ETV Bharat / state

'ನಮ್ಮ ಕಾಲೋನಿಯನ್ನು ಮೀಸಲು ಕ್ಷೇತ್ರ ಮಾಡಿ... ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ' - ಪಾಲ್ ಪಾಲ್ ದಿನ್ನೆ ಕಾಲೋನಿ ನಿವಾಸಿಗಳು

ಪ್ರತಿ ಬಾರಿಯ ಗ್ರಾಮ ಪಂಚಾಯತ್​ ಚುನಾವಣೆಯಲ್ಲೂ ಸಾಮಾನ್ಯ ಕ್ಷೇತ್ರವಾಗಿರುತ್ತದೆ. ಸಾಮಾನ್ಯ ಅಭ್ಯರ್ಥಿಯ ಜೊತೆ ಸ್ಪರ್ಧಿಸುವ ಆರ್ಥಿಕ ಬಲ ಮತ್ತು ಧೈರ್ಯ ಸಹ ಈ ಕಾಲೋನಿ ಜನರಿಗಿಲ್ಲವಂತೆ.

pal-pal-dinne-colony-residents
pal-pal-dinne-colony-residents
author img

By

Published : Dec 15, 2020, 10:31 PM IST

ದೊಡ್ಡಬಳ್ಳಾಪುರ: ಗ್ರಾಮ ಪಂಚಾಯತ್ ಚುನಾವಣೆ ಪ್ರಾರಂಭವಾದ ದಿನದಿಂದ ಈ ಕಾಲೋನಿ ಒಮ್ಮೆಯೂ ಮೀಸಲು ಕ್ಷೇತ್ರವಾಗಿಲ್ಲ. ಸಾಮಾನ್ಯ ಅಭ್ಯರ್ಥಿ ಜೊತೆ ಸ್ಪರ್ಧಿಸಲಾಗದ ಪರಿಶಿಷ್ಟ ಜನಾಂಗದ ಕಾಲೋನಿ ನಿವಾಸಿಗಳು ಮೀಸಲು ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದು, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ನಿವಾಸಿಗಳು

ದೊಡ್ಡಬಳ್ಳಾಪುರ ತಾಲೂಕಿನ ಎಸ್​ಎಸ್​ ಘಾಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪುಟ್ಟ ಕಾಲೋನಿ ಪಾಲ್ ಪಾಲ್ ದಿನ್ನೆ. ಸುಮಾರು 80 ಮನೆಗಳಿರುವ ಈ ಕಾಲೋನಿಯಲ್ಲಿ 200ಕ್ಕೂ ಹೆಚ್ಚು ಮತದಾರರಿದ್ದಾರೆ. ಅದರಲ್ಲೂ 80 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿವೆ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದ ಸನಿಹವೇ ಇರುವ ಈ ಗ್ರಾಮಕ್ಕೆ ಪಂಚಾಯತ್​ ಚುನಾವಣೆ ಪ್ರಾರಂಭವಾದ 1992ರ ಚುನಾವಣೆಯಿಂದ ಇಲ್ಲಿಯವರೆಗೂ ಒಮ್ಮೆಯೂ ಮೀಸಲು ಕ್ಷೇತ್ರವಾಗಿಲ್ಲವಂತೆ ಈ ಕಾಲೋನಿ.

ಪ್ರತಿ ಬಾರಿಯ ಗ್ರಾಮ ಪಂಚಾಯತ್​ ಚುನಾವಣೆಯಲ್ಲೂ ಸಾಮಾನ್ಯ ಕ್ಷೇತ್ರವಾಗಿರುತ್ತದೆ. ಸಾಮಾನ್ಯ ಅಭ್ಯರ್ಥಿಯ ಜೊತೆ ಸ್ಪರ್ಧಿಸುವ ಆರ್ಥಿಕ ಬಲ ಮತ್ತು ಧೈರ್ಯ ಸಹ ಈ ಕಾಲೋನಿ ಜನರಿಗಿಲ್ಲ. ತಮ್ಮ ಕಾಲೋನಿಯ ಸಮಸ್ಯೆಗಳಿಗೆ ಧ್ವನಿಯಾಗುವ ತಮ್ಮದೇ ಜನಾಂಗದ ಅಭ್ಯರ್ಥಿಯನ್ನು ಆರಿಸುವ ಸೌಲಭ್ಯದಿಂದ ಪದೇ ಪದೆ ವಂಚಿತರಾಗುತ್ತಿದ್ದಾರೆ. ಹಾಗಾಗಿ ತಮ್ಮ ಕಾಲೋನಿಯನ್ನು ಮೀಸಲು ಕ್ಷೇತ್ರ ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಈ ಬಾರಿಯ ಗ್ರಾಮ ಪಂಚಾಯತ್​ ಚುನಾವಣೆಗೆ ಗ್ರಾಮಸ್ಥರು ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಪಾಲ್ ಪಾಲ್ ದಿನ್ನೆ ಕಾಲೋನಿ ನಿವಾಸಿಗಳ ಪ್ರಮುಖ ನಿವೇಶನ, ಕುಟುಂಬಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಇಕ್ಕಾಟ್ಟಾದ ಸ್ಥಳಗಳಲ್ಲಿಯೇ ಕಳೆದ 40 ವರ್ಷಗಳಿಂದ ವಾಸವಾಗಿದ್ದಾರೆ. ಗ್ರಾಮದ ಪಕ್ಕದಲ್ಲಿನ ಸರ್ವೆ ನಂಬರ್ 135ರಲ್ಲಿ 5 ಎಕರೆ 20 ಗುಂಟೆ ಸರ್ಕಾರಿ ಗೋಮಾಳ ಇದೆ. ಈ ಜಾಗದಲ್ಲಿ ನಿವೇಶನ ಕೊಡುವಂತೆ ಆಗ್ರಹಿಸಿದ್ದಾರೆ. ಆದರೆ ಕಾಲೋನಿ ನಿವಾಸಿಗಳ ಬಹು ದಿನಗಳ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ಸಹ ನೀಡಿಲ್ಲವಂತೆ ಎಸ್.ಎಸ್.​ ಘಾಟಿ ಪಂಚಾಯತ್. ಒಂದು ವೇಳೆ ತಮ್ಮದೇ ಕಾಲೋನಿಯ ಜನಪ್ರತಿನಿಧಿ ಇದ್ದಿದ್ದರೆ ನಿವೇಶನಕ್ಕಾಗಿ ಪಟ್ಟು ಹಿಡಿದು ಕೇಳಬಹುದಿತ್ತು. ತಮ್ಮ ಜನಾಂಗದವರು ಪಂಚಾಯತ್​ ಸದಸ್ಯರಾಗಿಲ್ಲದೆ ಇರುವುದರಿಂದ ತಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ ಅಂತಾರೆ ನಿವಾಸಿಗಳು.

ಕೆಲವು ಮಂದಿ ಹಳೇ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ಕಟ್ಟಲು ಮುಂದಾಗಿದ್ದಾರೆ. ಆದರೆ ಮನೆ ಕಟ್ಟುವ ಗ್ರ್ಯಾಂಟ್​ ಸಹ ಬಿಡುಗಡೆ ಮಾಡಿಲ್ಲ. ಮನೆ ಇಲ್ಲದೆ ಸಂಬಂಧಿಕರ ಮನೆಯಲ್ಲಿ ವಾಸವಾಗಿರಬೇಕಾದ ಪರಿಸ್ಥಿತಿ ಇದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.