ದೇವನಹಳ್ಳಿ: ಲಗೇಜ್ ಬ್ಯಾಗ್ನಲ್ಲಿ ಮರೆಮಾಚಿ ವಿದೇಶಿ ಇ-ಸಿಗರೇಟ್ ಸ್ಮಗ್ಲಿಂಗ್ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯಿಂದ 16 ಲಕ್ಷ ಮೌಲ್ಯದ 84 ಸಿಗರೇಟ್ ಪ್ಯಾಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಆಗಸ್ಟ್ 27 ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನನ್ನ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಇ ಸಿಗರೇಟ್ ಸ್ಮಗ್ಲಿಂಗ್ ಪ್ರಕರಣ ಪತ್ತೆಯಾಗಿದೆ.
ಬಂಧಿತ ಆರೋಪಿ ಲಗೇಜ್ ಬ್ಯಾಗ್ನಲ್ಲಿ ಮರೆಮಾಚಿ ವಿದೇಶಿ ಇ ಸಿಗರೇಟ್ ಅಕ್ರಮ ಕಳ್ಳಸಾಗಾಣಿಕೆಯ ಯತ್ನ ನಡೆಸಿದ್ದಾನೆ. ಇದರಲ್ಲಿ ಒಟ್ಟು 16. 38 ಲಕ್ಷ ಮೌಲ್ಯದ 84 ಇ-ಸಿಗರೇಟ್ ಪ್ಯಾಕ್ನಲ್ಲಿದ್ದ 840 ಇ-ಸಿಗರೇಟ್ಗಳನ್ನ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಮುಂದುವರೆದಿದೆ.
ಓದಿ: ಮೈ ಶುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕ್ರಮ : ಶಂಕರ್ ಬಿ ಪಾಟೀಲ್ ಮುನೇನಕೊಪ್ಪ