ದೊಡ್ಡಬಳ್ಳಾಪುರ: ತಾಲೂಕಿನ ಕರೇನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ವೃದ್ಧೆಯೊಬ್ಬರು ಹೊಂಗೆಕಾಯಿ ಆಯುತ್ತಿದ್ದರು, ಇದೇ ಸಮಯದಲ್ಲಿ ಹೊಂಗೆಕಾಯಿ ಉದುರಿಸುವ ನೆಪದಲ್ಲಿ ವೃದ್ಧೆಯ ಸಹಾಯಕ್ಕೆ ಬಂದ ದುಷ್ಕರ್ಮಿಗಳು ವೃದ್ದೆಯ ಬಾಯಿಗೆ ಬಟ್ಟೆ ತುರುಕಿ ಆಕೆಯ ಮಾಂಗಲ್ಯ ಸರ ಸೇರಿದಂತೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕರೇನಹಳ್ಳಿಯಲ್ಲಿ ಮಾರ್ಚ್ 9 ರಂದು ಘಟನೆ ನಡೆದಿದ್ದು, ಘಟನೆಯಲ್ಲಿ ಸುಮಾರು 72 ವರ್ಷದ ವೃದ್ಧೆ ನಾರಾಯಣಮ್ಮ, ತಮ್ಮ ಮಾಂಗಲ್ಯ ಸರ, 2 ಲಕ್ಷ್ಮಿ ಕಾಸು, ಕರಿಮಣಿ, ಚಿನ್ನದ ಗುಂಡುಗಳನ್ನ ಕಳೆದು ಕೊಂಡಿದ್ದಾರೆ.
ಘಟನೆ ಹಿನ್ನಲೆ : ವೃದ್ದೆ ನಾರಾಯಣಮ್ಮ ಪ್ರತಿದಿನ ತನ್ನ ಬಳಿ ಇದ್ದ ಮೂರು ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರವಲಯದ ಜಮೀನಿನ ಬಳಿ ಬರುತ್ತಿದ್ದರು. ಇದೇ ವೇಳೆ ಹೊಂಗೆಮರದಡಿ ಬೀಳುವ ಕಾಯಿಗಳನ್ನು ಆಯ್ದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಕಳ್ಳರು ‘‘ಏನ್ ಅಜ್ಜಿ ಇವತ್ತು ಮೇಕೆ ಹೊಡೆದುಕೊಂಡು ಬಂದಿಲ್ಲ’’ ಎಂದು ಅಜ್ಜಿಯನ್ನು ಮಾತಿಗಿಳಿಸಿದ್ದಾರೆ. ಅಜ್ಜಿಯನ್ನು ಮಾತಿನ ಬಲೆಗೆ ಬೀಳಿಸಿ ಒಳ್ಳೆಯ ಹುಡುಗರಂತೆ ನಟಿಸಿ ಅಜ್ಜಿಯ ಮನ ಗೆದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ಕೃತ್ಯವನ್ನು ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ : ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಮಹಿಳೆಯ ಶವ ಪತ್ತೆ!
ದುಬಾರಿ ಫೋನ್ಗಳನ್ನು ಕದ್ದು ಪರಾರಿಯಾಗಿದ್ದ ಖದೀಮರ ಬಂಧನ: ಐಫೋನ್‌ಗಳಿದ್ದ ಪಾರ್ಸೆಲ್ ಸಮೇತ ಪರಾರಿಯಾಗಿದ್ದ ಇಬ್ಬರು ಡಿಲವರಿ ಬಾಯ್ಸ್ ಅನ್ನು ಕೇಂದ್ರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಸವರಾಜ ಹಾಗೂ ಮಾಳಪ್ಪ ಬಂಧಿತ ಆರೋಪಿಗಳು. ಬಂಧಿತರಿಂದ 6.5 ಲಕ್ಷ ಮೌಲ್ಯದ 6 ಐಫೋನ್, 2 ಆ್ಯಪಲ್ ವಾಚ್, ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಬಳಸಿದ್ದ 4 ಮೊಬೈಲ್, 4 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಸ್ಲೀಂ ಆರೀಫ್ ಎಂಬುವವರು ರವಾನಿಸಿದ್ದ ಆರು ಐಫೋನ್ ಹಾಗೂ ಆ್ಯಪಲ್ ವಾಚ್ ಸಮೇತ ಆರೋಪಿಗಳು ಪರಾರಿಯಾಗಿದ್ದರು. ನಕಲಿ ದಾಖಲಾತಿ, ಆಧಾರ್ ಕಾರ್ಡುಗಳನ್ನು ನೀಡಿ ಬೇರೆ ಬೇರೆ ಹೆಸರುಗಳಲ್ಲಿ ಡಂಜೋದಲ್ಲಿ ಕೆಲಸ ಗಿಟ್ಟಿಸಿದ್ದ ಆರೋಪಿಗಳು, ಗ್ರಾಹಕರು ರವಾನಿಸುವ ದುಬಾರಿ ವಸ್ತುಗಳನ್ನು ಡಿಲೆವರಿ ನೀಡದೇ, ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಕೂಟರ್ ಕದ್ದ ಖದೀಮ: ಸೈಕಲ್ ಮೇಲೆ ಬಂದು ಸ್ಕೂಟರ್ ಕದ್ದೊಯ್ದ ಘಟನೆ ಧಾರವಾಡದ ಡಿಪೋ ಸರ್ಕಲ್ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮಧ್ಯರಾತ್ರಿ ಸೈಕಲ್ ಮೇಲೆ ಬಂದಿರುವ ಖದೀಮನೋರ್ವ ಮಲ್ಲೇಶಪ್ಪ ನೂಲ್ವಿ ಎಂಬುವವರ ಮನೆ ಮುಂದಿಟ್ಟ ಎಕ್ಸೆಲ್ ಸ್ಕೂಟರ್ ಕದ್ದು ಪರಾರಿಯಾಗಿದ್ದಾನೆ.
ಇದನ್ನೂ ಓದಿ : ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆರೋಪ: ಮಾಜಿ ಸಚಿವರ ಪುತ್ರನ ವಿರುದ್ಧ ಎಫ್ಐಆರ್