ETV Bharat / state

ಟೈರ್ ಗೋದಾಮಿಗೆ ಬೆಂಕಿ... ಅಗ್ನಿಶಾಮಕ ದಳದ ಮಿಂಚಿನ ಕಾರ್ಯಾಚರಣೆ ತಪ್ಪಿದ ಭಾರಿ ಅನಾಹುತ - ಬೆಂಕಿ

ಟಾಫೆ ಟ್ರ್ಯಾಕ್ಟರ್ ಟೈರ್ ಗೋದಾಮು ನಗರದ ಭರತ್ ಗೆ ಸೇರಿದ್ದು, ಗೋದಾಮಿನಲ್ಲಿ ಸುಮಾರು 2000 ಟೈರ್ ಸಂಗ್ರಹ ಇತ್ತು. ಸದ್ಯ ಬೆಂಕಿ ಅವಘಡದಲ್ಲಿ 1000 ಟೈರ್​ಗಳು ಸುಟ್ಟು ಕರಕಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಟೈರ್ ಗೋದಾಮಿಗೆ ಬೆಂಕಿ
author img

By

Published : May 9, 2019, 3:28 PM IST

ದೊಡ್ಡಬಳ್ಳಾಪುರ: ನಗರದ ಹೊರವಲಯದ ರೈಲ್ವೆ ಸ್ಟೇಷನ್ ಸಮೀಪದ ಟಾಫೆ ಟ್ರ್ಯಾಕ್ಟರ್ ಟೈರ್ ಗೋದಾಮಿನಲ್ಲಿ ಇಂದು ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಟೈರ್​ಗಳು ಸುಟ್ಟು ಕರಕಲಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಟಾಫೆ ಟ್ರ್ಯಾಕ್ಟರ್ ಕಂಪನಿ ಆವರಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮುಂಜಾನೆ ಸುಮಾರು 2 ಗಂಟೆಯ ಸಮಯದಲ್ಲಿ ಟೈರ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸೆಕ್ಯೂರಿಟಿ ಗಾರ್ಡ್ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

2000 ಟ್ರ್ಯಾಕ್ಟರ್ ಬೆಂಕಿಯಿಂದ ಪಾರು:

ಟಾಫೆ ಕಂಪನಿ ಕೃಷಿಯಲ್ಲಿ ಬಳಕೆಯಾಗುವ ಟ್ರ್ಯಾಕ್ಟರ್ ತಯಾರಿಸುವ ಕಂಪನಿಯಾಗಿದ್ದು, ಇಲ್ಲಿ ತಯಾರಾದ ಟ್ರ್ಯಾಕ್ಟರ್​ಗಳನ್ನು ದೇಶದ ವಿವಿಧ ಭಾಗಗಳಿಗೆ ರವಾನೆ ಮಾಡಲಾಗುತ್ತದೆ. ಬೆಂಕಿ ಅನಾಹುತ ಸಂಭವಿಸಿದ ವೇಳೆ ಕಂಪನಿಯ ಆವರಣದಲ್ಲಿ 2000 ಟ್ರ್ಯಾಕ್ಟರ್ ಇದ್ದು, ಒಂದು ವೇಳೆ ಟ್ರ್ಯಾಕ್ಟರ್​ಗಳಿಗೆ ಬೆಂಕಿ ತಗುಲಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು.

ಟೈರ್ ಗೋದಾಮಿಗೆ ಬೆಂಕಿ

ಸಕಾಲಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ ಅಗ್ನಿಶಾಮಕ ದಳದಿಂದ 2000 ಟ್ರ್ಯಾಕ್ಟರ್ ಬೆಂಕಿಯಿಂದ ಪಾರಾಗಿವೆ.

ಗೋದಾಮು ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್:

ಟಾಫೆ ಟ್ರ್ಯಾಕ್ಟರ್ ಕಂಪನಿ ಟೈರ್ ಗೋದಾಮಿನ ಗೋಡೆಗೆ ಅಂಟಿಕೊಂಡಿರುವಂತೆ ಮಮತಾ ಪೆಟ್ರೋಲ್ ಬಂಕ್ ಇದ್ದು, ಬೆಂಕಿಯ ಜ್ವಾಲೆಗಳು ಒಂದು ವೇಳೆ ಪೆಟ್ರೋಲ್ ಬಂಕ್​ಗೆ ತಗುಲಿದ್ದರೇ ಸಂಭವನೀಯ ಅನಾಹುತವನ್ನು ಯಾರು ಸಹ ನಿರೀಕ್ಷೆ ಮಾಡಲಾಗುತ್ತಿರಲಿಲ್ಲ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಭಾರಿ ಅನಾಹುತವನ್ನು ತಪ್ಪಿಸುವ ದೃಷ್ಟಿಯಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸೇರಿದಂತೆ ಒಟ್ಟು 7 ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿಕೊಂಡು ಪೆಟ್ರೋಲ್ ಬಂಕ್​ಗೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಿದರು. ನಂತರ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ:

ಟಾಫೆ ಟ್ರ್ಯಾಕ್ಟರ್ ಟೈರ್ ಗೋದಾಮು ನಗರದ ಭರತ್ ರವರಿಗೆ ಸೇರಿದ್ದು, ಗೋದಾಮಿನಲ್ಲಿ ಸುಮಾರು 2000 ಟೈರ್ ಸಂಗ್ರಹ ಇತ್ತು. ಸದ್ಯ ಬೆಂಕಿ ಅವಘಡದಲ್ಲಿ 1000 ಟೈರ್​ಗಳು ಸುಟ್ಟು ಕರಕಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Intro:
ಟಾಫೆ ಟ್ರ್ಯಾಕ್ಟರ್ ಕಂಪನಿಯ ಟೈರ್ ಗೋಡನ್ ಗೆ ಬೆಂಕಿ

ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಯಿಂದ ತಪ್ಪಿದ ಭಾರೀ ಅನಾಹುತ.

ಗೋಡನ್ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಮತ್ತು ಎರಡು ಸಾವಿರ ಟ್ರ್ಯಾಕ್ಟರ್ ಬೆಂಕಿ ಅವಘಡದಿಂದ ಪಾರು.

Body:ದೊಡ್ಡಬಳ್ಳಾಪುರ : ನಗರದ ಹೊರವಲಯದ ರೈಲ್ವೆ ಸ್ಟೇಷನ್ ಸಮೀಪದ ಟಾಫೆ ಟ್ರ್ಯಾಕ್ಟರ್ ಟೈರ್ ಗೋದಾಮಿನಿಲ್ಲಿ ಗುರುವಾರ ಬೆಳಗ್ಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಟೈರ್ ಗಳು ಸುಟ್ಟು ಕರಕಲಾಗಿವೆ. ಯಾವುದೇ ಸಾವು ನೋವು ಸಂಭವಿಸಿಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಟಾಫೆ ಟ್ರ್ಯಾಕ್ಟರ್ ಕಂಪನಿಯ ಆವರಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮುಂಜಾನೆ ಸುಮಾರು ಎರಡು ಗಂಟೆಯ ಸಮಯದಲ್ಲಿ ಟೈರ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸೆಕ್ಯೂರಿಟಿ ಗಾರ್ಡ್ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಮೂರು ಘಟನೆಗಳ ಕಾರ್ಯಚಾರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಫೆ ಕಂಪನಿಯ ಅವರಣದಲ್ಲಿದ್ದ ಎರಡು ಸಾವಿರ ಟ್ರ್ಯಾಕ್ಟರ್ ಬೆಂಕಿಯಿಂದ ಪಾರು

ಟಾಫೆ ಕಂಪನಿ ಕೃಷಿಯಲ್ಲಿ ಬಳಕೆಯಾಗುವ ಟ್ರ್ಯಾಕ್ಟರ್ ತಯಾರಿಸುವ ಕಂಪನಿಯಾಗಿದ್ದು. ಇಲ್ಲಿ ತಯಾರಾದ ಟ್ರ್ಯಾಕ್ಟರ್ ಗಳನ್ನು ದೇಶದ ವಿವಿಧ ಭಾಗಗಳಿಗೆ ರವಾನೆ ಮಾಡುತ್ತೆ. ಬೆಂಕಿ ಅನಾಹುತ ಸಂಭವಿಸಿದ ವೇಳೆ ಕಂಪನಿಯ ಆವರಣದಲ್ಲಿ ಎರಡು ಸಾವಿರ ಟ್ರ್ಯಾಕ್ಟರ್ ಇದ್ದು ಒಂದು ವೇಳೆ ಟ್ರ್ಯಾಕ್ಟರ್ ಗಳಿಗೆ ಬೆಂಕಿ ತಗುಲಿದ್ದಲ್ಲಿ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಸಕಾಲಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ ಅಗ್ನಿಶಾಮಕ ದಳದಿಂದ ಎರಡು ಸಾವಿರ ಟ್ರ್ಯಾಕ್ಟರ್ ಬೆಂಕಿಯಿಂದ ಪರಾಗಿವೆ.

ಗೋದಾಮು ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಅತಂಕದಲ್ಲಿಯೇ ಇದ್ದ ಜನ.

ಟಾಫೆ ಟ್ರ್ಯಾಕ್ಟರ್ ಕಂಪೆನಿ ಟೈರ್ ಗೋದಾಮಿನ ಗೋಡೆಗೆ ಅಂಕುಡೊಂಡಿರುವಂತೆ ಮಮತಾ ಪೆಟ್ರೋಲ್ ಬಂಕ್ ಇತ್ತು. ಬೆಂಕಿಯ ಜ್ವಾಲೆಗಳು ಒಂದು ವೇಳೆ ಪೆಟ್ರೋಲ್ ಬಂಕ್ ಗೆ ತಗುಲಿದ್ದಾರೆ. ಸಂಭವನೀಯ ಅನಾಹುತವನ್ನು ಯಾರು ಸಹ ನಿರೀಕ್ಷೆ ಮಾಡದ ರೀತಿಯಲ್ಲಿ ಅವಘಡ ಸಂಭವಿಸುತ್ತಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂಭವನೀಯ ಅನಾಹುತವನ್ನು ತಪ್ಪಿಸುವ ಕಾರಣಕ್ಕೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ಚಿಕ್ಕಬಳ್ಳಾಪುರ. ಬೆಂಗಳೂರು ಸೇರಿದಂತೆ ಒಟ್ಟು 7 ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿಕೊಂಡು ಪೆಟ್ರೋಲ್ ಬಂಕ್ ಗೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಿದರು. ಸತತ ಮೂರು ಗಂಟೆಗಳ ಕಾರ್ಯಚಾರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.

ಬೆಂಕಿಗಾಹುತಿಯಾದ ಟ್ರ್ಯಾಕ್ಟರ್ ಗಳ ಸಾವಿರ ಟೈರ್ ಗಳು.

ಟೈರ್ ಗೋದಾಮು ದೊಡ್ಡಬಳ್ಳಾಪುರದ ಭಾರತ್ ರವರಿಗೆ ಸೇರಿದ್ದು . ಗೋದಾಮಿನಲ್ಲಿ ಸುಮಾರು ಎರಡು ಸಾವಿರ ಟೈರ್ ಸಂಗ್ರಹ ಇದ್ದು. ಬೆಂಕಿ ಅವಘಠದಲ್ಲಿ ಒಂದು ಸಾವಿರ ಟೈರ್ ಗಳು ಸುಟ್ಟು ಕರಕಲಾಗಿವೆ. ಅಂದಾಜು ಕೋಟಿಗಟ್ಟಲೆ ಮೌಲ್ಯದ ವಸ್ತುಗಳು ನಷ್ಟವಾಗಿದೆ.

1-ಬೈಟ್, ದೇವರಾಜು. ಪ್ರಾದೇಶಿಕ ವಲಯ ಅಗ್ನಿಶಾಮಕ ದಳದ ಅಧಿಕಾರಿ.

2_ ಪುರುಷೋತ್ತಮ್. ಸ್ಥಳೀಯ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.