ಸಹ ಸುವಾಸನೆಗೆ ಬಳಸಲಾಗುತ್ತದೆ. ನಾಲ್ಕು ಪುದಿನ ತಳಿಗಳಲ್ಲಿ ಔಷಧಿಯ ಗುಣಗಳಿದ್ದು ಜಿರ್ಣಕ್ರಿಯೆಗೆ ಸಹಾಯ ಮಾಡತ್ತವೆ. ಹಾಗೆಯೇ ದೇಹಕ್ಕೆ ತಂಪುಕಾರಿಯಾಗಿ ಕೆಲಸ ಮಾಡಲಿದೆ.